ಮಾತುಕತೆ ಸಾಕು, ದೇಶದ ಎಲ್ಲರಿಗೂ ಲಸಿಕೆ ಮೊದಲು ಬೇಕು
ದೇಶದಲ್ಲಿ ಕೊರೋನಾ ಎರಡನೇ ಅಲೆ/ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ/ ವ್ಯವಸ್ಥೆಯನ್ನು ಬಲಿಪಶು ಮಾಡುವ ಕೆಲಸ ಮಾಡಬೇಡಿ/ ಎಲ್ಲರಿಗೂ ಲಸಿಕೆ ಸಿಗಬೇಕು
ನವದೆಹಲಿ (ಏ. 26) ದೇಶದ ಎಲ್ಲ ನಾಗರಿಕರಿಗೂ ಉಚಿತವಾಗಿ ಲಸಿಕೆ ಸಿಗುವ ಕೆಲಸ ಆಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಪಡಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ವ್ಯವಸ್ಥೆಯನ್ನೇ ಬಲಿಪಶುಮಾಡಲು ಮುಂದಾಗಿದೆ ಎಂದು ಆರೋಪಿಸಿದೆ.
ಕೊರೊನಾ ಬಗ್ಗೆ ಚರ್ಚೆ ಮಾಡುವುದನ್ನು ನಿಲ್ಲಿಸಿ ದೇಶದ ಎಲ್ಲಾ ನಾಗರಿಕರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಬೇಕು ಎಂದು ರಾಹುಲ್ ಮತ್ತೊಮ್ಮೆ ಒತ್ತಾಯ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಕೊರೊನಾ ವೈರಸ್ ಅಲೆ ಕುರಿತು ಚರ್ಚೆ ಮಾಡಿದ್ದು ಸಾಕು. ದೇಶದ ಎಲ್ಲಾ ನಾಗರಿಕರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಕೊರೋನಾ ಎದುರಿಸಲು ಸೇನಾಪಡೆಯೊಂದಿಗೆ ಮೋದಿ ಮಾತುಕತೆ
ಭಾರತವನ್ನು ಬಿಜೆಪಿ ವ್ಯವಸ್ಥೆಯ ಬಲಿಪಶುವನ್ನಾಗಿ ಮಾಡಬೇಡಿ. ಕೊರೊನಾ ಅಲೆ ತಡೆಗೆ ಇನ್ನಾದರೂ ಪ್ರಾಮಾಣಿಕ ಕ್ರಮ ತೆಗೆದುಕೊಳ್ಳಿ. ದೇಶದ ಎಲ್ಲಾ ನಾಗರಿಕರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಬೇಕು. ಇದರಲ್ಲಿ ಚರ್ಚೆ ಮಾಡುವಂತದ್ದೇನಿದೆ? ಸರ್ಕಾರ ಯಾವ ಕಾರಣಕ್ಕೆ ಇಂಥ ಗೊಂದಲಕಾರಿ ತೀರ್ಮಾನ ತೆಗೆದುಕೊಳ್ಳುತ್ತಿದೆ ಎನ್ನುವುದೇ ಅರ್ಥವಾಗಿತ್ತಿಲ್ಲ ಎಂದಿದ್ದಾರೆ.
ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳು ಆರೋಪ ಮಾಡಿವೆ. ದೇಶದಲ್ಲಿ ಮೂರು ಲಕ್ಷಕ್ಕೂ ಅಧಿಕ ಕೇಸ್ ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕರ್ನಾಟದಲ್ಲಿಯೂ ಹದಿನೈದು ದಿನಗಳ ಟಫ್ ರೂಲ್ಸ್ ಅನುಷ್ಠಾನವಾಗಿದೆ.