ಭಾರತಕ್ಕೆ ಪಾಕ್ ಆಕ್ಸಿಜನ್ | ಆಕ್ಸಿಜನ್ ತುಂಬಿ ಸಾಲು ಸಾಲಾಗಿ ಬಂದ ಟ್ಯಾಂಕರ್ ಎಲ್ಲಿಯದ್ದು ?

ದೆಹಲಿ(ಏ.29): ಕೆಲವು ದಿನಗಳ ಹಿಂದೆ ಕೊರೋನಾ ಸಂಕಷ್ಟವನ್ನು ಎದುರಿಸಲು ಪಾಕಿಸ್ತಾನವು ಭಾರತಕ್ಕೆ ವಸ್ತು ಬೆಂಬಲವನ್ನು ನೀಡಿತು. ಏಪ್ರಿಲ್ 24 ರಂದು, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಟ್ವೀಟ್ ಮೂಲಕ ಭಾರತದೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದರು.

ಇದಾದ ನಂತರ, ಪಾಕಿಸ್ತಾನದಿಂದ ಆಮ್ಲಜನಕ ಟ್ಯಾಂಕರ್‌ಗಳು ಭಾರತಕ್ಕೆ ತೆರಳುತ್ತಿರುವುದು ಎಂಬ ಹೇಳಿಕೆಯೊಂದಿಗೆ ರೈಲು ಟ್ಯಾಂಕರ್‌ಗಳನ್ನು ಸಾಗಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಪ್ರಾರಂಭಿಸಿತು. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇಮ್ರಾನ್ ಖಾನ್ ನೆರವು ಘೋಷಿಸಿ ನಂತರ ಆಕ್ಸಿಜನ್ ಟ್ಯಾಂಕರ್ ಭಾರತಕ್ಕೆ ಕಳುಹಿಸಿದರು ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ರಿಲಯನ್ಸ್‌ನಿಂದ 1000 ಬೆಡ್‌ಗಳ ಕೊರೋನಾ ಆಸ್ಪತ್ರೆ

ಆದರೆ ವೀಡಿಯೊ ವಾಸ್ತವವಾಗಿ ಭಾರತೀಯ ರೈಲ್ವೆ ನಿರ್ವಹಿಸುವ ಆಕ್ಸಿಜನ್ ಎಕ್ಸ್‌ಪ್ರೆಸ್ ಆಗಿದೆ. ವಿಡಿಯೋದಲ್ಲಿ ನೋಡಿದ ರೈಲು ನವೀ ಮುಂಬೈನಿಂದ ವಿಶಾಖಪಟ್ಟಣಂಗೆ ಆಕ್ಸಿಜನ್ ಭರ್ತಿ ಮಾಡಲು ಏಳು ಖಾಲಿ ಟ್ಯಾಂಕರ್‌ಗಳನ್ನು ಸಾಗಿಸುತ್ತಿತ್ತು.

ಇದೇ ವೀಡಿಯೊವನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಏಪ್ರಿಲ್ 19 ರಂದು ಟ್ವೀಟ್ ಮಾಡಿದ್ದಾರೆ. ಏಳು ಖಾಲಿ ಟ್ಯಾಂಕರ್‌ಗಳು ಕಲಂಬೋಲಿಯಿಂದ ವೈಜಾಗ್‌ಗೆ ವೈದ್ಯಕೀಯ ಆಮ್ಲಜನಕವನ್ನು ಲೋಡ್ ಮಾಡಲು ಹೊರಟವು ಎಂದು ಅವರು ಬರೆದಿದ್ದರು.

ಕೊರೋನಾ ಹೋರಾಟ: ಭಾರತಕ್ಕೆ ನಾರ್ವೆಯಿಂದ 17 ಕೋಟಿ ನೆರವು..!

ಭಾರತವು ವೈದ್ಯಕೀಯ ಆಮ್ಲಜನಕ ಮತ್ತು ಇತರ ಕೋವಿಡ್ ಸಂಬಂಧಿತ ವೈದ್ಯಕೀಯ ವಸ್ತುಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಈ ಸಂದರ್ಭ ಆಸ್ಟ್ರೇಲಿಯಾ, ಚೀನಾ, ಜರ್ಮನಿ, ಫ್ರಾನ್ಸ್, ಯುಕೆ, ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದಂತಹ ಹಲವಾರು ದೇಶಗಳು ಭಾರತಕ್ಕೆ ಪರಿಹಾರ ಸೌಲಭ್ಯಗಳನ್ನು ಒದಗಿಸಲು ಮುಂದಾಗಿವೆ.

ಟ್ವೀಟ್ ನಲ್ಲಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಮ್ಮ ನೆರೆಹೊರೆ ಮತ್ತು ಪ್ರಪಂಚದಲ್ಲಿ ಕೊರೋನಾದಿಂದ ಬಳಲುತ್ತಿರುವ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

Scroll to load tweet…

ಆದರೆ ವೈರಲ್ ವಿಡಿಯೋ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಆಕ್ಸಿಜನ್ ಟ್ಯಾಂಕರ್‌ಗಳಲ್ಲ. ವಿಶಾಖಪಟ್ಟಣಂನಲ್ಲಿ ಭಾರತೀಯ ರೈಲ್ವೆಯ ಆಕ್ಸಿಜನ್ ಎಕ್ಸ್‌ಪ್ರೆಸ್ ಖಾಲಿ ಟ್ಯಾಂಕರ್‌ಗಳನ್ನು ಹೊತ್ತೊಯ್ಯುತ್ತಿದ್ದಾಗ ತೆಗೆದ ವಿಡಿಯೋ ಇದು ಎಂದು ಸ್ಪಷ್ಟವಾಗಿದೆ.