ಕೊರೋನಾ ವೈರಸ್ ಹಾವಳಿ: ಮೇ 15ರವರೆಗೆ ಶಾಲೆಗಳಿಲ್ಲ?

ಮೇ 15ರವರೆಗೆ ಶಾಲೆಗಳಿಲ್ಲ?| ಶಾಪಿಂಗ್‌ ಮಾಲ್‌, ಧಾರ್ಮಿಕ ಕೇಂದ್ರಗಳಿಗೂ ಅವಕಾಶ ಬೇಡ| ಪ್ರಧಾನಿ ಮೋದಿಗೆ ರಾಜನಾಥ್‌ ನೇತೃತ್ವದ ಸಮಿತಿಯ ಶಿಫಾರಸು

Extend Closure Of Schools Colleges Till May 15 Recommend Group Of Ministers

ನವದೆಹಲಿ(ಏ.08): ಕೊರೋನಾ ನಿಗ್ರಹಕ್ಕಾಗಿ ದೇಶಾದ್ಯಂತ ಚಾಲ್ತಿಯಲ್ಲಿರುವ 21 ದಿನಗಳ ಲಾಕ್‌ಡೌನ್‌ ತೆರವಾಗಲಿ ಅಥವಾ ವಿಸ್ತರಣೆಯಾಗಲಿ ಮೇ 15ರವರೆಗೂ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಚಟುವಟಿಕೆಗಳು ಹಾಗೂ ಶಾಪಿಂಗ್‌ ಮಾಲ್‌ಗಳನ್ನು ಮೇ 15ರವರೆಗೂ ಮುಚ್ಚುವಂತೆ ಸಚಿವರ ಸಮಿತಿ ಮಂಗಳವಾರ ಮಹತ್ವದ ಶಿಫಾರಸು ಮಾಡಿದೆ.

ಈಗ ಇರುವ ಲಾಕ್‌ಡೌನ್‌ ತೆರವಾದರೂ ಧಾರ್ಮಿಕ ಕೇಂದ್ರಗಳು, ಶಾಪಿಂಗ್‌ ಮಾಲ್‌ಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಏ.14ರಿಂದ ಕನಿಷ್ಠ ನಾಲ್ಕು ವಾರಗಳ ಕಾಲ ಕಾರ್ಯಾಚರಣೆ ಆರಂಭಿಸಲು ಅವಕಾಶ ನೀಡಬಾರದು ಎಂದು ರಾಜನಾಥ ಸಿಂಗ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವರ ಸಮಿತಿ ನಿಲುವು ಕೈಗೊಂಡಿದೆ.

ಕೊರೋನಾ ಆತಂಕ: ವಾಹನಕ್ಕೆ ಮುಗಿಬಿದ್ದು ಆಹಾರಧಾನ್ಯ ಹೊತ್ತೊಯ್ದ ಜನ!

ಕೊರೋನಾ ವೈರಸ್‌ ಮತ್ತಷ್ಟುಹರಡದಂತೆ ತಡೆಯಲು ಯಾವುದೇ ಧಾರ್ಮಿಕ ಸಂಘಟನೆಗಳ ಚಟುವಟಿಕೆಗೆ ಮೇ 15ರವರೆಗೂ ಅವಕಾಶ ನೀಡಬಾರದು ಎಂದೂ ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಕೊರೋನಾದಿಂದ ಉದ್ಭವವಾಗುವ ಪರಿಸ್ಥಿತಿಯ ಬಗ್ಗೆ ಕಾಲಕಾಲಕ್ಕೆ ನಿಗಾ ವಹಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಫಾರಸು ಮಾಡಲು ಸಚಿವರ ಸಮಿತಿಯನ್ನು ರಚನೆ ಮಾಡಲಾಗಿದೆ. ಹೀಗಾಗಿ ಈ ಸಮಿತಿಯ ಶಿಫಾರಸುಗಳು ಮಹತ್ವ ಪಡೆದುಕೊಂಡಿವೆ.

"

Latest Videos
Follow Us:
Download App:
  • android
  • ios