ತಂಗಿ ಸತ್ತಾಗಲೂ ರಜೆ ಕೊಡಲಿಲ್ಲ: ನಾವು ಮನುಷ್ಯರಲ್ಲವೇ? : ಪೊಲೀಸ್ ಪೇದೆಯ ಕಣ್ಣೀರು ವಿಡಿಯೋ ವೈರಲ್
ಉತ್ತರಪ್ರದೇಶದ ಪೊಲೀಸ್ ಪೇದೆಯೊಬ್ಬರ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಪೇದೆಗಳ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಭಾಘ್ಪತ್: ಉತ್ತರಪ್ರದೇಶದ ಪೊಲೀಸ್ ಪೇದೆಯೊಬ್ಬರ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಪೇದೆಗಳ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಉತ್ತರ ಪ್ರದೇಶದ ಭಾಘ್ಪತ್ ಪೊಲೀಸ್ ಠಾಣೆಯ ಪೊಲೀಸ್ ಪೇದೆಯೊಬ್ಬರು ಈ ವೀಡಿಯೋ ಮಾಡಿದ್ದು, ಪೊಲೀಸ್ ಇಲಾಖೆಯಲ್ಲಿ ಪೇದೆಗಳ ಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ. ಪೊಲೀಸ್ ಇಲಾಖೆಗೆ ಪೇದೆಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಕೆಳಮಟ್ಟದಲ್ಲಿ ಕೆಲಸ ಮಾಡುವ ಪೊಲೀಸ್ ಪೇದೆಗಳ ಸಮಸ್ಯೆಯನ್ನು ತಿಳಿಸುವ ಸಲುವಾಗಿ ಈ ವೀಡಿಯೋ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ಉತ್ತರಪ್ರದೇಶ ಪೊಲೀಸ್ ಇಲಾಖೆಯ (UP police Dapartment) 10 ರಿಂದ 12 ಕಾನ್‌ಸ್ಟೇಬಲ್‌ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದರ ಬಗ್ಗೆ ಯಾವುದೇ ಹಿರಿಯ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ, ನಿನ್ನೆಯೂ ಆಯೋಧ್ಯಾ ಹಾಗೂ ಮೀರತ್‌ನಲ್ಲಿ ತಲಾ ಒಬ್ಬೊಬ್ಬ ಪೊಲೀಸ್ ಪೇದೆಗಳು ಸಾವಿಗೆ ಶರಣಾಗಿದ್ದಾರೆ. ಆದರೆ ಯಾಕೆ ಹೀಗಾಗುತ್ತಿದೆ ಎಂಬುದನ್ನು ಒಬ್ಬರೂ ಯೋಚನೆ ಮಾಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ: ಏಕ್ ದಿನ್ ಕಾ ಇನ್ಸ್‌ಪೆಕ್ಟರ್ ಆದ ಬಾಲಕ, ಮಗುವಿನ ಆಸೆ ಪೂರೈಸಿದ ಪೊಲೀಸರು..!
ನನಗೆ ತುಂಬಾ ಬೇಸರವಾಗಿದೆ. ನನ್ನ ಸಹೋದರಿ ಜುಲೈ 20 ರಂದು ತೀರಿಕೊಂಡಳು. ಆದರೆ ಆಗಲೂ ನನಗೆ ರಜೆ ಸಿಗಲಿಲ್ಲ, ಅಲ್ಲದೇ ನಮ್ಮ ಪೋಸ್ಟಿಂಗ್‌ನ್ನು ತುಂಬಾ ದೂರಕ್ಕೆ ಹಾಕಲಾಗಿದೆ. ಬಾರ್ಡರ್ ಸ್ಕೀಮ್ ಅನ್ನು ನಿಲ್ಲಿಸುವಂತೆ ನಾನು ಮನವಿ ಮಾಡುತ್ತಿದ್ದೇನೆ, ಇದರಿಂದ ಕನಿಷ್ಠ ಮನೆಯ ಸಮೀಪವಾದರೂ ನಾವು ವಾಸವಿರಬಹುದು. ಜೊತೆಗೆ ನಮ್ಮ ಕುಟುಂಬದ ಜೊತೆ ಕಿಂಚಿಂತಾದರೂ ಕಾಲ ಕಳೆಯಬಹುದು ಎಂದು ಪೊಲೀಸ್ ಕಾನ್ಸ್‌ಟೇಬಲ್ ಮನವಿ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿರುವ ಕಾನ್ಸ್‌ಟೇಬಲ್ ತನ್ನನ್ನು ಓಂ ವೀರ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದು, ಬಾಘ್ಪತ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜುಲೈ 20 ರಂದು ನನ್ನ ಸೋದರಿ ಸಾವಿಗೀಡಾದರೂ ನನಗೆ ರಜೆ ಸಿಕ್ಕಿಲ್ಲ ಇದರಿಂದ ನಾನು ತುಂಬಾ ದುಃಖಿತನಾಗಿರುವುದಾಗಿ ಓಂ ವೀರ್ ಸಿಂಗ್ (Om veer Singh) ಹೇಳಿಕೊಂಡಿದ್ದಾರೆ.
ಟ್ವಿಟ್ಟರ್‌ನಲ್ಲಿ ವೈರಲ್ ಆಗಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಂಚಲನ ಸೃಷ್ಟಿಸಿದ್ದು, ಅನೇಕರು ಈ ವೀಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈ ವೀಡಿಯೋವನ್ನು ಯೋಗಿ ಸರ್ಕಾರಕ್ಕೆ ಟ್ಯಾಗ್ ಮಾಡಿದ್ದು, ಇದನ್ನು ನೋಡಿದರೆ ಹೃದಯ ಭಾರವಾಗುತ್ತದೆ. ಈ ಯುವಕನ ಮಾತಿನಲ್ಲಿ ಪ್ರಮಾಣಿಕತೆ ಇದೆ. ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ತುಂಬಾ ಮುಖ್ಯ, ನಮ್ಮನ್ನು ನಾವು ಸುಧಾರಿಸಿಕೊಳ್ಳಲು, ಪುನಶ್ಚೇತನಗೊಳಿಸಿಕೊಳ್ಳಲು ರಜೆಗಳು ತುಂಬಾ ಅಗತ್ಯ. ಈ ವಿಚಾರವನ್ನು ಸಿಎಂ ಯೋಗಿ ಆದಿತ್ಯನಾಥ್ ಗಂಭೀರವಾಗಿ ಪರಿಗಣಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ವಿಚಾರವನ್ನು ಎಲ್ಲರ ಗಮನಕ್ಕೆ ತಂದೆ ಈ ಯುವಕನಿಗೆ ಧನ್ಯವಾದಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
Davanagere: ಕೊಲೆ ಆರೋಪಿ 8 ಕಿ.ಮೀ. ದೂರವಿದ್ದರೂ ಪತ್ತೆಹಚ್ಚಿದ ಪೊಲೀಸ್ ಡಾಗ್ ತಾರಾ
ಹಾಗೆಯೇ ಮತ್ತೊಬ್ಬ ಬಳಕೆದಾರರು ಕೂಡ ಉತ್ತರಪ್ರದೇಶ ಎಡಿಜಿಪಿ (Uttar Pradesh) ಹಾಗೂ ಉತ್ತರ ಪ್ರದೇಶ ಪೊಲೀಸರು ಹಾಗೂ ಉತ್ತರಪ್ರದೇಶ ಸಿಎಂಗೆ ಈ ವೀಡಿಯೋ ಟ್ಯಾಗ್ ಮಾಡಿದ್ದು, ಅವರು ಕೂಡ ಮನುಷ್ಯರೇ ಈ ಯುವಕ ಹಾಗೂ ಈ ರೀತಿಯ ಸಮಸ್ಯೆ ಎದುರಿಸುತ್ತಿರುವ ಎಲ್ಲರಿಗೂ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.