ಶಿವಸೇನೆ ನಾಯಕ ಸಂಜಯ್ ರಾವತ್ ಮತ್ತೆ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದಾರೆ. ತಮ್ಮ ಆಪ್ತರಿಂದಲೇ ಬೆದರಿಕೆ ಕೊಲೆ ಕರೆ ಮಾಡಿಸಿ ಹೈಡ್ರಾಮ ಸೃಷ್ಟಿಸುವ ಬಹುದೊಡ್ಡ ಪ್ಲಾನ್ ಇದೀಗ ಬಟಾ ಬಯಲಾಗಿದೆ. ರಾವತ್ ನಕಲಿ ಕೊಲೆ ಬೆದರಿಕೆ ಪಕರಣವನ್ನು ಪೊಲೀಸಲು ಬಯಲು ಮಾಡಿದ್ದಾರೆ. 

ಮುಂಬೈ(ಜೂ.15) ಕಳೆ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಬೆದರಿಕೆ ಕರೆ ಭಾರಿ ಜಪಾಟಪಟಿಗೆ ಕಾರಣವಾಗಿತ್ತು. ಸಂಜಯ್ ರಾವತ್ ಹಾಗೂ ಸಹೋದರ ಸುನಿಲ್ ರಾವತ್‌ಗೆ ಬಂದಿದ್ದ ಕೊಲೆ ಬೆದರಿಕೆ ಪ್ರಕರಣದ ಅಸಲಿಯತ್ತು ಹೊರಬಂದಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಮಾಹಿತಿಗಳು ಹೊರಬಂದಿದೆ. ಸಂಜಯ್ ರಾವತ್ ಭದ್ರತೆ ಹೆಚ್ಚಿಸಲು ಮಾಡಿದ ನಕಲಿ ಬೆದರಿಕೆ ಕರೆ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ. ಬೆದರಿಕೆ ಕರೆ ಮಾಡಿದ ಆರೋಪಿಗಳು ಸಂಜಯ್ ರಾವತ್ ಸಹೋದರ ಸುನಿಲ್ ರಾವತ್ ಆಪ್ತರಾಗಿದ್ದಾರೆ. ಆಪ್ತರಿಂದಲೇ ಕರೆ ಮಾಡಿಸು ಮಹಾರಾಷ್ಟ್ರದಲ್ಲಿ ಹೈಡ್ರಾಮ ಸೃಷ್ಟಿಸಲು ಮುಂದಾಗಿದ್ದ ಕೆಳಮಟ್ಟದ ರಾಜಕಾರಣ ಇದೀಗ ಬಟಾ ಬಯಲಾಗಿದೆ.

ಸಂಜಯ್ ರಾವತ್ ಹಾಗೂ ಸಹೋದರ ಸುನಿಲ್ ರಾವತ್ ಇತ್ತೀಚೆಗೆ ಮುಂಬೈ ಪೊಲೀಸರಿಗೆ ತಮಗೆ ಬಂದಿರುವ ಬೆದರಿಕೆ ಕರೆ ಕುರಿತು ದೂರು ದಾಖಲಿಸಿದ್ದರು.ಸಂಜಯ್ ರಾವತ್ ಜೊತೆಗೆ ತಮ್ಮನ್ನೂ ಮುಗಿಸುತ್ತೇವೆ ಎಂದು ಬೆದರಿಕೆ ಕರೆಗಳು ಬರುತ್ತಿದೆ ಎಂದು ಸುನಿಲ್ ರಾವತ್ ದೂರಿನಲ್ಲಿ ಹೇಳಿದ್ದರು. ಹೀಗಾಗಿ ತಮಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕು ಎಂದು ದೂರು ನೀಡಿದ್ದರು.

ಬಿಜೆಪಿಯರಿಗೆ ಗಡಿಭಾಗದ ಮರಾಠಿಗರ ಭವಣೆ ಕೇಳಿಸಲ್ಲ: ಸಂಜಯ ರಾವೂತ್‌ ವಾಗ್ದಾಳಿ

ದೂರಿನ ಬೆನ್ನಲ್ಲೇ ಇತ್ತ ರಾಜಕೀಯವೂ ಆರಂಭಗೊಂಡಿತ್ತು. ಇದು ಬಿಜೆಪಿ ಸರ್ಕಾರದ ಆಡಳಿತ ವೈಖರಿ. ವಿಪಕ್ಷಗಳ ನಾಯಕರನ್ನು ಮುಗಿಸುವ ಹುನ್ನಾರ ಮಾಡುತ್ತಿದೆ. ಭಯದ ವಾತಾವರಣ ಸೃಷ್ಟಿಸಿ ಬಾಯಿ ಮುಚ್ಚಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಗಳು ಕೇಳಿಬಂದಿತ್ತು. ಇತ್ತ ಏಕನಾಥ್ ಶಿಂಧೆ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು. ಇಷ್ಟೇ ಅಲ್ಲ ಸಂಜಯ್ ರಾವತ್‌ಗೆ ಸೂಕ್ತ ಭದ್ರತೆ ನೀಡಲು ಸೂಚಿಸಲಾಗಿತ್ತು.

ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಮಯೂರ್ ಶಿಂಧೆಯನ್ನು ಬಂಧಿಸಿದ್ದರು. ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಸ್ಫೋಟಕ ಮಾಹಿತಿಗಳು ಹೊರಬಂದಿದೆ. ಬಂಧಿತ ಮಯೂರ್ ಶಿಂಧೆ, ಇದೇ ಸಂಜಯ್ ರಾವುತ್ ಸಹೋದರ ಸುನಿಲ್ ರಾವತ್ ಆಪ್ತ. ಸಂಜಯ್ ರಾವತ್‌ಗೆ ಭದ್ರತೆ ಹೆಚ್ಚಿಸಲು ಈ ರೀತಿ ಬೆದರಿಕೆ ಕರೆ ಮಾಡಿರುವುದಾಗಿ ಹೇಳಿದ್ದಾನೆ. 

ಬೆಳಗ್ಗೆ ಬೆಳಗ್ಗೆಯೇ ಮತ್ತಿನಲ್ಲಿ ಮಾತಾಡ್ತಾರೆ: ಸಂಜಯ್‌ ರಾವತ್‌ಗೆ ದೇವೇಂದ್ರ ಫಡ್ನವೀಸ್‌ ತಿರುಗೇಟು

ಸಂಜಯ್ ರಾವತ್ ಹಾಗೂ ಸುನಿಲ್ ರಾವತ್ ನಾಟಕ ಬಯಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮೊನ್ನೆ ಮೊನ್ನೆ ಬೆದರಿಕೆ ಕರೆ ಕುರಿತು ಆಡಿದ್ದ ನಾಟಕ ಬಯಲಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸಂಜಯ್ ರಾವತ್ ಜೈಲು ಸೇರಿದ ಬಳಿಕ ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತು. ಇದೀಗ ಸಂಜಯ್ ರಾವತ್ ಝೆಡ್ ಸೆಕ್ಯೂರಿಟಿಗಾಗಿ ಈ ನಾಟಕ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಸಾರ್ವಜನಿಕರು ಹಾಗೂ ಮಾಧ್ಯಮಕ್ಕೆ ಯಾವ ರೀತಿ ಸುಳ್ಳು ಹೇಳುತ್ತಾರೆ ಅನ್ನೋದು ಬಯಲಾಗಿದೆ. ಸತ್ಯ ಹೊರಬಂದಿದೆ ಎಂದು ಕೆವರು ಕಮೆಂಟ್ ಮಾಡಿದ್ದಾರೆ.