Asianet Suvarna News Asianet Suvarna News

ಛಾಯಿಬಾಸ ಖಜಾನೆ ಹಗರಣ: ಲಾಲುಗೆ ಸಿಕ್ತು ಜಾಮೀನು

ಮೇವು ಹಗರಣಕ್ಕೇ  ಸಂಬಂಧಿಸಿದ ಛಾಯಿಬಾಸ ಹಾಗೂ ದಿಯೋಘರ ಖಜಾನೆಯಿಂದ ಹಣ ತೆಗೆದ ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದು RJD ಮುಖ್ಯಸ್ಥನಿಗೆ ಬಿಗ್ ರಿಲೀಫ್. ಬಿಹಾರ ಚುನಾವಣೆ ಬೆನ್ನಲ್ಲೇ ಲಾಲುಗೆ ಬೇಲ್.

Fromer Bihar CM Lalu Prasad yadav Granted bail in Chaibasa Treasury Case
Author
Bengaluru, First Published Oct 9, 2020, 12:40 PM IST

ರಾಂಚಿ (ಅ.9): ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಕಂಬಿ ಎಣಿಸುತ್ತಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‌ಗೆ ಜಾರ್ಖಂಡ್ ಹೈ ಕೋರ್ಟ್ ಜಾಮೀನು ನೀಡಿದೆ. ಆ ಮೂಲಕ ಬಿಹಾರ ಚುನಾವಣೆಯಲ್ಲಿ ಲಾಲು ಪ್ರಭಾವ ಹೆಚ್ಚುವ ಸಾಧ್ಯತೆ ಇದ್ದು, ಇದು ನಿತೀಶ್ ಕುಮಾರ್‌ಗೆ ಮತ್ತಷ್ಟು ಕಂಟಕವಾಗಲಿದೆ. 

 

 

ಈ ಹಿಂದೆ ಸುಪ್ರೀಂ ಕೋರ್ಟ್ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲುಗೆ ಜಾಮೀನು ನಿರಾಕರಿಸಿತ್ತು. 

ಬಿಹಾರ ಚುನಾವಣೆ: ಲಾಲುಗೆ ಕಡೇ ಅವಕಾಶ

 ಮೇವು ಹಗರಣ ಸಂಬಂಧ ಆರ್‌ಜೆಡಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. 900 ಕೋಟಿ ರು. ಮೇವು ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಲಾಲೂ ಪ್ರಸಾದ್‌ ಯಾದವ್‌ಗೆ ಶಿಕ್ಷೆಯಾಗಿದ್ದಲ್ಲದೇ, ದಿಯೋಘರ್‌ ಖಜಾನೆಯಿಂದ ಹಣ ತೆಗೆದ ಪ್ರಕರಣದಲ್ಲಿಯೂ ಲಾಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೀಗ ಜಾಮೀಮು ನಿಕ್ಕರೂ ಲಾಲು ಜೈಲಲ್ಲೇ ಇರಬೇಕಾಗಿದ್ದು, ಅವರ ವಿರುದ್ಧ ಇರುವ ಧಮಕಾ ಖಜಾನೆ ಹಗರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿ ಇನ್ನೂ ವಿಚಾರಣೆಯಾಗಬೇಕಿದೆ. 

ಜಾರ್ಖಂಡ್ ಹೈ ಕೋಟ್ರ್ ಲಾಲುಗೆ 50 ಸಾವಿರು ರೂ.ನ ಎರಡು ವೈಯಕ್ತಿಕ ಬಾಂಡ್ಸ್ ಹಾಗೂ ದಂಡದ ರೂಪದಲ್ಲಿ 2 ಲಕ್ಷ ರೂ. ಠೇವಣಿ ಇಡಬೇಕೆಂದು ಆದೇಶಿಸಿದೆ. 
 

 

ಜಾರ್ಖಂಡ್‌ನ ಖಜಾನೆಯಿಂದ ಕಾನೂನು ಬಾಹಿರವಾಗಿ 33.67 ಕೋಟಿ ರೂ. ವಿತ್‌ಡ್ರಾ ಮಾಡಿದ್ದ ಲಾಲು ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಈಗಾಗಲೇ ಅರ್ಧದಷ್ಟು ಶಿಕ್ಷೆಯನ್ನು ಅನುಭವಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂದೆ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ನೀಡಿತ್ತು.  

ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕರೂ, ಜೈಲು ವಾಸ ಕೊನೆಯಾಗದ ಲಾಲು ಈಗಾಗಲೇ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಜಾಮೀನು ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂ ಕೋರ್ಟ್ ಸಂಪೂರ್ಣ ಮಾಹಿತಿ ಕೇಳಿದ್ದು, ಇದರ ವಿಚಾರಣೆ ನ.6ರಂದು ಕೋರ್ಟ್ ಕೈಗೆತ್ತಿಕೊಳ್ಳಲಿದೆ. 

Follow Us:
Download App:
  • android
  • ios