Asianet Suvarna News Asianet Suvarna News

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಹೆಚ್ಚಿದ ಸಂಕಷ್ಟ, ಉಚ್ಚಾಟನೆಗೆ ನೈತಿಕ ಸಮಿತಿ ಶಿಫಾರಸು!

ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಸಿಲುಕಿರುವ ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಸಂಕಷ್ಟ ಹೆಚ್ಚಾಗಿದೆ. ಲೋಕಸಭೆ ನೈತಿಕ ಸಮಿತಿ ವರದಿ ಸಲ್ಲಿಸಿದ್ದು, ಉಚ್ಚಾಟನೆಗೆ ಶಿಫಾರಸು ಮಾಡಿದೆ. ಇದು ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿದೆ. ಇದೇ ವೇಳೆ ಟಿಎಂಸಿ ವರದಿ ಅಧ್ಯಯನಕ್ಕೆ 48 ಗಂಟೆ ಕಾಲಾವಕಾಶ ಕೇಳಿದೆ.

Ethics panel Recommends TMC MP Mahua Moitra expulsion from Membership of Lok Sabha ckm
Author
First Published Dec 8, 2023, 2:34 PM IST

ನವದೆಹಲಿ(ಡಿ.08) ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಪ್ರಶ್ನೆಗಾಗಿ ಲಂಚ ಪ್ರಕರಣದ ವರದಿ ಇಂದು ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆಕಾರಣವಾಗಿ 2 ಗಂಟೆ ಸದನ ಮುಂದೂಡಿದ ಘಟನೆ ನಡೆದಿದೆ. ಲೋಕಸಭೆ ನೈತಿಕ ಶಿಸ್ತು ಸಮಿತಿ ಈ ಕುರಿತು ವಿಚಾರಣೆ ನಡೆಸಿದೆ. ಬಳಿಕ ತಯಾರಿಸಿದ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದೆ. ತೀವ್ರ ಗದ್ದಲದ ನಡುವೆ ವರದಿ ಮಂಡಿಸಲಾಗಿದೆ. ಪ್ರಮುಖವಾಗಿ ಈ ವರದಿಯಲ್ಲಿ ಸಂಸದೆ ಮಹುವಾ ಮೊಯಿತ್ರಾರನ್ನು ಉಚ್ಚಾಟಿಸಲು ಶಿಫಾರಸು ಮಾಡಿದೆ. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. 

ಬಿಜೆಪಿ ಸಂಸದ ವಿಜಯ್ ಸೋಂಕರ್ ನೈತಿಕ ಶಿಸ್ತು ಸಮತಿ ವರದಿ ಮಂಡಿಸಿದರು. ಆದರೆ ಮಹುವಾ ಮೊಯ್ತಿರಾಗೆ ಭಾರಿ ಬೆಂಬಲ ವ್ಯಕ್ತಪಡಿಸಿದ ವಿಪಕ್ಷಗಳು, ಬಿಜೆಪಿ ವಿರುದ್ದ ಹರಿಹಾಯ್ದಿದೆ. ಇದರಿಂಗ ಸದನವನ್ನು 2 ಗಂಟೆ ಕಾಲ ಮುಂಡೂಡಲಾಗಿದೆ. ಈ ಶಿಫಾರಸು ಸಂಸತ್ತಿನ ಮೇಲೆ ನಡೆದ ದಾಳಿ ಎಂದು ಕಾಂಗ್ರೆಸ್ ಹೇಳಿದೆ. ಇದೇ ವೇಳೆ ಟಿಎಂಸಿ ಸಮಿತಿ ನೀಡಿದ ವರದಿ ಅಧ್ಯಯನಕ್ಕೆ 48 ಗಂಟೆ ಕಾಲ ಸಮಯವಕಾಶ ನೀಡಬೇಕೆಂದು ಕೋರಿದೆ.

ಪ್ರಶ್ನೆಗಾಗಿ ಲಂಚ ಪ್ರಕರಣ: ಸಂಸದರ ಸಹಾಯಕರಿಗೆ ಸಂಸತ್ತಿನ ವೆಬ್‌ಸೈಟ್‌ ಲಾಗಿನ್‌ ಕಟ್‌

ಅಷ್ಟಕ್ಕೂ ಲೋಕಸಭೆ ಶಿಸ್ತು ಸಮಿತಿ ಮಾಡಿದ ಶಿಫಾರಸುಗಳೇನು? ವಿಪಕ್ಷಗಳು ಬಿಜೆಪಿ ವಿರುದ್ದ ಮುಗಿಬೀಳಲು ಕಾರಣವೇನು? ಇಲ್ಲಿದೆ ಸಮಿತಿಯ ಶಿಫಾರಸು:


ಶಿಸ್ತು ಸಮಿತಿ ವಿಸ್ತೃತ ತನಿಖೆ ನಡೆಸಿ ಈ ಶಿಫಾರಸು ಮಾಡುತ್ತಿದೆ. ಮಹುವಾ ಮೊಯಿತ್ರಾ ಲೋಕಸಭೆ ಸದಸ್ಯರ ಪೋರ್ಟಲ್‌ನ ಲಾಗಿನ್ ಐಡಿ,ಪಾಸ್‌ವರ್ಡ್ ಸೇರಿದಂತೆ ಕೆಲ ಮಹತ್ವದ ಮಾಹಿತಿಗಳನ್ನು ಅಧಿಕೃತವಲ್ಲದ ವ್ಯಕ್ತಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಇದು ಅಕ್ರಮ ನಡವಳಿಕೆ ಹಾಗೂ ಅಸಂವಿಧಾನಿಕ ನಡೆಯಾಗಿದೆ. ಈ ಮೂಲಕ ಜವಾಬ್ದಾರಿಯುತ ಸಂಸದೆ ರಾಷ್ಟ್ರೀಯ ಭದ್ರತೆಗೆ ಸವಾಲೆಸೆದಿದ್ದಾರೆ.

ಸಂದಸೆ ಮಹುವಾ ಮೊಯಿತ್ರಾ ಈ ಕೃತ್ಯ ಗಂಭೀರವಾದದ್ದು. ಗಂಭೀರ ದೃಷ್ಕೃತ್ಯ ಎಸಗಿರುವ ಮೊಯಿತ್ರಾರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬಹದು. ಇದೇ ವೇಳೆ ಮೊಹುವಾ ಅವರನ್ನು 17ನೇ ಲೋಕಸಭೆಯ ಸದಸ್ಯತ್ವದಿಂದ ಉಚ್ಚಾಟಿಸಬಹುದು. ಇದೇ ವೇಳೆ ಮಹುವಾ ಮೊಯಿತ್ರಾ ಆಕ್ಷೇಪಾರ್ಹ, ಅನೈತಿಕ ಹಾಗೂ ಅಪರಾಧ ನಡವಳಿಕೆಯಿಂದ ನಿಗದಿತ ಸಮಯದಲ್ಲಿ ಕೇಂದ್ರ ಸರ್ಕಾರ ಕಾನೂನು ಹಾಗೂ ಸಾಂಸ್ಥಿಕ ವಿಚಾರಣೆ ನಡೆಬಹುದು.

ದುಬೈ ಮೂಲದ ಉದ್ಯಮಿ, ಎಂಪಿ ದರ್ಶನ್ ಹಿರಂದಾನಿ ಬಳಿಯಿಂದ ಅಕ್ರಮ , ಅನೈತಿಕ ಹಾಗೂ ಸದನವನ್ನೇ ಅವಹೇಳನ ಮಾಡುವ ರೀತಿಯಲ್ಲಿ ನಗದು ಹಣ, ಇತರ ಸೌಕರ್ಯಗಳನ್ನು ಪಡೆದಿರುವುದು ಅಕ್ಷೇಪಾರ್ಹವಾಗಿದೆ.  

'ರಾತ್ರಿ ಯಾರ ಜೊತೆ ಮಾತನಾಡ್ತೀರಿ..' ನೈತಿಕ ಸಮಿತಿಯ ಪ್ರಶ್ನೆಗೆ ಸಿಡಿಮಿಡಿಯಾದ ಮಹುವಾ ಮೊಯಿತ್ರಾ!

ಮಹುವಾ ಮೊಯಿತ್ರಾ ಹಾಗೂ ದರ್ಶನ್ ಹಿರಂದಾನಿ ನಡುವಿನ ನಗದು ವ್ಯವಹಾರ ಕ್ವಿಡ್ ಪ್ರೋಕೋದ ಭಾಗವಾಗಿದೆ. ಹೀಗಾಗಿ ಈ ಕುರಿತು ಭಾರತ ಸರ್ಕಾರ ಸೂಕ್ತ ತನಿಖೆ ನಡೆಸಬೇಕು. ಅಶಿಸ್ತಿನ ನಡವಳಿ, ವದಂತಿ ಹರಡಿದ ಸಮಿತಿ ಸದಸ್ಯ ಸಂಸದ ಕುನ್ವರ್ ಡ್ಯಾನಿಶ್ ಆಲಿಗೂ ಸಮಿತಿ ಎಚ್ಚರಿಕೆ ನೀಡಿ ಶಿಫಾರಸು ಮಾಡಿದೆ.  

ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ನೀಡಿದ್ದ ದೂರಿನ ಮೇರೆಗೆ ಸಭಾಪತಿಗಳು 6 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ವಿನೋದ್‌ ಕುಮಾರ್‌ ಸೋನ್‌ಕರ್‌ ನೇತೃತ್ವದಲ್ಲಿ ರಚಿಸಿದ್ದರು. ಈ ಕುರಿತು ತನಿಖೆ ನಡೆಸಿದ್ದ ಸಮಿತಿಯು, ನ.9ರಂದು ಮಹುವಾರನ್ನು ಸದನದಿಂದ ಉಚ್ಛಾಟಿಸುವಂತೆ ನಿರ್ಣಯ ಕೈಗೊಂಡಿತ್ತು. ಈ ವರದಿಯನ್ನು ಸದನ ಅನುಮೋದಿಸಿದಲ್ಲಿ ಮಹುವಾ ಮೊಯಿತ್ರಾ ಸದನದಿಂದ ಉಚ್ಛಾಟನೆಯಾಗಲಿದ್ದಾರೆ. 
 

Follow Us:
Download App:
  • android
  • ios