ನಕಲಿ ಟೋಲ್ ಪ್ಲಾಜಾ ನಿರ್ಮಿಸಿ ಒಂದೂವರೆ ವರ್ಷದಿಂದ ವಾಹನ ಸವಾರರ ಸುಲಿಗೆ

ಗುಜರಾತ್‌ನ (Gujarat) ಬಮನ್‌ಬೋರ್‌ ಕಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ (Bamanbore-Kutch national highway)ಈ ನಕಲಿ ಟೋಲ್‌ ಸ್ಥಾಪಿಸಿ ವಾಹನ ಸವಾರರಿಂದ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. 

extorting motorists in Bamanbore Kutch national highway by constructing fake toll plaza from 1.5years in Gujarats Morbi akb

ಹಣ ವಸೂಲಿಗಾಗಿ ಕೆಲ ಖದೀಮರು ನಾನಾವೇಷ ತೊಟ್ಟು ವಂಚನೆ ಮಾಡುವುದನ್ನು ನೀವು ನೋಡಿರಬಹುದು. ಈ ವಂಚನೆ ಜಾಲದ ಸಂತ್ರಸ್ತರು ಆಗಿರಬಹುದು. 
ನೀವು ಇದುವರೆಗೆ ನಕಲಿ ಪೊಲೀಸ್, ನಕಲಿ ಐಎಎಸ್ ಅಧಿಕಾರಿ, ನಕಲಿ ಡಾಕ್ಟರ್ ನಕಲಿ ಟೀಚರ್ ಹೀಗೆ ಹಲವು ರೀತಿಯ ನಕಲಿ ವೇಷಧಾರಿಗಳು ವಂಚನೆ ಮಾಡಿ ನಂತರ ಸಿಕ್ಕಿಬಿದ್ದ ಘಟನೆಗಳನ್ನು ನೋಡಿರಬಹುದು. ಹಣ ವಸೂಲಿಗಾಗಿ ಅನೇಕರು ನಾನಾ ವೇಷಗಳನ್ನು ತೊಡುತ್ತಾರೆ, ಜನರ ವಂಚಿಸುತ್ತಾರೆ. ಆದರೆ ಗುಜರಾತ್ ರಾಜ್ಯದಲ್ಲಿ ವಂಚಕರು ಒಂದು ಹೆಜ್ಜೆ ಮುಂದೆ ಹೋಗಿ ಜನರ ಸುಲಿಗೆ ಮಾಡುವುದಕ್ಕಾಗಿ ನಕಲಿ ಟೋಲ್‌ಗೇಟನ್ನೇ ನಿರ್ಮಿಸಿದ್ದಾರೆ. ವಿಚಿತ್ರ ಎಂದರೆ ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ಇದು ನಕಲಿ ಎಂಬುದು ಯಾರಿಗೂ ತಿಳಿದೇ ಇಲ್ಲ. !

ಗುಜರಾತ್‌ನ (Gujarat) ಬಮನ್‌ಬೋರ್‌ ಕಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ (Bamanbore-Kutch national highway)ಈ ನಕಲಿ ಟೋಲ್‌ ಸ್ಥಾಪಿಸಿ ವಾಹನ ಸವಾರರಿಂದ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಖಾಸಗಿ ಜಮೀನಿನ ನಡುವೆ ಸಾಗುವ ಹೆದ್ದಾರಿಯ ಬೈಪಾಸ್‌ನಲ್ಲಿ ನಕಲಿ ಟೋಲ್ ಪ್ಲಾಜಾ ಸ್ಥಾಪಿಸುವ ಮೂಲಕ ಕೆಲವು ಪ್ರಬಲ ವ್ಯಕ್ತಿಗಳು ಒಂದು ವರ್ಷದಿಂದ ಸರ್ಕಾರಿ ಅಧಿಕಾರಿಗಳನ್ನು ವಂಚಿಸಿ ಜನರ ಸುಲಿಗೆ ಮಾಡಿದ್ದಾರೆ. 

ಗುಜರಾತ್‌ನ ಮೊರ್ಬಿಯಲ್ಲಿ (Morbi) ಬೈಪಾಸ್‌ನಲ್ಲಿ ಸಾಗುವ ನ್ಯಾಷನಲ್ ಹೈವೇಯ ಸಮೀಪ ಖಾಸಗಿ ಭೂಮಿಯಲ್ಲಿ ನಕಲಿ ಟೋಲ್ ಪ್ಲಾಜಾವನ್ನು ಸ್ಥಾಪಿಸಲಾಗಿತ್ತು. ಈ ಟೋಲ್‌ಬೂತ್‌ಗಳಲ್ಲಿ ಅರ್ಧದಷ್ಟು ಖದೀಮರು ವಾಹನ ಸವಾರರು, ಸ್ಥಳೀಯ ಜನರು, ಪೊಲೀಸರು ಹಾಗೂ ಜಿಲ್ಲೆಯ ಉನ್ನತ ಸರ್ಕಾರಿ ಅಧಿಕಾರಿಗಳನ್ನು  ಒಂದೂವರೆ ವರ್ಷಗಳ ಕಾಲ ವಂಚಿಸಿದ್ದಾರೆ.

ಬಳ್ಳಾರಿ: ರಾತ್ರೋ ರಾತ್ರಿ ಟೋಲ್ ಗೇಟ್ ನಿರ್ಮಾಣ, ಗ್ಯಾರಂಟಿ ಹಣ ಸರಿದೂಗಿಸಲು ಸರ್ಕಾರದ ಪ್ಲಾನ್‌?

ಈ ರಾಷ್ಟ್ರೀಯ ಹೆದ್ದಾರಿಯ ಅಧಿಕೃತ ಟೋಲ್ ಆಗಿರುವ ವಘಾಸಿಯಾ ಟೋಲ್ ಪ್ಲಾಜಾದ (Vaghasia toll plaza) ವ್ಯವಸ್ಥಾಪಕ ಈ ಬಗ್ಗೆ ಮಾತನಾಡಿ, ಈ ಹೆದ್ದಾರಿಗೆ ಹೊಂದಿಕೊಂಡಿರುವ ಖಾಸಗಿ ಭೂಮಾಲೀಕರು ಒಂದೂವರೆ ವರ್ಷಗಳಿಂದ ಪ್ರತಿದಿನ ಸಾವಿರಾರು ರೂಪಾಯಿಗಳನ್ನು ಬಹಿರಂಗವಾಗಿ ಸುಲಿಗೆ ಮಾಡುತ್ತಿದ್ದಾರೆ. ಆರೋಪಿಗಳು ನಿಜವಾದ ಮಾರ್ಗದಿಂದ ವಾಹನದ ಸಂಚಾರವನ್ನು ಬೈಪಾಸ್‌ಗೆಎ ತಿರುಗಿಸುತ್ತಿದ್ದರು. ಈ ಖಾಸಗಿ ಜಾಮೀನು ವೈಟ್ ಹೌಸ್ ಸೆರಾಮಿಕ್ ಸಂಸ್ಥೆಗೆ (Vaghasia toll plaza) ಸೇರಿದ್ದಾಗಿದೆ. ಈ ಸೆರಾಮಿಕ್ ಸಂಸ್ಥೆ ವಘಾಸಿಯಾ ಗ್ರಾಮದಲ್ಲಿದ್ದು, ಪ್ರಸ್ತುತ ಸ್ಥಗಿತಗೊಂಡಿದೆ.

ಟ್ರಕ್‌ ಚಾಲಕರನ್ನು ತೆರಿಗೆ ವಸೂಲಿ ಮಾಡುವುದಕ್ಕಾಗಿಯೇ  ಬೈಪಾಸ್‌ನಲ್ಲಿ ಸಂಚರಿಸುವಂತೆ ಮಾಡಲಾಗುತ್ತಿತ್ತು ಬಳಿಕ ಅವರಿಂದ  ಅಕ್ರಮವಾಗಿ ಟೋಲ್ ವಸೂಲಿ ಮಾಡಲಾಗುತ್ತಿತ್ತು. ಕೆಲವು ವಾಹನಗಳನ್ನು ವರ್ಗಾಸಿಯಾ ಟೋಲ್ ಪ್ಲಾಜಾದ ನಿಜವಾದ ಮಾರ್ಗದಿಂದ ಬೈಪಾಸ್‌ಗೆ ತಿರುಗಿಸಿ ಅಲ್ಲಿ ಟೋಲ್ ತೆರಿಗೆ ಸಂಗ್ರಹಿಸಲಾಗುತ್ತಿದೆ ಎಂದು ನಮಗೆ ಮಾಹಿತಿ ಬಂದಿದೆ. ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ವಿವರವಾದ ದೂರು ದಾಖಲಿಸಿದ್ದಾರೆ ಎಂದು ಮೊರ್ಬಿ ಜಿಲ್ಲಾಧಿಕಾರಿ ಜಿಟಿ ಪಾಂಡ್ಯ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವೈಟ್ಹೌಸ್ ಸಿರಾಮಿಕ್ ಸಂಸ್ಥೆಯ ಮಾಲೀಕ ಅಮರ್ಶಿ ಪಟೇಲ್, ವನರಾಜ್ ಸಿಂಗ್ ಝಲ, ಹರ್‌ವಿಜಯ್ ಸಿಂಗ್ ಝಲ,ಧರ್ಮೇಂದ್ರ ಸಿಂಗ್ ಝಲ, ಯುವರಾಜ್‌ ಸಿಂಗ್ ಝಲ ಹಾಗೂ ಕೆಲ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. 

Latest Videos
Follow Us:
Download App:
  • android
  • ios