Asianet Suvarna News Asianet Suvarna News

ಗಿಳಿ ಶಾಸ್ತ್ರ, ಜ್ಯೋತಿಷಿಗಳ ಎಕ್ಸಿಟ್ ಪೊಲ್ ಸಮೀಕ್ಷೆಗೆ ಕಠಿಣ ನಿಷೇಧ ಹೇರಿದ ಚುನಾವಣಾ ಆಯೋಗ

ನಿಷೇಧಿತ ಅವಧಿಯಲ್ಲಿ ಚುನಾವಣೋತ್ತರ ಫಲಿತಾಂಶ ಪ್ರಕಟಿಸುವಂತಿಲ್ಲ | ಮಾಧ್ಯಮಗಳಲ್ಲಿ ಜ್ಯೋತಿಷಿಗಳು ಹೇಳುವ ಭವಿಷ್ಯ, ಗಿಳಿಶಾಸ್ತ್ರ ಮತ್ತು ಇತರೆ ವಿಶ್ಲೇಷಣೆಗಳಿಗೆ ಕಡಿವಾಣ

Exit Poll Ban Applies To Astrologers Analysts: Poll Body dpl
Author
Bangalore, First Published Oct 16, 2020, 9:40 AM IST
  • Facebook
  • Twitter
  • Whatsapp

ನವದೆಹಲಿ(ಅ.16): ಚುನಾವಣೋತ್ತರ ಸಮೀಕ್ಷೆಗಳಿಗೆ ವಿಧಿಸುವ ನಿಷೇಧವು, ಮಾಧ್ಯಮಗಳಲ್ಲಿ ಜ್ಯೋತಿಷಿಗಳು ಹೇಳುವ ಭವಿಷ್ಯ, ಗಿಳಿಶಾಸ್ತ್ರ ಮತ್ತು ಇತರೆ ವಿಶ್ಲೇಷಣೆಗಳಿಗೂ ಅನ್ವಯವಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಬಿಹಾರ ವಿಧಾನಸಭೆ ಚುನಾವಣೆ ಹಾಗೂ ದೇಶದ ನಾನಾ ಭಾಗಗಳ ಉಪ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚುನಾವಣಾ ಆಯೋಗ ಈ ಸ್ಪಷ್ಟನೆ ನೀಡಿದೆ.

ನ್ಯಾಯ ಸಮ್ಮತ, ಸ್ವಾತಂತ್ರ್ಯ ಮತ್ತು ಪಾರದರ್ಶಕತೆ ಚುನಾವಣೆಗಾಗಿ ಟಿವಿ ಮಾಧ್ಯಮಗಳು ಮತ್ತು ದಿನ ಪತ್ರಿಕೆಗಳು ನಿಷೇಧಿತ ಅವಧಿಯಲ್ಲಿ ಚುನಾವಣೋತ್ತರ ಫಲಿತಾಂಶ ಪ್ರಕಟಿಸದಂತೆ ಆಯೋಗ ಗುರುವಾರ ಮಾರ್ಗಸೂಚಿ ಪ್ರಕಟಿಸಿದೆ.

ಬಿಹಾರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ: ಟೈಮ್ಸ್ ನೌ ಸಮೀಕ್ಷೆ!

ಚುನಾವಣೆ ಫಲಿತಾಂಶಕ್ಕೆ ಜನ ಕಾಯುತ್ತಿರುವ ಸಂದರ್ಭದಲ್ಲಿ ಮಾಧ್ಯಗಳು ಜ್ಯೋತಿಷಿಗಳನ್ನು ಕರೆಸಿ ಸೋಲು, ಗೆಲುವಿನ ಸಾಧ್ಯತೆಗಳನ್ನೂ, ಎಕ್ಸಿಟ್ ಪೋಲ್ ನಿರೀಕ್ಷೆಗಳನ್ನೂ ಬಿತ್ತರಿಸುತ್ತವೆ. ಇದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಈ ಸಲಹೆ ಮೊದಲ ಬಾರಿಗೆ ಮಾರ್ಚ್ 30, 2017 ರಲ್ಲಿಯೇ ನೀಡಲಾಯಿತು, ಇದರಲ್ಲಿ ಎಲೆಕ್ಷನ್ ವಾಚ್‌ಡಾಗ್ ಜನರ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126 ಎಯನ್ನು ಉಲ್ಲೇಖಿಸಲಾಗಿದೆ.

ಛಾಯಿಬಾಸ ಖಜಾನೆ ಹಗರಣ: ಲಾಲುಗೆ ಸಿಕ್ತು ಜಾಮೀನು

ಯಾವುದೇ ವ್ಯಕ್ತಿಯು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಯಾವುದೇ ಚುನಾಣೋತ್ತರ ಸಮೀಕ್ಷೆಯನ್ನು ನಡೆಸಬಾರದು ಮತ್ತು  ಪ್ರಕಟಿಸಬಾರದು ಅಥವಾ ಪ್ರಚಾರ ಮಾಡಬಾರದು. ಬೇರೆ ಯಾವುದೇ ರೀತಿಯಲ್ಲಿ ಪ್ರಸಾರ ಮಾಡಬಾರದು ಎಂದು ಇದರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

exಜ್ಯೋತಿಷಿಗಳು, ಗಿಣಿ ಶಾಸ್ತ್ರ, ರಾಜಕೀಯ ವಿಶ್ಲೇಷಕರು ಅಥವಾ ನಿಷೇಧಿತ ಅವಧಿಯಲ್ಲಿ ಯಾವುದೇ ವ್ಯಕ್ತಿಗಳು ಚುನಾವಣಾ ಫಲಿತಾಂಶಗಳನ್ನು ಯಾವುದೇ ರೂಪದಲ್ಲಿ ಅಥವಾ ಮುನ್ಸೂಚನೆಗಳ ಮೂಲಕ ಊಹಿಸುವುದನ್ನು ನಿಷೇಧಿಸಲಾಗಿದೆ. ಈ ರೀತಿ ಮಾಡಿದರೆ ಅದು RP ಕಾಯಿದೆ, 1951ರ ಸೆಕ್ಷನ್ 126ಎ ಇದರ ಸ್ಪಷ್ಟ ಉಲ್ಲಂಘನೆಯಾಗಲಿದೆ. ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಯಾವಾಗ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸುವಂತಿಲ್ಲ :

ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮೀಡಿಯಾ ಚುನಾವಣೆ ಫಲಿತಾಂಶದ ಕುರಿತು, ಸಮೀಕ್ಷೆ, ಅನಾಲಿಸಿಸ್‌ಗಳನ್ನು ಅಕ್ಟೋಬರ್ 28, 2020 ಬುಧವಾರ ಬೆಳಗ್ಗೆ 7 ಗಂಟೆಯಿಂದ ನವೆಂಬರ್ 7 ಶನಿವಾರ ಸಂಜೆ 6.30ರ ತನಕ ಪ್ರಕಟಿಸುವಂತಿಲ್ಲ.

ಕ್ವಾರೆಂಟೈನ್ ರೋಗಿಗಳಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಕೊನೆ ಸಮಯದಲ್ಲಿ ಇವರಿಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿ

Follow Us:
Download App:
  • android
  • ios