ಗಾಜಿಯಾಬಾದ್‌ನ ಹರ್ಷವರ್ಧನ್ ಜೈನ್ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದರು, ನಕಲಿ ರಾಜತಾಂತ್ರಿಕ ಪ್ಲೇಟ್‌ಗಳನ್ನು ಬಳಸುತ್ತಿದ್ದರು ಮತ್ತು ವಿದೇಶಿ ಉದ್ಯೋಗಗಳನ್ನು ನೀಡುವುದಾಗಿ ಹವಾಲಾ ದಂಧೆ ನಡೆಸುತ್ತಿದ್ದರು ಎಂದು ಯುಪಿ ಎಸ್‌ಟಿಎಫ್‌ ಹೇಳಿದೆ. 

DID YOU
KNOW
?
ಮೈಕ್ರೋನೇಷನ್
ಮೈಕ್ರೋನೇಷನ್ ಸಣ್ಣ, ಸ್ವಯಂ ಘೋಷಿತ ಪ್ರದೇಶ. ಅದು ಸ್ವತಂತ್ರ ದೇಶವೆಂದು ಹೇಳಿಕೊಳ್ಳುತ್ತದೆ ಆದರೆ ಯಾವುದೇ ಅಧಿಕೃತ ಸರ್ಕಾರ ಅಥವಾ ಅಂತರರಾಷ್ಟ್ರೀಯ ಸಂಸ್ಥೆ ಮಾನ್ಯತೆ ಇರೋದಿಲ್ಲ.

ನವದೆಹಲಿ (ಜು.23): ಫೇಕ್‌ ಬ್ಯಾಂಕ್‌ (Fake Bank), ಫೇಕ್‌ ಆಫೀಸರ್‌ (Fake Officer) ಕೇಸ್‌ಗಳು ನೋಡಿದ್ದಾಯ್ತು, ಆದರೆ ಉತ್ತರ ಪ್ರದೇಶದ (Uttar Pradesh) ವ್ಯಕ್ತಿಯೊಬ್ಬ ನಕಲಿ ರಾಯಭಾರ ಕಚೇರಿಯ (fake embassy) ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಾಜಿಯಾಬಾದ್‌ನ (Ghaziabad) ಕವಿನಗರ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ್ನು ಬಂಧಿಸಲಾಗಿದ್ದು, ಬಾಡಿಗೆ ಮನೆಯೊಂದರಲ್ಲಿ ಈತ ಅಕ್ರಮ ರಾಯಭಾರ ಕಚೇರಿ ನಡೆಸುತ್ತಿದ್ದ ಎಂದು ಉತ್ತರ ಪ್ರದೇಶ ಪೊಲೀಸ್‌ ಎಸ್‌ಟಿಎಫ್‌ ತಿಳಿಸಿದೆ.

ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (STF)ಯ ನೋಯ್ಡಾ ಘಟಕದ ಪ್ರಕಾರ, ಆರೋಪಿಯು ಕೆಲವು ಮೈಕ್ರೋನೇಷನ್‌ಗಳಿಗೆ ಕಾನ್ಸುಲ್ ಅಥವಾ ರಾಯಭಾರಿ ಎಂದು ಸುಳ್ಳು ಹೇಳಿ ಜನರಿಗೆ ವಂಚಿಸಿದ್ದ ಎನ್ನಲಾಗಿದೆ. ಜನರನ್ನು ವಂಚಿಸಲು ಅವರು ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಹನಗಳನ್ನು ಬಳಸುತ್ತಿದ್ದ,ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ಇರುವ ಫೋಟೋವನ್ನೂ ಆತ ಇರಿಸಿಕೊಂಡಿದ್ದ.ಚಂದ್ರಸ್ವಾಮಿ ಮತ್ತು ಅದ್ನಾನ್ ಖಶೋಗ್ಗಿಯಂತಹ ವಿವಾದಾತ್ಮಕ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದ ಎಂದಿದ್ದಾರೆ.

Scroll to load tweet…

ಅಧಿಕಾರಿಗಳ ಪ್ರಕಾರ, ಅವನು ತನ್ನ ನಕಲಿ ಹುದ್ದೆಯನ್ನು ಬಳಸಿಕೊಂಡು ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆ (ಅಕ್ರಮ ಹಣ ವರ್ಗಾವಣೆ) ನಡೆಸುತ್ತಿದ್ದ. ಹರ್ಷ ವರ್ಧನ್ ಜೈನ್ ಎಂದು ಗುರುತಿಸಲ್ಪಟ್ಟ ಆರೋಪಿ, ತಾನು ಪಶ್ಚಿಮ ಆರ್ಕ್ಟಿಕಾ, ಸಬೋರ್ಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ದೇಶಗಳಿಗೆ ರಾಯಭಾರಿ ಎಂದು ಜನರನ್ನು ನಂಬಿಸಿದ್ದ. ರಾಜತಾಂತ್ರಿಕ ಎಂದು ಕರೆಯಲ್ಪಡುವ ತನ್ನ ಇಮೇಜ್ ಅನ್ನು ಬಳಸಿಕೊಂಡು, ವರ್ಧನ್ ವಿದೇಶಿ ದೇಶಗಳಲ್ಲಿ ಉದ್ಯೋಗಗಳನ್ನು ಕೊಡಿಸುವ ಭರವಸೆ ನೀಡುತ್ತಿದ್ದ ಎಂದಿದ್ದಾರೆ.

ಆತ ಮುಖ್ಯವಾಗಿ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ, ಕಂಪನಿಗಳು ಮತ್ತು ವ್ಯಕ್ತಿಗಳಿಗೆ ವಿದೇಶಗಳಲ್ಲಿ ಉದ್ಯೋಗ ಹುಡುಕಲು ಸಹಾಯ ಮಾಡುತ್ತಿದ್ದ ಮತ್ತು ರಹಸ್ಯವಾಗಿ ಹವಾಲಾ ದಂಧೆಯನ್ನು ನಡೆಸುತ್ತಿದ್ದ ಎಂದು ಎಸ್‌ಟಿಎಫ್ ತಿಳಿಸಿದೆ.

ಹರ್ಷವರ್ಧನ್, ಚಂದ್ರಸ್ವಾಮಿ ಮತ್ತು ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಅವರೊಂದಿಗೆ ಈ ಹಿಂದೆ ಸಂಪರ್ಕ ಹೊಂದಿದ್ದರು ಎಂದು ಅಧಿಕಾರಿಯೊಬ್ಬರು ಕಂಡುಕೊಂಡಿದ್ದಾರೆ. 2011 ರಲ್ಲಿ, ಕವಿ ನಗರದಲ್ಲಿ ಅಕ್ರಮ ಸ್ಯಾಟಲೈಟ್ ಫೋನ್‌ನೊಂದಿಗೆ ಪೊಲೀಸರು ಅವರನ್ನು ಬಂಧಿಸಿದಾಗ ಅವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿತ್ತು.

ಅದ್ನಾನ್ ಖಶೋಗ್ಗಿ ಸೌದಿ ಅರೇಬಿಯಾದ ಉದ್ಯಮಿ ಮತ್ತು ಪಾಶ್ಚಿಮಾತ್ಯ ರಕ್ಷಣಾ ಗುತ್ತಿಗೆದಾರರು ಮತ್ತು ಮಧ್ಯಪ್ರಾಚ್ಯ ಸರ್ಕಾರಗಳು, ವಿಶೇಷವಾಗಿ ಸೌದಿ ಅರೇಬಿಯಾ ನಡುವಿನ ಶಸ್ತ್ರಾಸ್ತ್ರ ವ್ಯವಹಾರಗಳಲ್ಲಿ ಪ್ರಮುಖ ಮಧ್ಯವರ್ತಿಯಾಗಿದ್ದ. ಆತ 1980 ರ ದಶಕದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿಒಬ್ಬನಾಗಿದ್ದ ಈತ.2017ರ ಜೂನ್ 6 ರಂದು ಯುಕೆಯ ಲಂಡನ್‌ನಲ್ಲಿ ಸಾವು ಕಂಡಿದ್ದ.

ಇನ್ನು, ಚಂದ್ರಸ್ವಾಮಿ ಸ್ವಯಂ ಘೋಷಿತ ದೇವಮಾನವ ಮತ್ತು ಭಾರತ ಮತ್ತು ವಿದೇಶಗಳಲ್ಲಿನ ಪ್ರಬಲ ರಾಜಕೀಯ ಮತ್ತು ವ್ಯವಹಾರ ವ್ಯಕ್ತಿಗಳಿಗೆ ವಿವಾದಾತ್ಮಕ ಆಧ್ಯಾತ್ಮಿಕ ಸಲಹೆಗಾರರಾಗಿದ್ದರು. ರಾಜೀವ್ ಗಾಂಧಿ ಹತ್ಯೆಯ ತನಿಖೆಯ ಸಮಯದಲ್ಲಿ ಅವರ ಹೆಸರು ಬೆಳಕಿಗೆ ಬಂದಿತು, ಆದರೆ ಯಾವುದೇ ಆರೋಪಗಳು ಸಾಬೀತಾಗಿಲ್ಲ. ಅವರು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. 80 ರ ದಶಕದಲ್ಲಿ ಅವರು ಆಧ್ಯಾತ್ಮಿಕ ಅಥವಾ ಅಲೌಕಿಕ ಆಶೀರ್ವಾದಗಳನ್ನು ಬಯಸುವ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳಲ್ಲಿ ಜನಪ್ರಿಯತೆಯನ್ನು ಗಳಿಸಿದರು.

ಏನೆಲ್ಲಾ ಸಿಕ್ಕಿದೆ

ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ನಾಲ್ಕು ವಾಹನಗಳು. ಮೈಕ್ರೋನೇಷನ್ ದೇಶಗಳ 12 ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು. ವಿದೇಶಾಂಗ ಸಚಿವಾಲಯದ ಸೀಲ್ ಹೊಂದಿರುವ ನಕಲಿ ದಾಖಲೆಗಳು. ಎರಡು ನಕಲಿ ಪ್ಯಾನ್ ಕಾರ್ಡ್‌ಗಳು. ವಿವಿಧ ದೇಶಗಳು ಮತ್ತು ಕಂಪನಿಗಳ 34 ಸೀಲ್‌ಗಳು. 2 ನಕಲಿ ಪ್ರೆಸ್ ಕಾರ್ಡ್‌ಗಳು. ರೂ. 44,70,000 ನಗದು. ಹಲವು ದೇಶಗಳ ವಿದೇಶಿ ಕರೆನ್ಸಿ. ಹಲವು ಕಂಪನಿಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.