ಪಟ್ನಾ(ನ.26): ಸಿಎಂ ನಿತೀಶ್ ಕುಮಾರ್ ಅವರ ವಿಚಿತ್ರ ಅಭಿಮಾನಿಯೊಬ್ಬ ತನ್ನ ನಾಲ್ಕನೇ ಬೆರಳನ್ನು ತನ್ನ ನೆಚ್ಚಿನ ನಾಯಕನ ಗೆಲುವಿಗಾಗಿ ಕತ್ತರಿಸಿಕೊಂಡಿದ್ದಾನೆ. ಬಿಹಾರದ ಈ ಅಭಿಮಾನಿಯ ಒಂದು ಕೈಯಲ್ಲಿ 1 ಬೆರಳು ಮಾತ್ರ ಉಳಿದಿದೆ.

ನಾಲ್ಕನೇ ಬಾರಿ ನಿತೀಶ್ ಅವರು ಸಿಎಂ ಆದ ಖುಷಿಯಲ್ಲಿ ಈತ ಸ್ಥಳೀಯ ದೇವರಿಗೆ ತನ್ನ ಎಡ ಕೈಯ ನಾಲ್ಕನೇ ಬೆರಳನ್ನು ಕತ್ತರಿಸಿ ಅರ್ಪಿಸಿದ್ದಾನೆ. ಈತ 45 ವರ್ಷದ ಜೆಹನಾಬಾದ್ ಜಿಲ್ಲೆಯ ವೈನಾ ಗ್ರಾಮದ ವ್ಯಕ್ತಿಯಲ್ಲ. ಈ ವ್ಯಕ್ತಿ ಸ್ಥಳೀಯ ಗೋರಿಯಾ ಬಾಬಾಗೆ ನಿತೀಶ್ ಗೆದ್ದ ಖುಷಿಯಲ್ಲಿ ತನ್ನ ಬೆರಳನ್ನು ಅರ್ಪಿಸಿದ್ದ.

ಸಿಎಂ ನಿತೀಶ್ ಕುಮಾರ್ ಗೆದ್ದ ಖುಷಿಗೆ ಬೆರಳನ್ನೇ ಕತ್ತರಿಸಿ ಬಲಿ ಅರ್ಪಿಸಿದ ವ್ಯಕ್ತಿ!

ಶರ್ಮಾ ತನ್ನ ಕೈ ಬೆರಳನ್ನು ಕತ್ತರಿಸಿ ಗೋರಿಯಾ ಬಾಬಾಗೆ ಅರ್ಪಿಸಿದ್ದಾನೆ. ಗ್ರಾಮದ ದೇವಾಲಯಕ್ಕೆ ಬಂದು ಕೈಬೆರಳು ಅರ್ಪಿಸಿ ನಿತೀಶ್‌ಗೆ ಆಶಿರ್ವದಿಸುವಂತೆ ಕೇಳಿದ್ದಾನೆ ಎಂದು ಕಾಕೋ ನಿವಾಸಿ ತಿಳಿಸಿದ್ದಾರೆ.

ಚೆನ್ನೈನ ಗಾರ್ಡನ್‌ನಲ್ಲಿ ಕೆಲಸ ಮಾಡುವ ಶರ್ಮಾ ಇತ್ತೀಚೆಗಿನ ವಿಧಾನಸಭಾ ಚುನಾವಣೆ ನಂತರ ಮನೆಗೆ ಬಂದಿದ್ದರು. ನಿತೀಶ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಕೈಬೆರಳು ಕತ್ತರಿಸೋದಾಗಿ ಹರಕೆ ಹೊತ್ತುಕೊಂಡಿದ್ದಾರೆ ಶರ್ಮಾ.

ನಿತೀಶ್ ಸರ್ಕಾರ ಕೆಡವಲು ಜೈಲಿನಿಂದಲೇ ಲಾಲು ಆಪರೇಷನ್!

ಬಿಹಾರದಲ್ಲಿ ಅಭಿವೃದ್ಧಿ ತರಲು ನಿತೀಶ್‌ಗೆ ಮಾತ್ರ ಸಾಧ್ಯ ಎಂದು ನಂಬುತ್ತಾರೆ ಅಲಿ ಬಾಬಾ ಎಂದೇ ಕರೆಯಲ್ಪಡುವ ಶರ್ಮಾ. 2005ರಿಂದ ನಿತೀಶ್ ಸಿಎಂ ಆದಾಗ ಪ್ರತಿಬಾರಿ ಬೆರಳು ಕತ್ತರಿಸಿ ಸಮರ್ಪಿಸಿದ್ದಾರೆ ಶರ್ಮಾ.