ಮುಂಬೈ (ಫೆ.12): ಮತ್ತೆ ಬ್ಯಾಲೆಟ್‌ ಪೇಪರ್‌ ಮೂಲಕ ಚುನಾವಣೆ ನಡೆಸಲು ಮಹಾರಾಷ್ಟ್ರ ಸರ್ಕಾರ ಚಿಂತಿಸಿದೆ ಎಂಬ ವರದಿಗಳ ಬೆನ್ನಲ್ಲೇ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌, ‘ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಚುನಾವಣೆಗಳಲ್ಲಿ ಬ್ಯಾಲಟ್‌ ಪೇಪರ್‌ ಬಳಕೆಯನ್ನು ಬಯಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. 

ವಿಧಾನಸಭೆಯ ಮಾಜಿ ಸ್ಪೀಕರ್‌ ಮತ್ತು ಹಾಲಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ನಾನಾ ಪಟೋಲೆ, ಇತ್ತೀಚೆಗಷ್ಟೇ ಮತಪತ್ರ ಬಳಸಿ ಚುನಾವಣೆ ನಡೆಸುವ ಕುರಿತು ಪರಿಶೀಲನೆ ನಡೆಸಿ, ಕರಡು ವರದಿ ರೂಪಿಸುವಂತೆ ಸೂಚಿಸಿದ್ದರು. 

ದೂರದ ಊರಿನಿಂದಲೇ ನಿಮ್ಮ ಕ್ಷೇತ್ರದ ಮತ ಚಲಾಯಿಸಿ! ..

ಪಟೋಲೆ ಆದೇಶದ ಕುರಿತು ಪ್ರತಿಕ್ರಿಯಿಸಿದ ಪವಾರ್‌, ‘ಮಹಾ ಅಘಾಡಿ ಸರ್ಕಾರ ಚುನಾವಣೆಗಳಲ್ಲಿ ಬ್ಯಾಲೆಟ್‌ ಪೇಪರ್‌ ಬಳಕೆಯನ್ನು ಬಯಸಿಲ್ಲ. ನನಗೆ ಇವಿಎಂಗಳ ಮೇಲೆ ವಿಶ್ವಾಸ ಇದೆ. ಒಂದು ವೇಳೆ ಇವಿಎಂಗಳನ್ನು ತಿರುಚುವಂತಿದ್ದರೆ ರಾಜಸ್ಥಾನ (2018)ದಲ್ಲಿ ಮತ್ತು ಪಂಜಾಬ್‌(2017)ನಲ್ಲಿ ಕಾಂಗ್ರೆಸ್‌ ಹೇಗೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಪಕ್ಷವೊಂದು ಬಹುಮತ ಗಳಿಸಿದಾಗ ಯಾವುದೇ ತೊಂದರೆ ಇರುವುದಿಲ್ಲ. ಅದೇ ಸೋತಾಗ ಇವಿಎಂ ಬಗ್ಗೆ ಆರೋಪಗಳು ಬರುತ್ತವೆ’ ಎಂದು ಹೇಳಿದರು.