ಕೋಲ್ಕತಾ(ಫೆ.16): ಕರ್ನಾಟಕದ ಇಂದಿರಾ, ತಮಿಳುನಾಡಿನ ಅಮ್ಮಾ ಕ್ಯಾಂಟೀನ್‌ ರೀತಿ ಬಡವರಿಗೆ 5 ರು.ಗೆ ಊಟ ನೀಡುವ ‘ಮಾ’ ಕ್ಯಾಂಟೀನ್‌ ಯೋಜನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಚಾಲನೆ ನೀಡಿದ್ದಾರೆ.

ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಸರ್ಕಾರ ಯೋಜನೆಗೆ ಚಾಲನೆ ನೀಡಿದೆ. ಮಾ ಕ್ಯಾಂಟೀನ್‌ನಲ್ಲಿ 5 ರು.ಗೆ ಒಂದು ಪ್ಲೇಟ್‌ ಅನ್ನ, ದಾಲ್‌, ತರಕಾರಿ ಅಥವಾ ಎಗ್‌ಕರಿ ದೊರೆಯಲಿದೆ. ಪ್ರತಿ ಊಟಕ್ಕೆ ಸರ್ಕಾರ 15 ರು.ಸಬ್ಸಿಡಿ ನೀಡಲಿದ್ದು, ಗ್ರಾಹಕರಿಂದ ಕೇವಲ 5 ರು. ಶುಲ್ಕ ಪಡೆಯಲಾಗುವುದು.

ಸ್ವಯಂಸೇವಾ ಸಂಸ್ಥೆಗಳು ಪ್ರತಿನಿತ್ಯ ಮಧ್ಯಾಹ್ನ 1ಗಂಟೆಯಿಂದ 3 ಗಂಟೆಯವರೆಗೆ ಕ್ಯಾಂಟೀನ್‌ ಅನ್ನು ನಡೆಸಲಿವೆ. ಹಂತ ಹಂತವಾಗಿ ರಾಜ್ಯದೆಲ್ಲೆಡೆ ‘ಮಾ’ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.