ಬಿಹಾರ ಸಿಎಂ ನಿತೀಶ್‌ ಕುಮಾರ್‌ಗೆ ಭಾರೀ ಹಿನ್ನಡೆ| ನಿತೀಶ್‌ ಸಂಪುಟದ ಮಂತ್ರಿ ಆರ್‌ಜೆಡಿಗೆ| ಶ್ಯಾಂ ರಜಕ್‌ ಅವರು ಮತ್ತೆ ಲಾಲು ಪ್ರಸಾದ್‌ ಯಾದವ್‌ ಅವರ ರಾಷ್ಟ್ರೀಯ ಜನತಾ ದಳಕ್ಕೆ

ಪಟನಾ(ಆ.18): ಬಿಹಾರ ಚುನಾವಣೆ ಸಮೀಪಿಸುತ್ತಿರುವಾಗಲೇ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯುಗೆ ಹಿನ್ನಡೆಯಾಗಿದೆ. ನಿತೀಶ್‌ ಸಂಪುಟದಲ್ಲಿ ಮಂತ್ರಿಯಾಗಿದ್ದ ಪ್ರಭಾವಿ ದಲಿತ ಮುಖಂಡ ಶ್ಯಾಂ ರಜಕ್‌ ಅವರು ಮತ್ತೆ ಲಾಲು ಪ್ರಸಾದ್‌ ಯಾದವ್‌ ಅವರ ರಾಷ್ಟ್ರೀಯ ಜನತಾ ದಳಕ್ಕೆ (ಆರ್‌ಜೆಡಿ) ಸೋಮವಾರ ಮರಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಸ್ಸಾಂ, ಬಿಹಾರ್‌ ನೆರೆ ಪರಿಹಾರಕ್ಕೆ ಅಕ್ಷಯ್ ಕುಮಾರ್ ತಲಾ 1 ಕೋಟಿ ನೆರವು

ರಜಕ್‌ ಪಕ್ಷಾಂತರದ ಸುಳಿವು ಅರಿತಿದ್ದ ನಿತೀಶ್‌ ಕುಮಾರ್‌ ಭಾನುವಾರವಷ್ಟೇ ಅವರನ್ನು ತಮ್ಮ ಸಂಪುಟದಿಂದ ವಜಾಗೊಳಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜೆಡಿಯುನಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದರು.

ಈ 10 ರಾಜ್ಯಗಳು ಕೊರೋನಾ ಗೆದ್ದರೆ ದೇಶ ಗೆದ್ದಂತೆ: ಪಿಎಂ ಮೋದಿ!

ಸೋಮವಾರ ಆರ್‌ಜೆಡಿ ಸೇರಿದ ರಜಕ್‌, ‘ನಮ್ಮ ನಾಯಕ ಲಾಲು ಅವರಿಂದ ಕಲಿತ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ತತ್ವಗಳಲ್ಲಿ ರಾಜೀ ಮಾಡಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ತಿಳಿಸಿದರು. ರಜಕ್‌ ಈ ಹಿಂದೆ ಆರ್‌ಜೆಡಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. 2009ರಲ್ಲಿ ಜೆಡಿಯು ಸೇರಿದ್ದರು.