Asianet Suvarna News Asianet Suvarna News

ಮನೆಗ ಬಂದ ಹಸು, ಚಿಮ್ಮಿದ ನೀರು; ಕಾಮಧೇನು ಆಶೀರ್ವಾದದ ವೀಡಿಯೋ ವೈರಲ್!

ಉತ್ತಮ ಕೆಲಸ ಕಾರ್ಯಗಳಿಗೆ, ದೋಷ, ಸಂಕಷ್ಟಗಳ ನಿವಾರಣೆಗೆ ಗೋಮಾತೆ ಅನುಗ್ರಹ ಪಡೆಯುವುದು ಸಾಮಾನ್ಯ. ಹೀಗೆ ರೈತ ಕೊರೆಸಿದ ಬೋರ್‌ವೆಲ್ ಬಳಿ ಹಸು ಆಗಮಿಸುತ್ತಿದ್ದಂತೆ ನೀರು ಬಾನೆತ್ತರಕ್ಕೆ ಚಿಮ್ಮಿದೆ. ನೀರಿನ ಅಡಿಯಲ್ಲೇ ನಿಂತು ಗೋಮಾತೆಯ ಆಶೀರ್ವಾದ  ಪಡದ ವಿಡಿಯೋ ವೈರಲ್ ಆಗಿದೆ.
 

Family seek Blessings from Gau mata after borewell found enough water Video goes vrial ckm
Author
First Published Jun 12, 2024, 4:35 PM IST

ಹಿಂದೂ ಸಂಪ್ರದಾಯದಲ್ಲಿ ಗೋ ಮಾತೆ ಪೂಜೆಗೆ ವಿಶೇಷ ಸ್ಥಾನವಿದ.  ಗೃಹ ಪ್ರವೇಶ, ನಗಗೃಹ ಪೂಜೆ, ದೂಷ ನಿವಾರಣೆ, ಮಕರ ಸಂಕ್ರಾತಿ ಸೇರಿದಂತೆ ಎಲ್ಲಾ ಶುಭ ಸಂದರ್ಭ ಹಾಗೂ ಸಂಕಷ್ಟದ ವೇಳೆ ಗೋ ಮಾತೆಗೆ ಪೂಜೆ, ಆಹಾರ ನೀಡಿ ಆಶೀರ್ವಾದ ಪಡೆಯುವುದು ಸಾಮಾನ್ಯ. ಗೋ ಮಾತೆಯ ಆಶೀರ್ವಾದೊಂದಿಗೆ ಮುನ್ನಡೆದರೆ ಯಶಸ್ಸು ಸಿದ್ಧಿ ಅನ್ನೋ ಮಾತಿದೆ. ಇದೀಗ ಕುಟುಂಬವೊಂದು ಬೋರ್‌ವೆಲ್ ಕೊರೆಸುತ್ತಿದ್ದ ವೇಳೆ ಗೋಮಾತೆ ಆಗಮಿಸಿದೆ. ಕಾಮಧೇನು ಆಗಮಿಸುತ್ತಿದ್ದಂತೆ ಬೊರ್‌ವೆಲ್‌ನಿಂದ ನೀರು ಬಾನೆತ್ತರಕ್ಕೆ ಚಿಮ್ಮಿದೆ. ಮರು ಕ್ಷಣದಲ್ಲಿ ಇಡೀ ಸದಸ್ಯರು ಗೋಮಾತೆಗೆ ಅಡ್ಡಬಿದ್ದು ಆಶೀರ್ವಾದ ಪಡೆದ ವಿಡಿಯೋ ವೈರಲ್ ಆಗಿದೆ.

ನೀರಿಗಾಗಿ ಬೋರ್‌ವೆಲ್ ಕೊರೆಸುವುದು ಸುಲಭದ ಮಾತಲ್ಲ. ಕಾರಣ ಕೊರೆದ ಕೊಳವೆ ಬಾವಿಯಲ್ಲಿ ನೀರು ಸಿಗಬೇಕು. ಕೆಲವೊಮ್ಮೆ ಅದೆಷ್ಟೆ ಆಳ ಕೊರೆದರೂ ನೀರು ಸಿಗುವುದಿಲ್ಲ. ಪಕ್ಕದಲ್ಲೇ ನೀರಿನ ಝರಿ ಇದ್ದರೂ ಹೊಲ ಇಡೀ ಕೊಳವೆ ಬಾವಿ ಕೊರದರೂ ನೀರು ಸಿಗದ ಹಲವು ಉದಾಹರಣೆಗಳಿವೆ. ಪ್ರಮುಖವಾಗಿ ರೈತರು ಕೊಳವೆ ಬಾವಿ ಕೊರೆಸಿ ನೀರು ಸಿಕ್ಕಾಗ ಪಡುವ ಆನಂದಕ್ಕೆ ಎಲ್ಲೆಗಳಿರುವುದಿಲ್ಲ. ಹೀಗೆ ಕುಟುಂಬೊಂದು ಕೊಳವೆ ಬಾವಿ ಕೊರೆಯಲು ನಿರ್ಧರಿಸಿ ಎಲ್ಲಾ ತಯಾರಿ ಮಾಡಿಕೊಂಡಿದೆ.

ದೀಪಾವಳಿ ಸಂದರ್ಭದಲ್ಲಿ ಮಾಡುವಂತಹ ಗೋ ಪೂಜೆ ಮಹತ್ವವೇನು?

ಹಣ ಹೊಂದಿಸಿ ಅದೃಷ್ಟ ಪರೀಕ್ಷೆಗಿಳಿಯಲು ತಯಾರಾಗಿದೆ. ಕೊಳವೆ ಬಾವಿ ಕೊರೆಯುವ ಸ್ಥಳದಲ್ಲಿ ಪೂಜೆ ಸಲ್ಲಿಸಿ, ಗೋ ಮಾತೆಯ ಆಶೀರ್ವಾದ ಪಡೆದು ಬೋರ್‌ವೆಲ್ ಕಾರ್ಯಗಳು ಆರಂಭಗೊಂಡಿದೆ.  ಕೊಳವೆ ಬಾವಿ ಕೊರೆತ ಆರಂಭಗೊಂಡು ಕೆಲ ಹೊತ್ತಾದರು ನೀರಿನ ಸುಳಿವಿಲ್ಲ. ಕುಟುಬದಲ್ಲಿ ಆತಂಕ ಮನೆ ಮಾಡಿತ್ತು. 

 

 

ಶುಭಮಹೂರ್ತದಲ್ಲಿ ಕೊಳವೆ ಬಾವಿ ಕೊರೆಯುವ ಕಾರ್ಯ ಆರಂಭಗೊಂಡಿತ್ತು. ಕತ್ತಲಾದರೂ ನೀರು ಸಿಕ್ಕಿರಲಿಲ್ಲ.ಗೋ ಮಾತೆ ಮತ್ತೆ ಬೋರ್‌ವೆಲ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕೊಳವೆ ಬಾವಿಯಲ್ಲಿ ನೀರು ಬಾನೆತ್ತರಕ್ಕೆ ಚಿಮ್ಮಿದೆ. ಗೋಮಾತೆಯ ಆಗಮನದ ಬೆನ್ನಲ್ಲೇ ನೀರು ಸಿಕ್ಕ ಖುಷಿಯಲ್ಲಿ ಕುಟುಂಬ ತೇಲಾಡಿದೆ. ತಕ್ಷಣವೇ ಗೋಮಾತೆಗೆ ಅಡ್ಡ ಬಿದ್ದು ಆಶೀರ್ವಾದ ಪಡೆದಿದ್ದಾರೆ.  

ಹಿಡಿದ ಕೆಲಸದಲ್ಲಿ ಯಶಸ್ಸು ಸಿಗಬೇಕೆಂದರೆ ಹೀಗ್ ಗೋ ಸೇವೆ ಮಾಡಿ

ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಾಗಿದೆ. ನೀರು ಒಂದೇ ಸಮನೆ ಹರಿಯಲು ಆರಂಭಿಸಿದೆ. ಗೋಮಾತೆಯ ಆಶೀರ್ವಾದ ಪಡೆದ ಕುಟುಂಬ, ಸಿಹಿ ತಿನ್ನಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಸತಾನಧರ್ಮದ ಪ್ರತಿಯೊಂದು ಪದ್ಧತಿಯೂ ಪ್ರಕೃತಿ ಜೊತೆಗಿದೆ. ಪ್ರಕೃತಿ ಹಾಗೂ ಮಾನವನ ಅನ್ಯೋನ ಸಂಬಂಧವೇ ಸನಾತನ ಧರ್ಮದ ತಿರುಳು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios