ಅಮೆರಿಕ ಫೆಬ್ರವರಿ 15ನ್ನು ಛತ್ರಪತಿ ಶಿವಾಜಿ ದಿನ ಎಂದು ಘೋಷಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರೊಂದಿಗೆ 100 ಡಾಲರ್ ನೋಟಿನ ಮೇಲೆ ಶಿವಾಜಿ ಚಿತ್ರವಿರುವ ಫೋಟೋವನ್ನೂ ಲಗತ್ತಿಸಲಾಗಿದೆ.ಏನಿದು ಸುದ್ದಿ? ಇಲ್ಲಿದೆ ನೋಡಿ!
ಅಮೆರಿಕ ಫೆಬ್ರವರಿ 15ನ್ನು ಛತ್ರಪತಿ ಶಿವಾಜಿ ದಿನ ಎಂದು ಘೋಷಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರೊಂದಿಗೆ 100 ಡಾಲರ್ ನೋಟಿನ ಮೇಲೆ ಶಿವಾಜಿ ಚಿತ್ರವಿರುವ ಫೋಟೋವನ್ನೂ ಲಗತ್ತಿಸಲಾಗಿದೆ.
ಕೆಲವರು ಇದನ್ನು ಪೋಸ್ಟ್ ಮಾಡಿ, ‘ಭಾರತೀಯರೆಲ್ಲರಿಗೂ ಸಿಹಿ ಸುದ್ದಿ. ಅಮೆರಿಕ ಛತ್ರಪತಿ ಶಿವಾಜಿ ಜನ್ಮ ದಿನವಾದ ಫೆಬ್ರವರಿ 19ನ್ನು ಶಿವಾಜಿ ಜಯಂತಿ ಎಂದು ಘೋಷಿಸಿ ಆಚರಿಸಲು ಮುಂದಾಗಿದೆ. ಅಮೆರಿಕಕ್ಕೆ ವಿಶೇಷ ಅಭಿನಂದನೆಗಳು. ಈ ಸಂದೇಶವನ್ನು ಸಾಧ್ಯವಾದಷ್ಟುಶೇರ್ ಮಾಡಿ’ ಎಂದು ಒಕ್ಕಣೆ ಬರೆದಿದ್ದಾರೆ.


ಆದರೆ ಈ ಸುದ್ದಿ ನಿಜವೇ ಎಂದು ಬೂಮ್ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ. ಏಕೆಂದರೆ ಅಮರಿಕದಲ್ಲಿ ಯಾವ ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗಿಲ್ಲ. ಅಮೆರಿಕದಲ್ಲಿ ಆಚರಿಸುವ ವಿವಿಧ ಜಯಂತಿಗಳ ಆಚರಣೆಯಲ್ಲೂ ಈ ಬಗ್ಗೆ ಉಲ್ಲೇಖವಿಲ್ಲ. ಹಾಗೆಯೇ 100 ಡಾಲರ್ ನೋಟಿನ್ನು ಪರಿಶೀಲಿಸಿದಾಗಲೂ ಛತ್ರಪತಿ ಶಿವಾಜಿ ಚಿತ್ರವಿರುವ ಯಾವುದೇ ನೋಟುಗಳೂ ಲಭ್ಯವಾಗಿಲ್ಲ. ಆದರೆ ನೋಟಿನ ಮೇಲೆ ಯಾವುದೇ ಭಾವಚಿತ್ರವನ್ನು ಅಂಟಿಸಿಕೊಡುವ ವೆಬ್‌ಸೈಟ್ ಪತ್ತೆಯಾಗಿದೆ.
Fact Check: ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾದ ಮೋದಿ ಪತ್ನಿ!
ಈ ವೆಬ್‌ಸೈಟ್‌ನಲ್ಲಿ ಫೋಟೋ ಅಪ್‌ಲೋಡ್ ಮಾಡಿದಲ್ಲಿ ಕ್ಷಣಾರ್ಧದಲ್ಲಿ ಡಾಲರ್ ಮೇಲೆ ನಾವು ಕಳಿಸಿದ ಭಾವಚಿತ್ರವಿರುವ ನೋಟನ್ನು ಅಂಟಿಸಿಕೊಡಲಾಗುತ್ತದೆ. ಇದೇ ರೀತಿ ಛತ್ರಪತಿ ಶಿವಾಜಿ ಫೋಟೋವನ್ನೂ ಈ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿ ವೈರಲ್ ಆಗಿರುವ ನೋಟನ್ನು ಪಡೆಯಲಾಗಿದೆ. ಈ ನೋಟಿನಲ್ಲಿರುವ ಶಿವಾಜಿಯ ಮೂಲ ಫೋಟೋವು ಗೂಗಲ್‌ನಲ್ಲಿ ಲಭ್ಯವಿದೆ. ಅಲ್ಲಿಗೆ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟ.
