ನವದೆಹಲಿ(ಜ.30): ಕೊರೊನಾ ವೈರಸ್ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ನೋಟಿಸ್ ಹೊರಡಿಸಿದೆ ಎನ್ನಲಾಗಿದ್ದು, ಇಂತದ್ದೊಂದು ನೋಟಿಸ್ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಯಾಣ ಸಲಹೆ ಮತ್ತು ಕೊರೊನಾ ವೈರಸ್ ಗುಣಲಕ್ಷಣಗಳ ಕುರಿತು ಆರೋಗ್ಯ ಇಲಾಖೆ ನೊಟೀಸ್ ಹೊರಡಿಸಿದೆ ಎನ್ನಲಾಗಿದ್ದು, ಇದರ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಕೊರೋನಾ ವೈರಸ್ ಹಬ್ಬುವ ಸಾಧ್ಯತೆ ಹೆಚ್ಚಿರುವ 30 ದೇಶಗಳ ಪಟ್ಟಿಯಲ್ಲಿ ಭಾರತ!

ಈ ಕುರಿತು ಪರಿಶೀಲನೆ ನಡೆಸಿದಾಗ ಕೇಂದ್ರ ಆರೋಗ್ಯ ಇಲಾಖೆ ಇಂತಹ ಯಾವುದೇ ನೊಟೀಸ್‌ನ್ನು ಜಾರಿ ಮಾಡಿಲ್ಲ ಎಂದು ಗೊತ್ತಾಗಿದೆ. ಅಲ್ಲದೇ ಚೀನಾಗೆ ಪ್ರವಾಸ ಹೊರಡುವವರಿಗೆ ಯಾವುದೇ ಪ್ರಯಾಣ ಸಲಹೆ ಕುಡ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಇಂತಹ ಸುಳ್ಳು ನೊಟೀಸ್ ಪ್ರತಿ ಮೂಲಕ ಜನರಲ್ಲಿ ಆತಂಕ ಹುಟ್ಟಿಸುವ ಪ್ರಯತ್ನ ನಡೆಯುತ್ತಿದ್ದು, ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಕೇಂದ್ರ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಕೊರೋನಾ ವೈರಸ್: ಚೀನಾದಿಂದ ಭಾರತೀಯರ ಕರೆತರಲು ಸಿದ್ಧತೆ ಆರಂಭ!