ಹಾಲು ಕೊಡುವ ಹಸು ಜೀವನಕ್ಕೆ ಬೆಳಕು ನೀಡಬಲ್ಲದು. ದೇವಾನುದೇವತೆಗಳು ನೆಲೆಸಿರುವ ಗೋವಿನಲ್ಲಿ ಅಪಾರ ಶಕ್ತಿಯಿದೆ. ಅದರ ಸೇವೆನಯನ್ನು ಭಕ್ತಿಯಿಂದ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರತಿ ದಿನ ಬೆಳಿಗ್ಗೆ ಹಸುವಿಗೆ ಹುಲ್ಲು ಹಾಕಿದ್ರೂ ನಮ್ಮ ಜೀವನ ಹಸಿರಾಗಿರುತ್ತದೆ.
ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷ ಸ್ಥಾನವಿದೆ. ಇದನ್ನು ಕಾಮಧೇನು, ಗೋಮಾತೆ ಎಂದು ಪೂಜಿಸುತ್ತಾರೆ. ಆಕಳಿನಲ್ಲಿ ಮೂವತ್ತಮೂರು ಕೋಟಿ ದೇವತೆಗಳು ವಾಸವಿರುತ್ತಾರೆ ಎಂಬ ನಂಬಿಕೆ ಇದೆ. ಸಮುದ್ರ ಮಂಥನದ ಸಮಯದಲ್ಲಿ ಹೊರಹೊಮ್ಮಿದ 14 ರತ್ನಗಳಲ್ಲಿ ಕಾಮಧೇನು ಕೂಡ ಒಂದು. ಕೆಲವರು ಪ್ರತಿದಿನವೂ ಆಕಳಿಗೆ ಗೋಗ್ರಾಸವನ್ನು ಕೊಟ್ಟು ನಂತರ ತಾವು ಆಹಾರ ಸೇವಿಸುತ್ತಾರೆ. ಗೋವಿನ ಪೂಜೆಯಿಂದ ಅನೇಕ ಕಷ್ಟಗಳು ನಿವಾರಣೆಯಾಗುತ್ತದೆ. ಆಕಳ ಹಾಲು, ತುಪ್ಪ, ಗೋಮೂತ್ರ, ಸಗಣಿ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುವಂಥದ್ದೇ ಆಗಿದೆ. ಆರೋಗ್ಯ ದೃಷ್ಟಿಯಿಂದಲೂ ಕೂಡ ಇದು ಬಹಳ ಒಳ್ಳೆಯದು.
ಹಿಂದೂ (Hindu) ಗಳು ದೀಪಾವಳಿ (Diwali) ಯನ್ನು ಗೋವಿನ ಹಬ್ಬ ಎಂದೇ ಕರೆಯುತ್ತಾರೆ. ನಿತ್ಯ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ಅದು ಗೋವು. ಗೋವಿನ ಆರಾಧನೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ವೇದಗಳು ಸಹ ಹೇಳಿವೆ. ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ, ಮಹಾಭಾರತ (Mahabharata) ದಲ್ಲಿಯೂ ಕಾಮಧೇನುವಿನ ಶ್ರೇಷ್ಠತೆಯನ್ನು ವರ್ಣಿಸಿದ್ದಾರೆ. ಹಿಂದೆ ಮಹಾವಿಷ್ಣುವೂ ಕೂಡ ಯಾರು ಕಾಮಧೇನುವನ್ನು ಪೂಜಿಸುತ್ತಾರೋ ಅವರಿಗೆ ಅಷ್ಟೈಶ್ವರ್ಯಗಳೂ ಸಿಗಲಿ ಎಂದು ವರ ನೀಡಿದ್ದ. ಪುರಾಣ ಕಾಲದಲ್ಲಿಯೂ ಕೂಡ ರಾಜರು ಬೆಳ್ಳಿ ಅಥವಾ ಬಂಗಾರದಿಂದ ಮಾಡಿದ ಕಾಮಧೇನುವಿನ ಪೂಜೆ ಮಾಡುತ್ತಿದ್ದರು.
Astrology Tips: ಜೀವನದಲ್ಲಿ ಒಮ್ಮೆಯಾದ್ರೂ ಈ ದಾನ ಮಾಡಿ ಪುಣ್ಯ ಪಡೆಯಿರಿ
84 ಲಕ್ಷ ಯೋನಿಗಳನ್ನು ದಾಟಿದ ನಂತರ ಆತ್ಮವು ಕಡೆಯದಾಗಿ ಹಸುವಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಹಸುವಿಗೆ ಸಂಬಂಧಿಸಿದ ಕೆಲವು ಕ್ರಮಗಳನ್ನು ಅನುಸರಿಸಿದರೆ ಜೀವನದಲ್ಲಿ ಪಾಪಕರ್ಮಗಳು ನಾಶವಾಗಿ ಸಂತೋಷ, ಸಮೃದ್ಧಿ ಇರುತ್ತದೆ. ಈ ಎಲ್ಲ ಗುಣಗಳನ್ನು ಹೊಂದಿರುವ ಆಕಳನ್ನು ಪ್ರತಿದಿನ ಪೂಜಿಸಿದರೆ ಎಷ್ಟು ಲಾಭವಿದೆ, ಆಕಳನ್ನು ಹೇಗೆ ಪೂಜಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಬೆಳಿಗ್ಗೆ ಮಾಡಿ ಈ ಕೆಲಸ :
• ಮನೆಯಲ್ಲಿ ಬೆಳಿಗ್ಗೆ ತಯಾರಾದ ತಿಂಡಿಯನ್ನು ಮೊದಲು ಹಸುವಿಗೆ ನೀಡಬೇಕು. ಇದರಿಂದ ಹೆಚ್ಚು ಪುಣ್ಯ ಲಭ್ಯವಾಗುತ್ತೆ.
• ಸೋಮವಾರ ಬೆಳಿಗ್ಗೆ 4 ಗಂಟೆ 30 ನಿಮಿಷದಿಂದ 6 ಗಂಟೆಯ ಸಮಯದಲ್ಲಿ ಗೋವಿನ ವಿಗ್ರಹವನ್ನು ಮನೆಯ ನೈಋತ್ಯ ಮೂಲೆಯಲ್ಲಿಟ್ಟು ಪೂಜಿಸಬೇಕು. ಕಾಮಧೇನು ವಿಗ್ರಹವನ್ನು ಮಲ್ಲಿಗೆ ಹೂವುಗಳಿಂದ ಅಲಂಕರಿಸಿ ಗುಲಾಬಿ ನೀರು ಮತ್ತು ಹಾಲಿನಿಂದ ಅಭಿಷೇಕ ಮಾಡಬೇಕು. ನಂತ್ರ ದೂಪ ದೀಪಾರತಿಗಳ ಮೂಲಕ ಆಕಳ ಪೂಜೆ ಮಾಡಬಹುದು.
• ಮನೆ ಅಥವಾ ಕಚೇರಿಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಕಡಿಮೆ ಸಮಯದಲ್ಲಿಯೇ ನೀವು ಬದಲಾವಣೆಗಳನ್ನು ಕಾಣಬಹುದು.
• ಕಾಮಧೇನು ಪ್ರೀತಿ ವಾತ್ಸಲ್ಯದ ಪ್ರತೀಕವಾದ್ದರಿಂದ ಅದರ ಪೂಜೆಯಿಂದ ಮನೆಯಲ್ಲಿ ಪ್ರೀತಿ ಹೆಚ್ಚುತ್ತದೆ.
• ಕಾಮಧೇನುವಿನ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ.
• ಆಕಳ ಮೂರ್ತಿ ಮನೆಯ ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಇದರಿಂದ ಏಕಾಗ್ರತೆ ಮತ್ತು ಮಾನಸಿಕ ನೆಮ್ಮದಿ ದೊರೆಯುತ್ತದೆ.
• ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ಗೋವಿನ ಪೂಜೆ ಮಾಡಬೇಕು. ದಿನವೂ ಗೋವಿನ ಪೂಜೆ ಮಾಡುವುದರಿಂದ ಎಲ್ಲ ದೇವಾನುದೇವತೆಗಳ ಕೃಪೆ ನಿಮ್ಮ ಮೇಲಿರುತ್ತದೆ ಮತ್ತು ಮನೆಯಲ್ಲಿ ಧನ ಧಾನ್ಯದ ಕೊರತೆ ಎಂದೂ ಆಗುವುದಿಲ್ಲ.
Business Ideas: ಹಸುವಿನ ಸಗಣಿ ನೀಡ್ತಿದೆ ಕೈತುಂಬ ಹಣ
• ಪ್ರತಿ ದಿನ ಆಕಳಿನ ಪೂಜೆ ಮಾಡುವುದರಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಎಂದು ನಂಬಲಾಗಿದೆ. ಮನೆಗೆ ಸಂಪತ್ತನ್ನು ಸದಾ ನೆಲೆಸುವಂತಾಗುತ್ತದೆ.
• ಆಕಳಿಗೆ ಪ್ರತಿ ದಿನವೂ ಮೇವನ್ನು ನೀಡಬೇಕೆಂದು ಶಾಸ್ತ್ರಗಳು ಹೇಳಿವೆ. ಇದ್ರಿಂದ ಜೀವನದಲ್ಲಿ ಬರುವ ಸಮಸ್ಯೆಗಳೆಲ್ಲ ದೂರವಾಗುತ್ತದೆ.
• ಬುಧವಾರ ಹಸುವಿಗೆ ಹಸಿರು ಮೇವು, ಪಾಲಕ್ ಅಥವಾ ಹಸಿ ತರಕಾರಿಗಳನ್ನು ನೀಡಬೇಕು. ಇದ್ರಿಂದ ಎದುರಿಸುತ್ತಿರುವ ಸಂಕಷ್ಟಗಳು ನಿವಾರಣೆಯಾಗುತ್ತವೆ.
• ಮೊದಲೇ ಹೇಳಿದಂತೆ ಹಸುವಿನಲ್ಲಿ ದೇವಾನುದೇವತೆಗಳು ನೆಲೆಸಿವೆ. ನೀವು ಪ್ರತಿ ದಿನ ಹಸುವಿನ ಬೆನ್ನನ್ನು ತಿಕ್ಕುವುದರಿಂದ ಅನೇಕ ರೋಗಗಳು ದೂರವಾಗುತ್ತವೆ. ಇದರಿಂದ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತೆ.
