ಕೊಂದಿದ್ದು ಸರಿ, ತಪ್ಪು: ಆರೋಪಿಗಳ ಕುಟುಂಬದವರ ಮಿಶ್ರ ಪ್ರತಿಕ್ರಿಯೆ!
ದಿಶಾ ಹತ್ಯಾಚಾರ ಆರೋಪಿಗಳನ್ನು ನರಕಕ್ಕೆ ಕಳುಹಿಸಿದ ಪೊಲೀಸರು| ಪೊಲೀಸ್ ಎನ್‌ಕೌಂಟರ್‌ನಲ್ಲಿ ದಿಶಾ ಹತ್ಯಾಚಾರ ಆರೋಪಿಗಳು ಫಿನಿಷ್| ಪೊಲೀಸ್ ಕಾರ್ಯಾಚರಣೆಗೆ ದೇಶಾದ್ಯಂತ ಸಂಭ್ರಮಾಚರಣೆ| ಹತ್ಯಾಚಾರ ಆರೋಪಿಗಳನ್ನು ಕೊಂದ ಪೊಲೀಸರಿಗೆ ಧನ್ಯವಾದಗಳ ಮಹಾಪೂರ| ಎನ್‌ಕೌಂಟರ್‌ಗೆ ಆರೋಪಿ ಕುಟುಂಬದ ಮಿಶ್ರ ಪ್ರತಿಕ್ರಿಯೆ| ಪೊಲೀಸ್ ಎನ್‌ಕೌಂಟರ್ ಖಂಡಿಸಿದ ಆರೀಫ್, ಶಿವು ಕುಟುಂಬ ವರ್ಗ| ಪೊಲೀಸ್ ಎನ್‌ಕೌಂಟರ್ ಸಮರ್ಥಿಸಿಕೊಂಡ ನವೀನ್ ಪೋಷಕರು| ಪೊಲೀಸ್ ಎನ್‌ಕೌಂಟರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಚೆನ್ನಕೇಶವುಲು ತಾಯಿ|
ಹೈದರಾಬಾದ್(ಡಿ.06): ದಿಶಾ ಹತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿರುವ ತೆಲಂಗಾಣ ಪೊಲೀಸರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ರಾಕ್ಷಸರನ್ನು ನರಕಕ್ಕೆ ಕಳುಹಿಸಿದ ಪೊಲೀಸರಿಗೆ ಧನ್ಯವಾದಗಳ ಸುರಿಮಳೆಯೇ ಆಗುತ್ತಿದೆ.
ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!
ಈ ಮಧ್ಯೆ ಪೊಲೀಸ್ ಎನ್‌ಕೌಂಟರ್‌ನ್ನು ಖಂಡಿಸಿರುವ ಆರೋಪಿಗಳ ಕುಟುಂಬ ವರ್ಗ, ಕಾನೂನುಬಾಹಿರವಾಗಿ ತಮ್ಮ ಮಕ್ಕಳನನ್ನು ಕೊಲ್ಲಲಾಗಿದೆ ಎಂದು ಆರೋಪಿಸಿದೆ.
ಎನ್‌ಕೌಂಟರ್ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಪಿ ಆರೀಫ್ ತಾಯಿ, ವಿಚಾರಣೆಗೆಂದು ಮಗನನ್ನು ಕರೆದೊಯ್ದ ಪೊಲೀಸರು ಅವನನ್ನು ಕೊಂದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!
ಮತ್ತೋರ್ವ ಆರೋಪಿ ಶಿವಾ ತಾಯಿ ಕೂಡ ಮಗನ ಸಾವಿನ ಸುದ್ದಿಯಿಂದ ದಿಗ್ಭ್ರಾಂತರಾಗಿದ್ದು, ವಿಚಾರಣೆ ಬಳಿಕ ಆತ ತಪ್ಪಿತಸ್ಥ ಎಂದು ಗೊತ್ತಾಗಿದ್ದರೆ ಗಲ್ಲಿಗೇರಿಸಬಹುದಿತ್ತು ಎಂದು ಅಲವತ್ತುಕೊಂಡಿದ್ದಾರೆ.
ಅದರಂತೆ ಶಿವಾ ತಂದೆ ಕೂಡ ಎನ್‌ಕೌಂಟರ್ ವಿರೋಧಿಸಿದ್ದು, ಇತರ ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸರು ಹೀಗೇಕೆ ನಡೆದುಕೊಳ್ಳುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇತರ ಅತ್ಯಾಚಾರ ಪ್ರಕರಣಗಳ ಆರೋಪಿಗಳನ್ನೂ ಎನ್‌ಕೌಂಟರ್ ಮಾಡಿ ಸಾಯಿಸಬೇಕಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಹೈದರಾಬಾದ್ ಎನ್‌ಕೌಂಟರ್: ಎಲ್ಲೆಲ್ಲೂ ಸಂಭ್ರಮಾಚರಣೆ, ಪೊಲೀಸರ ಮೇಲೆ ಹೂಮಳೆ!
ಆದರೆ ಆರೋಪಿ ನವೀನ್ ತಂದೆ ಎನ್‌ಕೌಂಟರ್‌ನ್ನು ಸಮರ್ಥಿಸಿಕೊಂಡಿದ್ದು ಆಶ್ವರ್ಯ ತಂದಿದೆ. ಪೊಲೀಸರು ಎನ್‌ಕೌಂಟರ್ ಮಾಡಿದ್ದು ಸರಿ ಹೌದಾದರೂ, ಅದಕ್ಕೂ ಮುನ್ನ ಕೊನೆಯ ಬಾರಿ ಆತನನ್ನು ನೋಡುವ ಅವಕಾಶ ಒದಗಿಸಬೇಕಿತ್ತು ಎಂದು ಭಾವುಕರಾಗಿ ಹೇಳಿದ್ದಾರೆ.
ನಾಲ್ಕನೇ ಆರೋಪಿ ಚೆನ್ನಕೇಶವುಲು ತಾಯಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆತ ತಪ್ಪಿತಸ್ಥ ಎಂದಾದರೆ ಜೀವಂತವಾಗಿ ಸುಟ್ಟು ಹಾಕಿ ಎಂದು ಮೊದಲೇ ಹೇಳಿದ್ದಾಗಿ ಅವರು ಹೇಳಿದ್ದಾರೆ.
ಹೈದರಾಬಾದ್ ಅತ್ಯಾಚಾರಿಗಳಿಗೆ ಗುಂಡಿಟ್ಟ ಸಿಂಗಂ, ಕನ್ನಡಿಗ ಸಜ್ಜನರ್!
ಒಟ್ಟಿನಲ್ಲಿ ಪೊಲೀಸ್ ಎನ್‌ಕೌಂಟರ್‌ಗೆ ಆರೋಪಿಗಳ ಕುಟುಂಬ ವರ್ಗ ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕೆಲವರು ಎನ್‌ಕೌಂಟರ್‌ನ್ನು ಖಂಡಿಸಿದ್ದರೆ ಮತ್ತೆ ಕೆಲವರು ಸಮರ್ಥಿಸಿಕೊಂಡಿದ್ದಾರೆ.
ಡಿಸೆಂಬರ್ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ