ನವದೆಹಲಿ[ಜ.29]: ಚೀನಾದಲ್ಲಿ 100ಕ್ಕಿಂತ ಹೆಚ್ಚು ಮಂದಿಯನ್ನು ಬಲಿಪಡೆದ ಕೊರೋನಾ ವೈರಸ್‌ನ ಮೂಲವಾಗಿರುವ ವುಹಾನ್‌ ಮತ್ತು ಹುಬೇ ಪ್ರಾಂತ್ಯದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಸಿದ್ಧತೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಈ ಕುರಿತು ಭಾರತದ ವಿದೇಶಾಂಗ ಸಚಿವಾಲಯವು ಚೀನಾ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಮಾಡಿದೆ.

ಚೀನಾದ ವುಹಾನ್‌ ಮತ್ತು ಹುಬೇ ಪ್ರಾಂತ್ಯದಲ್ಲಿರುವ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಸಂಶೋಧಕ ವಿದ್ಯಾರ್ಥಿಗಳಾಗಿ, ಸಂಶೋಧಕರಾಗಿ, ವಿದ್ಯಾರ್ಥಿಗಳಾಗಿ ಮತ್ತು ಇತರೆ ಉದ್ಯೋಗಗಳನ್ನು ನಿರ್ವಹಿಸುತ್ತಿರುವ ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸಿಕೊಡುವಂತೆ ಭಾರತದ ವಿದೇಶಾಂಗ ಸಚಿವಾಲಯ ಚೀನಾಕ್ಕೆ ಮನವಿ ಸಲ್ಲಿಸಿದೆ.

ಬೆಂಗಳೂರಲ್ಲಿ ಮತ್ತೆ ನಾಲ್ವರಿಗೆ ಕೊರೋನಾ ವೈರಸ್ ಭೀತಿ! ಆತಂಕದಲ್ಲಿ ಜನತೆ

ಇದೇ ವೇಳೆ ಚೀನಾದಲ್ಲಿರುವ ಭಾರತೀಯರನ್ನು ಭಾರತಕ್ಕೆ ಕರೆತರಲು ಚೀನಾಕ್ಕೆ ತೆರಳಲು 423 ಆಸನವನ್ನೊಳಗೊಂಡ ಬೋಯಿಂಗ್‌-747-400 ಹೆಸರಿನ ಜಂಬೋ ವಿಮಾನವು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

14 ದಿನ ನಿರ್ಬಂಧ:

ಕೊರೋನಾ ವೈರಸ್‌ ಭೀತಿಗೆ ತುತ್ತಾಗಿರುವ ಚೀನಾದಲ್ಲಿರುವ 250ಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಬಳಿಕ, ಅವರನ್ನು 14 ದಿನಗಳ ಕಾಲ ಅವರ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ. ಅಲ್ಲದೆ, ಕೊರೋನಾ ವೈರಸ್‌ಗೆ ತುತ್ತಾಗಿರಬಹುದಾದ ಸಾಧ್ಯತೆ ಹಿನ್ನೆಲೆ ಅವರನ್ನು ಇತರ ಭಾರತೀಯರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಕೊರೋನಾ ವೈರಸ್: ಜಗತ್ತಿಗೆ ಆದ ನಷ್ಟ ಎಷ್ಟು?

ಕೊರೋನಾವೈರಸ್‌ ಚಿಕಿತ್ಸೆಗೆ ಬೆಂಗಳೂರಿನಲ್ಲಿ ಪ್ರತ್ಯೇಕ ವ್ಯವಸ್ಥೆ:

"