Asianet Suvarna News Asianet Suvarna News

Manipur Exit Poll 2022: ಮಣಿಪುರದಲ್ಲಿ ಕಮಲ ಅರಳೋದು ಪಕ್ಕಾ ಎಂದ ಮತಗಟ್ಟೆ ಸಮೀಕ್ಷೆಗಳು!

* ಪಂಚರಾಜ್ಯ ಚುನಾವಣೆಯ ಮತಗಟ್ಟೆ ಸಮೀಕ್ಷೆ ಬಯಲು

* ಮಣಿಪುರದಲ್ಲಿ ಕಮಲ ಅರಳೋದು ಪಕ್ಕಾ ಎಂದ ಮತಗಟ್ಟೆ ಸಮೀಕ್ಷೆಗಳು

* ಮಣಿಪುರದಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರ

BJP Likely To Be Largest Party In Manipur Exit Polls Show pod
Author
Bangalore, First Published Mar 7, 2022, 8:12 PM IST | Last Updated Mar 7, 2022, 8:12 PM IST

ಇಂಫಾಲ(ಮಾ.07): ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ಪೂರ್ಣಗೊಂಡಿದೆ. ಈ ರಾಜ್ಯದಲ್ಲಿ 60 ವಿಧಾನಸಭಾ ಸ್ಥಾನಗಳಿವೆ. 2017ರಲ್ಲಿ ಕಾಂಗ್ರೆಸ್ ಗರಿಷ್ಠ ಸ್ಥಾನಗಳನ್ನು ಪಡೆದಿದ್ದರೂ ಮಣಿಪುರದಲ್ಲಿ ಬಿಜೆಪಿ ಪಕ್ಷೇತರರೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿತ್ತು. ಅದೇ ಸಮಯದಲ್ಲಿ, ಮಣಿಪುರದಲ್ಲಿ ಚುನಾವಣೆ ಪೂರ್ಣಗೊಂಡಿದೆ. ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಹಣೆಬರಹ ಭದ್ರವಾಗಿದೆ. ಮಾರ್ಚ್ 10ರಂದು ನಿಜವಾದ ಫಲಿತಾಂಶ ಹೊರಬೀಳಲಿದೆ. ಏತನ್ಮಧ್ಯೆ, ವಿವಿಧ ಏಜೆನ್ಸಿಗಳು Exit Poll ಡೇಟಾವನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಮತಗಟ್ಟೆ ಸಮೀಕ್ಷೆಗಳು ಏನು ಹೇಳಿವೆ? ಇಲ್ಲಿದೆ ವಿವರ

ಮಣಿಪುರದಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಸರ್ಕಾರ ರಚಿಸಲು 31 ಸ್ಥಾನಗಳಲ್ಲಿ ಪಕ್ಷವೊಂದು ಗೆಲುವು ಸಾಧಿಸಬೇಕಿದೆ. ಇನ್ನು ಮತಗಟ್ಟೆ ಸಮೀಕ್ಷೆಗಳು ಮಣಿಪುರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರುವುದು ಖಚಿತ ಎಂದು ಭವಿಷ್ಯ ನುಡಿದಿವೆ. 

Zee News-DESIGNBOXED ಕೊಟ್ಟ ಮತಗಟ್ಟೆ ಸಮೀಕ್ಷೆ

ಬಿಜೆಪಿ:  23-28
ಕಾಂಗ್ರೆಸ್-10-14

ಇಂಡಿಯಾ ನ್ಯೂಸ್ ಹೇಳಿದ ಭವಿಷ್ಯ
ಬಿಜೆಪಿ:  23-28
ಕಾಂಗ್ರೆಸ್: 10-14

2017ರ ವಿಧಾನಸಭಾ ಚುನಾವಣೆಯ ಫಲಿತಾಂಶ- ಮಣಿಪುರ: 60

ಬಿಜೆಪಿ+: 21
ಕಾಂಗ್ರೆಸ್‌: 28
ಎನ್‌ಪಿಎಫ್:04
ಇತರರು: 07
ಮ್ಯಾಜಿಕ್ ನಂಬರ್: 31

Latest Videos
Follow Us:
Download App:
  • android
  • ios