Asianet Suvarna News Asianet Suvarna News

Assembly Elections| 'ಮೂರೂ ಕೃಷಿ ಕಾನೂನು ಹಿಂಪಡೆದರೂ ಯುಪಿ, ಪಂಜಾಬ್‌ನಲ್ಲಿ ಬಿಜೆಪಿಗೆ ಸೋಲು'

* ಪಂಚ ರಾಜ್ಯ ಚುನಾವಣಾ ಹೊಸ್ತಿಲಲ್ಲಿ ಕೃಷಿ ಕಾನೂನು ಹಿಂಪಡೆಯುವ ಘೋಷಣೆ

* ಕೃಷಿ ಕಾನೂನು ಹಿಂಪಡೆದರೂ ಬಿಜೆಪಿ ಗೆಲ್ಲಲ್ಲ ಎಂದ ಆರ್‌ಜೆಡಿ ನಾಯಕ

* Exclusive ಸಂದರ್ಶನದಲ್ಲಿ ಅನೇಕ ವಿಚಾರ ಬಿಚ್ಚಿಟ್ಟ ಆರ್‌ಜೆಡಿಇ ಆನಯಕ ಲಾಲು ಪ್ರಸಾದ್ ಯಾದವ್

Exclusive interview Of RJP president Lalu Prasad Says BJP will not win even after farm laws repeal pod
Author
Bangalore, First Published Nov 22, 2021, 7:12 PM IST

ಪಾಟ್ನಾ(ನ.22): ಪ್ರಧಾನಿ ನರೇಂದ್ರ ಮೋದಿಯವರು (Prime Minister Narendra Modi) ಕೃಷಿ ಕಾನೂನುಗಳನ್ನು (Farm laws) ಹಿಂಪಡೆಯುವುದಾಗಿ ಘೋಷಿಸಿದಾಗಿನಿಂದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ರಾಜಕೀಯ ಪಕ್ಷಗಳ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, ಚುನಾವಣಾ ಹೊಸ್ತಿಲಲ್ಲಿ ಎಲ್ಲಾ ನಾಯಕರು ಹೆಣೆದಿದ್ದ ರಣತಂತ್ರ ಬದಲಾಯಿಸುವಲ್ಲಿ ತಲ್ಲೀನವಾಗಿವೆ.  ಈ ನಡುವೆ ವಿವಿಧ ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಪ್ರಧಾನಿ ಮೋದಿಯವರ ಐತಿಹಾಸಿಕ ಹೆಜ್ಜೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ, ಬಿಜೆಪಿಯೇತರ ಪಕ್ಷಗಳು ದುರಹಂಕಾರದ ಸೋಲು ಎನ್ನುತ್ತಿವೆ. ಏತನ್ಮಧ್ಯೆ, ಏಷ್ಯಾನೆಟ್ ನ್ಯೂಸ್‌ (Asianet News) ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (RJD President Lalu Prasad Yadav) ಅವರ ಬಳಿ ಕೃಷಿ ಕಾನೂನುಗಳ ಕುರಿತು ಅಭಿಪ್ರಾಯವನ್ನು ಕೇಳಿದೆ. ಹೀಗಿರುವಾಗ ಈ ಹಿರಿಯ ನಾಯಕ ಕೃಷಿ ಕಾಯ್ದೆಯನ್ನು ಹಿಂಪಡೆದರೂ ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಗಳಲ್ಲಿ (Uttar Pradesh ANd Punjab Elections) ಬಿಜೆಪಿ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. 

* ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇದು ರೈತರ ಗೆಲುವು. ಅವರು ಸುಮಾರು ಒಂದು ವರ್ಷದಿಂದ ಪ್ರತಿಭಟಿಸುತ್ತಿದ್ದರು. ಆಗ ಸರ್ಕಾರ ಅವರ ಮಾತು ಕೇಳುತ್ತಿರಲಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ (ಉತ್ತರ ಪ್ರದೇಶ ಮತ್ತು ಪಂಜಾಬ್) ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲಎಂಬುವುದು ಅರಿವಿಗೆ ಬಂದು, ಈ ಪ್ರತಿಕ್ರಿಯೆಯ ಆಧಾರದ ಮೇಲೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಕಾನೂನು ಹಿಂಪಡೆದರೂ ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ.

* ರೈತ ಸಂಘಟನೆಗಳು ಎಂಎಸ್‌ಪಿ ನೀಡುವಂತೆ ಒತ್ತಾಯಿಸುತ್ತಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಗ್ರಾಮೀಣ ಆರ್ಥಿಕತೆಗೆ ಎಂಎಸ್‌ಪಿ ಬಹಳ ಮುಖ್ಯ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೂ ಅನುಕೂಲವಾಗಲಿದೆ.

* ಸದ್ಯಕ್ಕೆ ಪ್ರತಿಪಕ್ಷಗಳು ಚದುರಿ ಹೋಗಿವೆ. ಯಾರ ನಾಯಕತ್ವವನ್ನೂ ಒಪ್ಪಿಕೊಳ್ಳಲು ಯಾರೂ ಸಿದ್ಧರಿಲ್ಲ. ನೀವು ಯಾವಾಗಲೂ ಬಿಜೆಪಿ ವಿರುದ್ಧ ಧ್ವನಿ ಎತ್ತಿದ್ದೀರಿ, ಹಾಗಾದರೆ ಕೇಸರಿ ಪಕ್ಷದ ಉದಯವನ್ನು ಹೇಗೆ ಎದುರಿಸುತ್ತೀರಿ?

ಈ ಸಮಯದಲ್ಲಿ ಬೇಕಿರುವುದು ಸಂಘಟಿತ ವಿರೋಧ. ಬಿಜೆಪಿಯ ಸಿದ್ಧಾಂತವನ್ನು ವಿರೋಧಿಸುವ ಎಲ್ಲಾ ಪಕ್ಷಗಳು ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಒಂದಾಗುತ್ತವೆ ಎಂದು ನನಗೆ ಖಾತ್ರಿಯಿದೆ. ವಿರೋಧ ಪಕ್ಷಗಳ ಸಭೆ ಕರೆಯಲು ಸೋನಿಯಾ ಗಾಂಧಿ ಅವರ ಜೊತೆ ಮಾತನಾಡಿದ್ದೇನೆ. ಜನರು ಪರ್ಯಾಯಗಳನ್ನು ಬಯಸುತ್ತಾರೆ. ಈ ಸರ್ಕಾರ ಎಲ್ಲವನ್ನೂ ಮಾರುತ್ತಿದೆ. ರೈಲ್ವೆ ಮತ್ತು ಎಲ್ಐಸಿಯಲ್ಲಿ ಏನಾಗುತ್ತಿದೆ. ಅವರು ಏರ್ ಇಂಡಿಯಾವನ್ನು ಮಾರಾಟ ಮಾಡಿದ್ದಾರೆ. ದೇಶವು ಉದ್ಯೋಗ ಕೊರತೆ ಮತ್ತು ಹಣದುಬ್ಬರದಿಂದ ತೊಳಲಾಡುತ್ತಿದೆ.

* ನಿಮ್ಮ ಪ್ರಕಾರ ದೇಶ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಯಾವುದು?
 
ಏರುತ್ತಿರುವ ಹಣದುಬ್ಬರದ ಹೊರತಾಗಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ದಾಳಿಯು ದೊಡ್ಡ ಸವಾಲುಗಳಾಗಿವೆ. ಸರ್ಕಾರದಲ್ಲಿ ವನ್ ಮ್ಯಾನ್ ಶೋ ನಡೆಯುತ್ತಿದೆ. ಅವರು ಸಾರ್ವಜನಿಕರ ಸಲಹೆಯನ್ನು ತೆಗೆದುಕೊಳ್ಳುವುದಿಲ್ಲ. ಅವರು ಸಚಿವರ ಸಮಾಲೋಚನೆಯನ್ನೂ ಮಾಡುವುದಿಲ್ಲ.

* ಉತ್ತರ ಪ್ರದೇಶದಲ್ಲಿ ಆರ್‌ಜೆಡಿ ಸ್ಪರ್ಧಿಸುತ್ತಾ?

ಅಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಪ್ರಬಲ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ ನನ್ನ ಪಕ್ಷ ಸ್ಪರ್ಧಿಸುವುದಿಲ್ಲ. ಆದರೆ ನಾವು ಸಮಾಜವಾದಿ ಪಕ್ಷವನ್ನು ಬೆಂಬಲಿಸುತ್ತೇವೆ. ಆರೋಗ್ಯ ಚೆನ್ನಾಗಿದ್ದರೆ ಕೆಲವು ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುತ್ತೇನೆ.

* ಬಿಹಾರ ಸರ್ಕಾರವು ರಾಜ್ಯದಲ್ಲಿ ಮದ್ಯ ನಿಷೇಧವನ್ನು ಮರುಪರಿಶೀಲಿಸಬೇಕೇ?

2016ರಲ್ಲಿ ಬಿಹಾರದಲ್ಲಿ ನಾವು ಸರ್ಕಾರದಲ್ಲಿ ಮೃತ್ರಿ ಮಾಡಿಕೊಂಡಿದ್ದಾಗ ಮದ್ಯಪಾನ ನಿಷೇಧಿಸಲಾಗಿತ್ತು. ಈ ಬಗ್ಗೆ ನಿತೀಶ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದರು. ಅವರು ನಿರ್ಧಾರ ತೆಗೆದುಕೊಂಡ ನಂತರ ನನಗೆ ತಿಳಿಸಿದರು. ಉತ್ತರ ಪ್ರದೇಶ, ಜಾರ್ಖಂಡ್, ನೇಪಾಳ ಮತ್ತು ಪಶ್ಚಿಮ ಬಂಗಾಳದಲ್ಲಿ ಎಲ್ಲಿಯೂ ಮದ್ಯ ನಿಷೇಧವಿಲ್ಲ, ನೀವು ಅದನ್ನು ಹೇಗೆ ಜಾರಿಗೆ ತರುತ್ತೀರಿ ಎಂದು ನಾನು ಅವರನ್ನು ಕೇಳಿದೆ. ನಮ್ಮ ಗಡಿಗಳು ಅವರೊಂದಿಗೆ ಸಂಬಂಧ ಹೊಂದಿವೆ. ಈಗ ಬಿಹಾರದ ಪರಿಸ್ಥಿತಿ ನೋಡಿ. ಬಿಹಾರದಲ್ಲಿ ಪ್ರತಿದಿನವೂ ನಕಲಿ ಮದ್ಯ ಸೇವನೆಯಿಂದ ಸಾವುಗಳು ಸಂಭವಿಸುತ್ತಿವೆ. ಮದ್ಯದ ಡೆಲಿವರಿ ಕೇವಲ ಕೇವಲ ಒಂದು ಫೋನ್ ಕರೆ ಮೂಲಕ ನಡೆಯುತ್ತಿದೆ. ಬಿಹಾರದ ಪರಿಸ್ಥಿತಿ ಈಗ ನಿತೀಶ್ ಕುಮಾರ್ ಅವರ ನಿಯಂತ್ರಣದಲ್ಲಿಲ್ಲ.

* ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ಅವರ ಸ್ಪರ್ಧೆಯ ಬಗ್ಗೆ ಯಾವ ನಿರೀಕ್ಷೆ ಇದೆ?

ಬಿಹಾರದಲ್ಲೂ ಅವರೊಬ್ಬ ಪ್ರಮುಖ ನಾಯಕ. ಅನೇಕ ಅಡೆತಡೆಗಳಿದ್ದರೂ ಅವರು ಮೇಲೆದಿದ್ದಾರೆ. ಅವರು ಜನರಿಗಾಗಿ ತುಂಬಾ ಶ್ರಮಿಸುತ್ತಿದ್ದಾರೆ.

Follow Us:
Download App:
  • android
  • ios