ನವದೆಹಲಿ(ಮಾ.13): ಕೇಂದ್ರ ಸರ್ಕಾರದ ಕೃಷಿ ಕಾನೂನಿನ ವಿರುದ್ಧ ರೈತ ಪ್ರತಿಭಟನೆ ದೀರ್ಘ ಕಾಲ ನಡೆಯುವ ಮುನ್ಸೂಚನೆ ಲಭಿಸಿದೆ. ಸದ್ಯ ದೆಹಲಿಯ ಟೀಕರೀ ಬಾರ್ಡರ್‌ನಲ್ಲಿ ರೈತರು ಮನೆಗಳನ್ನು ನಿರ್ಮಿಸಲಾರಮಭಿಸಿದ್ದಾರೆ. ಅನೇಕ ಕಡೆ ಇಟ್ಟಿಗೆ ಹಾಗೂ ಸಿಮೆಂಟ್‌ ಕೂಡಾ ಬಳಸುತ್ತಿದ್ದರೆ, ಇನ್ನು ಕೆಲವೆಡೆ ಮಣ್ಣಿನಿಂದ ಇಟ್ಟಿಗೆಗಳನ್ನು ಜೊಡಿಲಾಗುತ್ತಿದೆ. ಸುಮಾರು ಹನ್ನೆರಡಕ್ಕೂ ಹೆಚ್ಚು ಮನೆಗಳು ಸದ್ಯ ತಯಾರಾಗಿವೆ. 

ಇನ್ನು ಹವಾಮಾನ ಬದಲಾಗುತ್ತಿದೆ ಹೀಗಾಗಿ ಇವುಗಳನ್ನು ನಿರ್ಮಿಸಿದ್ದೇವೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ತಾವಿದ್ದ ಟ್ರೋಲಿಗಳನ್ನು ಊರಿಗೆ ಕಳುಹಿಸುತ್ತಿದ್ದೇವೆ. ಹೀಗಾಗಿ ಇದನ್ನು ನಿರ್ಮಿಸಿದ್ದೇವೆ ಎಂದು ಉತ್ತರಿಸಿದ್ದಾರೆ. ಇನ್ನು ಹಲವೆಡೆ ಇಟ್ಟಿಗೆ, ಮಣ್ಣು ರಾಶಿ ಹಾಕಲಾಗಿದೆ. ಇಲ್ಲಿ ರೈತರೇ ಕೂಲಿ ಕಾರ್ಮಿಕರಂತೆ ದುಡಿಯುತ್ತಿದ್ದು, ಅವರೇ ಇದನ್ನು ನಿರ್ಮಿಸುತ್ತಿದ್ದಾರೆ. 

ಈ ಕಟ್ಟಡಗಳ ನಿರ್ಮಾಣವೇಕೆ?

ಹಳ್ಳಿಗಳಲ್ಲಿ ಗೋಧಿ ಕಟಾವಿಗೆ ಬಂದಿದೆ. ಹೀಗಾಗಿ ಅಲ್ಲಿ ಟ್ರ್ಯಾಕ್ಟರ್ ಟ್ರಾಲಿ ಅಗತ್ಯವಿದೆ. ಈವರೆಗೆ ಟ್ರೋಲಿಯಲ್ಲಿ ಉಳಿದುಕೊಂಡಿದ್ದೆವು, ಈಗ ಅದನ್ನು ಹಳ್ಳಿಗೆ ಕಳುಹಿಸಿಕೊಟ್ಟಾಗ ನಾವು ಎಲ್ಲಿ ಉಳಿದುಕೊಳ್ಳುವುದು? ಹೀಗಾಗಿ ಈ ಕಟ್ಟಡಗಳನ್ನು ನಿರ್ಮಿಸುತ್ತಿದ್ದೇವೆ ಎಂದಿದ್ದಾರೆ. ಪ್ರತಿ ಕಟ್ಟಡ ನಿರ್ಮಾಣಕ್ಕೂ ಇಪ್ಪತ್ತರಿಂದ ಮೂವತ್ತು ಸಾವಿರ ರೂಪಾಯಿ ಮೊತ್ತ ತಗುಲಬಹುದೆನ್ನಲಾಗಿದೆ.