ಸಿಎಂ ನಿತೀಶ್ ಕುಮಾರ್ ಗೆದ್ದ ಖುಷಿಗೆ ಬೆರಳನ್ನೇ ಕತ್ತರಿಸಿ ಬಲಿ ಅರ್ಪಿಸಿದ ವ್ಯಕ್ತಿ!
First Published Nov 24, 2020, 3:42 PM IST
ನಿತೀಶ್ ಕುಮಾರ್ ಅಭಿಮಾನಿಯೊಬ್ಬ ತನ್ನ ನಾಯಕ ಗೆದ್ದ ಖುಷಿಗೆ ತನ್ನ ಕೈಗಳ ಬೆರಳುಗಳನ್ನು ಒಂದೊಂದಾಗೇ ಗೌರೆಯಾ ಬಾಬಾಗೆ ಬಲಿ ನೀಡಿದ್ದಾನೆ. ಇಂತಹ ಅಭಿಮಾನ ನೋಡಲು ಸಿಗುವುದು ಬಹಳ ಅಪರೂಪ. ಮಾಧ್ಯಮ ವರದಿಗಳನ್ವಯ ಆ ವ್ಯಕ್ತಿ ನವೆಂಬರ್ 16ರಂದು ತನ್ನ ನಾಲ್ಕನೇ ಬೆರಳನ್ನೂ ಅರ್ಪಿಸಿದ್ದಾನೆ. ಇಲ್ಲಿದೆ ನೋಡಿ ಈ ಹುಚ್ಚು ಅಭಿಮಾನಿಯ ಕತೆ.

ಅನಿಲ್ ಕುಮಾರ್ ಶರ್ಮಾ(ಅಲಿ ಬಾಬಾ ಜಹಾನಾಬಾದ್) ಘೋಸಿ ಠಾಣಾ ವ್ಯಾಪ್ತಿಯ ವೈನಾ ಹಳ್ಳಿಯ ನಿವಾಸಿ. 45 ವರ್ಷದ ಈತ 2005 ರಲ್ಲಿ ಮೊದಲ ಬಾರಿ ತನ್ನ ಬೆರಳು ಕತ್ತರಿಸಿ ಗೌರೆಯಾ ಬಾಬಾಗೆ ಅರ್ಪಿಸಿದ್ದಾನೆ. ಇದಾದ ಬಳಿಕದಿಂದ ಇದು ಮುಂದುವರೆದುಕೊಂಡೇ ಬಂದಿದೆ.

ಮಾಧ್ಯಮಗಳ ವರದಿಯನ್ವಯ ಅನಿಲ್ ಕುಮಾರ್ ಶರ್ಮಾ ಗೌರೆಯಾ ಬಾಬಾ ಬಳಿ ನಿತೀಶ್ ಕುಮಾರ್ ಗೆದ್ದು ಮುಖ್ಯಮಂತ್ರಿಯಾದರೆ ತನ್ನ ಒಂದು ಬೆರಳು ಬಲಿಯಾಗಿ ನೀಡುತ್ತೇನೆಂದು ಹರಕೆ ಹೊತ್ತುಕೊಂಡಿದ್ದ. ಹೀಗಿರುವಾಗ ನಿತೀಶ್ ಕುಮಾರ್ ಸಿಎಂ ಆದಾಗೆಲ್ಲಾ ಈ ವ್ಯಕ್ತಿ ತನ್ನ ಒಂದು ಬೆರಳನ್ನು ಗೌರೆಯಾ ಬಾಬಾಗೆ ಅರ್ಪಿಸುತ್ತಾ ಬಂದಿದ್ದಾನೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?