Asianet Suvarna News Asianet Suvarna News

Yogi death threats ಬಾಂಬ್ ಜೊತೆಗೆ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ, ಭದ್ರತೆ ಹೆಚ್ಚಿಸಿದ ಸರ್ಕಾರ!

  • ಸೇತುವೆ ಕೆಳಗೆ ಬಾಂಬ್ ಸ್ಪೋಟಿಸಲು ಯತ್ನ, ಸಂಚು ವಿಫಲಗೊಳಿಸಿದ ಪೊಲೀಸ್
  • ಬಾಂಬ್ ಜೊತೆಗೆ ಯೋಗಿ ಆದಿತ್ಯನಾಥ್ ಕೊಲೆ ಬೆದರಿಕೆ ಪತ್ರ ಪತ್ತೆ
  • ಉತ್ತರ ಪ್ರದೇಶ ಚುನಾವಣೆ ವೇಳೆ ಉಗ್ರ ದಾಳಿಗೆ ಬಹುದೊಡ್ಡ ಸಂಚು
     
Explosive timer bomb and threatening letter UP CM Yogi Adityanath found in Mahdya pradesh ckm
Author
Bengaluru, First Published Jan 26, 2022, 4:40 PM IST

ರೇವಾ(ಜ.26): ಉತ್ತರ ಪ್ರದೇಶ ಚುನಾವಣೆ(Uttar Pradesh Election 2022) ವೇಳೆ ಭಾರಿ ಉಗ್ರ ದಾಳಿಗೆ ಸಂಚು(Terror Attack) ನಡೆದಿರುವ ಸಾಧ್ಯತೆಗಳು ಕಾಣತೊಡಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ(CM Yogi Adityanath) ಕೊಲೆ ಬೆದರಿಕೆ ಪತ್ರವೊಂದು ಮಧ್ಯಪ್ರದೇಶದಲ್ಲಿ ಪತ್ತೆಯಾಗಿದೆ. ಸೇತುವೆ ಕೆಳೆಗೆ ಬಾಂಬ್ ಸ್ಫೋಟಿಸಲು ಸ್ಫೋಟಕ ಇಡಲಾಗಿತ್ತು. ಇದರ ಸನಿಹದಲ್ಲೇ ಯೋಗಿ ಆದಿತ್ಯನಾಥ್ ಕೊಲೆ ಬೆದರಿಕೆ ಪತ್ರವೂ ಪತ್ತೆಯಾಗಿದೆ. ಆದರೆ ಪೊಲೀಸರ(Police) ಕಾರ್ಯಾಚರಣೆಯಿಂದ ಬಾಂಬ್ ನಿಷ್ಕ್ರೀಯಗೊಳಿಸಲಾಗಿದೆ.

ಮಧ್ಯಪ್ರದೇಶದ(Mahdya Pradesh) ರೇವಾ ಜೆಲ್ಲೆಯ ರಾಷ್ಟ್ರೀಯ ಹೆದ್ದಾರಿ 30ರಲ್ಲಿನ ಸೇತುವೆ ಕೆಳಗೆ ಭಾರಿ ಸ್ಫೋಟಕ ಬಾಂಬ್(Bomb) ಇಡಲಾಗಿತ್ತು. ಈ ಸ್ಫೋಟಕ ಸನಿಹದಲ್ಲಿ ಯೋಗಿ ಆದಿತ್ಯನಾಥ್ ಕೊಲೆ ಬೆದರಿಕೆ(Death Threats) ಪತ್ರವೂ ಪತ್ತೆಯಾಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವ ಉಗ್ರರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ ಕೆಳಗೆ ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದಾರೆ. ಆದರೆ ಪೊಲೀಸರ ಕಾರ್ಯಾಚರಣೆಯಿಂದ ಬಾಂಬ್ ಪತ್ತೆಯಾಗಿದೆ. ತಕ್ಷಣವೆ ಬಾಂಬ್ ನಿಷ್ಕ್ರೀಯದಳ ಸ್ಥಳಕ್ಕೆ ಆಗಮಿಸಿ ಬಾಂಬ್ ನಿಷ್ಕ್ರೀಯಗೊಳಿಸಿದ್ದಾರೆ.

UP Election 2022 ಉತ್ತರ ಪ್ರದೇಶ ಚುನಾವಣಾ ಅಖಾಡಕ್ಕೆ ಚಾಣಾಕ್ಷನ ಎಂಟ್ರಿ, ಅಮಿತ್ ಶಾ ಮನೆ ಮನೆ ಪ್ರಚಾರ ಆರಂಭ!

ಸಂಪೂರ್ಣ ಪ್ರದೇಶವನ್ನು ಸುತ್ತುವರೆದೆ ಪೊಲೀಸರಿಗೆ ಕೊಲೆ ಬೆದರಿಕೆ ಪತ್ರ ಪತ್ತೆಯಾಗಿದೆ. ಈ ಪತ್ರದಲ್ಲಿ ಹಿಂದುತ್ವ ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಕೊಲ್ಲುವುದಾಗಿ ಬರೆಯಲಾಗಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಇರಬಾರದು ಎಂಬುದಾಗಿ ಪತ್ರದಲ್ಲಿ ಬರೆಯಲಾಗಿದೆ. ಉತ್ತರ ಪ್ರದೇಶ ಚುನಾವಣೆ ವೇಳೆ ಉಗ್ರ ದಾಳಿ ಸಂಭವ ಹೆಚ್ಚಿದೆ ಎಂದು ಗುಪ್ತಚರ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಸ್ಫೋಟಕ ಬಾಂಬ್ ಹಾಗೂ ಕೊಲೆ ಬೆದರಿಕೆ ಪತ್ರ ಪತ್ತೆಯಾಗಿರುವುದು ಆತಂಕ ಮತ್ತಷ್ಟು ಹೆಚ್ಚಿಸಿದೆ.

ರೇವಾ ಜಿಲ್ಲೆಯಲ್ಲಿ ಈ ರೀತಿ ಬಾಂಬ್ ಹಾಗೂ ಕೊಲೆ ಬೆದರಿಕೆ ಪತ್ರಗಳು, ಆತಂಕದ ವಾತಾವರಣ ನಿರ್ಮಾಣವಾಗುತ್ತಿರುವುದು ಇದೇ ಮೊದಲು. ರೇವಾ ಪೊಲೀಸರು ಪ್ರಕರಣದ ತನಿಕೆ ಆರಂಭಿಸಿದ್ದಾರೆ. ಎಲ್ಲಾ ಮಾಹಿತಿಗಳನ್ನು ಕಲೆಹಾಕುತ್ತಿರುವ ಪೊಲೀಸರು ಉಗ್ರರ ಸಂಚು ಬಯಲಿಗೆಯಲು ತಂಡ ರಚಿಸಿದ್ದಾರೆ.

UP Elections: ಬಿಜೆಪಿ ಮೊದಲ ಲಿಸ್ಟ್‌ ಔಟ್, 21 ನಾಯಕರಿಗೆ ಗೇಟ್‌ಪಾಸ್, ಗೋರಖ್‌ಪುರದಿಂದ ಯೋಗಿ ಸ್ಪರ್ಧೆ!

ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಂಬ್ ಇಡಲಾಗಿದ್ದು ಅತೀ ದೊಡ್ಡ ದಾಳಿಗೆ ಸಂಚು ನಡೆಸಲಾಗಿತ್ತು. ಗಣರಾಜ್ಯೋತ್ಸವ ಸಂದರ್ಭದಲ್ಲಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಹಾಗೂ ಉಗ್ರರ ತಮ್ಮ ಯೋಗಿ ಆದಿತ್ಯನಾಥ್ ಮೇಲಿನ ದಾಳಿಗೆ ಪೂರ್ವಭಾವಿಯಾಗಿ ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದರು. ಆದರೆ ಈ ದಾಳಿಯನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಆದರೆ ಯೋಗಿ ಆದಿತ್ಯನಾಥ್ ಕೊಲೆ ಬೆದರಿಕೆ ಹಾಗೂ ಉಗ್ರ ದಾಳಿ ಆತಂಕ ಹೆಚ್ಚಾಗಿದೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಾವು ಏರುತ್ತಿರುವಾಗಲೇ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆಗಳು ಹೆಚ್ಚಾಗತೊಡಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆಗಳು ಹೇಳತೊಡಗಿದೆ. ಇದು ಉಗ್ರರು ಹಾಗೂ ವಿದ್ವಂಸಕ ಕೃತ್ಯ ಎಸಗುತ್ತಿರುವವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯೋಗಿ ಆದಿತ್ಯನಾಥ್ ಮೇಲೆ ದಾಳಿಗೆ ಸಜ್ಜಾಗಿದೆ. 

ಉತ್ತರ ಪ್ರದೇಶ ಚುನಾವಣೆ 7 ಹಂತದಲ್ಲಿ ನಡೆಯಲಿದೆ.  ಫೆಬ್ರವರಿ 10 ಯಪಿ ಚುನಾವಣೆ ಆರಂಭಗೊಳ್ಳಲಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮಧ್ಯಪ್ರದೇಶದಲ್ಲಿನ ಬಾಂಬ್ ಪತ್ತೆ ಹಾಗೂ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆಯಿಂದ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ. 

ಗಣರಾಜ್ಯೋತ್ಸವ ದಿನದಂದು ದೆಹಲಿ ಮೇಲೆ ಉಗ್ರ ದಾಳಿ ಸಂಚು ನಡೆದಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ದೆಹಲಿ ಗಣರಾಜ್ಯೋತ್ಸವ ದಿನಾಚರಣೆಗೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಇದೇ ದಿನ ಮಧ್ಯ ಪ್ರದೇಶದ ಹೆದ್ದಾರಿಯಲ್ಲಿ ಬಾಂಬ್ ಪತ್ತೆಯಾಗಿರುವುದು ಇದೀಗ ಆತಂಕ ಹೆಚ್ಚಿಸಿದೆ.

Follow Us:
Download App:
  • android
  • ios