1993ರ ರೈಲ್ವೇ ಹಗರಣ ಬಯಲಿಗೆಳೆದ ಸಿಬಿಐ ಅಧಿಕಾರಿ ಎದೆಗೆ ಬಾಣ ಗುರಿಯಿಟ್ಟ ದಾಳಿ ಮಾಡಿದ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಅಧಿಕಾರಿಯನ್ನು ಆಸ್ಪತ್ರೆ ದಾಖಲಾಗಿಸಿದೆ. 

ಲಖನೌ(ಮೇ.24) ಸೆಂಟ್ರಲ್ ಬ್ಯೂರೋ ಇನ್ವೆಸ್ಟಿಗೇಶನ್ ಅಧಿಕಾರಿ ವಿರೇಂದ್ರ ಸಿಂಗ್ ಮೇಲೆ ಭೀಕರ ದಾಳಿಯಾಗಿದೆ. 1993ರಲ್ಲಿ ರೈಲ್ವೇ ಹಗಣರವನ್ನು ಬಯಲಿಗೆಳೆದ ಈ ಸಿಬಿಐ ಅಧಿಕಾರಿ ವಿರೇಂದ್ರ ಸಿಂಗ್ ಮೇಲೆ ಬಿಲ್ಲು ಬಾಣದ ಮೂಲಕ ದಾಳಿಯಾಗಿದೆ. ಅಧಿಕಾರಿ ಎದೆಗೆ ಗುರಿಯಿಟ್ಟು ದಾಳಿ ಮಾಡಿದ್ದಾರೆ. ಉತ್ತರ ಪ್ರದೇಶಧ ಲಖನೌದ ಹಜ್ರತ್‌ಗಂಜ್ ಬಳಿ ಈ ಘಟನೆ ನಡೆದಿದೆ. ಬಾಣ ಎದೆಗೆ ಚುಚ್ಚಿ ತೀವ್ರವಾಗಿ ಗಾಯಗೊಂಡ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ರೈಲ್ವೇ ಹಗರಣದಲ್ಲಿ ಕೆಲಸ ಕಳೆದುಕೊಂಡು ಉದ್ಯೋಗಿಯೇ ಈ ದಾಳಿ ನಡೆಸಿದ್ದಾನೆ. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲಸ ಕಳೆದುಕೊಂಡ ಉದ್ಯೋಗಿಯಿಂದ ದಾಳಿ

1993ರಲ್ಲಿ ರೈಲ್ವೈಯಲ್ಲಿ ನಡೆದ ಹಗರಣವನ್ನು ವಿರೇಂದ್ರ ಸಿಂಗ್ ಬಯಲಿಗೆಳೆದಿದ್ದರು. ಈ ಹಗರಣದಲ್ಲಿ ಹಲವರು ಕೆಲಸ ಕೆಳೆದುಕೊಂಡಿದ್ದರು. ಈ ಪೈಕಿ ಬುಡಕಟ್ಟು ಸಮುದಾಯದ ದಿನೇಶ್ ಮುರ್ಮು ಕೂಡ ಕೆಲಸ ಕಳೆದುಕೊಂಡಿದ್ದರು. ಸರಿಸುಮಾರು 3 ದಶಕಗಳಿಂದ ಕೆಲಸ ಇಲ್ಲದೆ ಅಲೆದಾಡಿದ್ದ ದಿನೇಶ್ ಮುರ್ಮು ಬುಡುಕಟ್ಟ ಸಮುದಾಯದ ಬಿಲ್ಗಾರಿಯನ್ನೇ ಬಳಸಿ ಹಗರಣ ಪತ್ತೆ ಪತ್ತೆ ಹಚ್ಚಿದ ಸಿಬಿಐ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ.

ಪೊಲೀಸ್ ಠಾಣೆ, ಕೋರ್ಟ್ ಅಲೆದೆ ರೋಸಿ ಹೋದ ದಿನೇಶ್ ಮುರ್ಮು

ರೈಲ್ವೇಯಲ್ಲಿ ಜೂನ್ಯಿಯರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ದಿನೇಶ್ ಮುರ್ಮು ಈ ಹಗರಣದಲ್ಲಿ ಭಾಗಿಯಾಗಿದ್ದ. ಇದರ ಪರಿಣಾಮ ಕೆಲಸ ಕಳೆದುಕೊಂಡಿದ್ದರು. ಇತ್ತ ತಿಂಗಳಲ್ಲಿ ಒಂದೆರೆಡು ಬಾರಿ ವಿಚಾರಣೆ ಸೇರಿದಂತೆ ಕಾನೂನು ಪ್ರಕ್ರಿಯೆ ಎದುರಿಸಬೇಕಾಗಿ ಬಂದಿದೆ. ಕೋರ್ಟ್, ಪೊಲೀಸ್ ಠಾಣೆ ಅಲೆದಾಡುತ್ತಿದ್ದ ದಿನೇಶ್ ಮುರ್ಮುಗೆ ಆಕ್ರೋಶ ಹೆಚ್ಚಾಗಿದೆ. ಒಂದೆಡೆ ಕೆಲಸ ಇಲ್ಲ, ಮತ್ತೊಂದೆಡೆ ಕಾನೂನು ತೊಡಕು ದಾಳಿಗೆ ಪ್ರೇರಿಪಿಸಿದೆ. ಬಡುಕಟ್ಟ ಸಮುದಾಯದಲ್ಲೂ ಅದರಲ್ಲೂ ಕಾಡಿನ ಅಂಚಿನ ಪ್ರದೇಶದಲ್ಲಿ ವಾಸಿಸುವ ಈ ಸಮುದಾಯ ಈಗಲೂ ಬಿಲ್ಲು ಬಾಣಗಳನ್ನು ಬಳಸುತ್ತಿದೆ. ಇದೇ ಅಸ್ತ್ರವನ್ನು ದಿನೇಶ್ ದಾಳಿಗೆ ಬಳಸಿದ್ದಾರೆ.

ಕೈಯಿಂದ ತಯಾರಿಸಿದ ಬಿಲ್ಲು ಹಾಗೂ ಬಾಣವನ್ನು ಬಳಸಿಕೊಂಡಿದ್ದಾರೆ. ಈ ಬಾಣದ ಮೊನಚು ಹೆಚ್ಚಿಸಲು ತುದಿಗೆ ಮೆಟಲ್ ಬಳಸಲಾಗಿದೆ. ಈ ಮೂಲಕ ಬಾಣ ಎದೆಗೆ ತಾಗಿ ಘಾಸಿಗೊಳಿಸುವಂತೆ ತಯಾರು ಮಾಡಲಾಗಿದೆ. ಈ ದಾಳಿಗಾಗಿ ದಿನೇಶ್ ಕಳೆದ ಕೆಲ ತಿಂಗಳುಗಳಿಂದ ಕಾಡಿನಲ್ಲಿ ತರಬೇತಿ ಪಡೆದಿದ್ದ. ದೂರದಿಂದ ಗುರಿಯಿಡಲು ಭಾರಿ ತಯಾರಿ ಮಾಡಿಕೊಂಡಿದ್ದ.

ಮರದ ಪಕ್ಕ ಅಡಗಿ ಕುಳಿತು ದಾಳಿ

ಹಜ್ರತ್‌ಗಂಜ್ ಬಳಿ ಇರುವ ಸಿಬಿಐ ಕಚೇರಿ ಬಳಿ ಈ ದಾಳಿ ನಡೆದಿದೆ. ಸಿಬಿಐ ಅಧಿಕಾರಿ ವಿರೇಂದ್ರ ಸಿಂಗ್ ಹೊರಗೆ ಬರುವುದನ್ನೇ ಕಾದು ಕುಳಿತ ದಿನೇಶ್ ಮುರ್ಮು ಮರದ ಪಕ್ಕದಲ್ಲಿ ಅಡಗಿ ಕುಳಿತಿದ್ದ. ಯಾರಿಗೂ ಕಾಣದಂತೆ ಮರದ ಪಕ್ಕದಲ್ಲಿ ಅಡಗಿ ಕುಳಿತಿದ್ದ ದಿನೇಶ್ ಬಾಣವನ್ನು ಆಧಿಕಾರಿಗೆ ಎದೆಗೆ ಗುರಿಯಿಟ್ಟಿದ್ದಾರೆ. ಮಿಂಚಿನಂತೆ ಬಂದ ಬಾಣ ಅದಿಕಾರಿ ಎದೆ ಸೀಳಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಇತ್ತ ಒಂದಷ್ಟು ಸಿಬ್ಬಂದಿಗಳು ಅಧಿಕಾರಿಯ ನೆರವಿಗೆ ಧಾವಿಸಿದ್ದಾರೆ. ಅಧಿಕಾರಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.ಇತ್ತ ಇತರ ಸಿಬ್ಬಂದಿಗಳು ದಾಳಿಯಾದ ಕಡೆಗೆ ಧಾವಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ದಿನೇಶ್ ಮರ್ಮುವನ್ನು ಸ್ಥಳೀಯರ ಸಹಾಯದ ಮೂಲಕ ಸೆರೆ ಹಿಡಿದ್ದಾರೆ.