ಬಿಲ್ ಕಟ್ಟದೇ ಲೀಲಾ ಪ್ಯಾಲೇಸ್‌ನಿಂದ ಎಸ್ಕೇಪ್ ಆದ ಪ್ರಕರಣ: ಪುತ್ತೂರು ವ್ಯಕ್ತಿಗೆ ಜಾಮೀನು

ದಿಲ್ಲಿ ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ದುಬೈ ಅರಸನ ಆಪ್ತ ಎಂದು ಹೇಳಿಕೊಂಡು 4 ತಿಂಗಳು ತಂಗಿದ್ದಲ್ಲದೆ, 23 ಲಕ್ಷ ರು. ಬಿಲ್‌ ನೀಡದೇ ಪರಾರಿ ಆಗಿದ್ದಕ್ಕೆ ಬಂಧಿತನಾಗಿದ್ದ ಕರ್ನಾಟಕದ ಪುತ್ತೂರಿನ ವ್ಯಕ್ತಿ ಮೊಹಮ್ಮದ್‌ ಷರೀಫ್‌ಗೆ ದಿಲ್ಲಿ ಕೋರ್ಟ್‌ ಗುರುವಾರ ಜಾಮೀನು ನೀಡಿದೆ.

Escape from Leela Palace without paying bill: Puttur man granted bail akb

ನವದೆಹಲಿ: ದಿಲ್ಲಿ ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ದುಬೈ ಅರಸನ ಆಪ್ತ ಎಂದು ಹೇಳಿಕೊಂಡು 4 ತಿಂಗಳು ತಂಗಿದ್ದಲ್ಲದೆ, 23 ಲಕ್ಷ ರು. ಬಿಲ್‌ ನೀಡದೇ ಪರಾರಿ ಆಗಿದ್ದಕ್ಕೆ ಬಂಧಿತನಾಗಿದ್ದ ಕರ್ನಾಟಕದ ಪುತ್ತೂರಿನ ವ್ಯಕ್ತಿ ಮೊಹಮ್ಮದ್‌ ಷರೀಫ್‌ಗೆ ದಿಲ್ಲಿ ಕೋರ್ಟ್‌ ಗುರುವಾರ ಜಾಮೀನು ನೀಡಿದೆ. ಷರೀಫ್‌ ಬಾಕಿ ಮೊತ್ತ 23 ಲಕ್ಷ ರು. ತೀರಿಸಿದ್ದಾನೆ. ಹೀಗಾಗಿ ಆತನಿಗೆ ಜಾಮೀನು ನೀಡಲು ಆಕ್ಷೇಪ ಇಲ್ಲ ಎಂದು ಹೋಟೆಲ್‌ ಮ್ಯಾನೇಜರ್‌ ಹೇಳಿದರು. ಹೀಗಾಗಿ ಕೋರ್ಟು ಷರೀಫ್‌ಗೆ ಜಾಮೀನು ನೀಡಿತು. ಷರೀಫ್‌ ಹೋಟೆಲ್‌ನಿಂದ ಪರಾರಿ ಆದ ಬಳಿಕ ಹುಟ್ಟೂರು ಪುತ್ತೂರಿನಲ್ಲಿ ಅಡಗಿದ್ದ. ಇತ್ತೀಚೆಗೆ ಈತನ ಬಂಧನ ಆಗಿತ್ತು.

ಘಟನೆ ಹಿನ್ನೆಲೆ

ದೆಹಲಿ ಫೈವ್ ಸ್ಟಾರ್ (Leela Palace) ಹೊಟೇಲೊಂದರಲ್ಲಿ ಯುಎಇ ರಾಜಮನೆತನದ ಉದ್ಯೋಗಿ ಎಂದು ಹೇಳಿಕೊಂಡು ನಾಲ್ಕು ತಿಂಗಳ ಕಾಲ ವಾಸ್ತವ್ಯವಿದ್ದ ಮೊಹಮ್ಮದ್‌ ಷರೀಫ್‌ 23 ಲಕ್ಷ ರೂಪಾಯಿ ಬಿಲ್ ನೀಡದೇ ಹೊಟೇಲ್‌ನಿಂದ ಪರಾರಿಯಾಗಿದ್ದ. ಆತನ ವಿರುದ್ಧ ಹೊಟೇಲ್ ಸಿಬ್ಬಂದಿ ಕಳವು ಆರೋಪ ಮಾಡಿದ್ದರು.  ಕಳೆದ ವರ್ಷ ಆಗಸ್ಟ್‌ನಲ್ಲಿ ದೆಹಲಿ ಲೀಲಾ ಪ್ಯಾಲೇಸ್ ಹೊಟೇಲ್‌ಗೆ ಆಗಮಿಸಿದ ಷರೀಫ್ (Mohammad Sharif)ಅಲ್ಲಿ ರೂಮ್ ಬಾಡಿಗೆ ಪಡೆದಿದ್ದ. ಅಲ್ಲಿ ಆತ ತಾನು ಯುಎಇ (UAE)ನಿವಾಸಿಯಾಗಿದ್ದು,  ಅಬುಧಾಬಿ ರಾಜಮನೆತನದ ಶೇಖ್ ಫಲಾಹ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೊಟೇಲ್‌ ಸಿಬ್ಬಂದಿಗೆ ತಿಳಿಸಿದ್ದ. ಅದಕ್ಕೆ ತಕ್ಕಂತೆ ಆತ ದಾಖಲೆಗಳನ್ನು ಕೂಡ ನೀಡಿದ್ದ. 

23 ಲಕ್ಷ ಬಿಲ್ ಕೊಡದೆ ದೆಹಲಿ ಲೀಲಾ ಪ್ಯಾಲೇಸ್‌ನಿಂದ ಪರಾರಿಯಾದವ ಮಂಗಳೂರಿನಲ್ಲಿ ಅಂದರ್

ಈತ ಆಗಸ್ಟ್ ಒಂದರಿಂದ ನವೆಂಬರ್ 20ರವರೆಗೆ ಮೂರು ತಿಂಗಳ ಕಾಲ ಹೊಟೇಲ್‌ನಲ್ಲಿ ತಂಗಿದ್ದ ಈತ. ನವಂಬರ್ 20 ರಂದು ಹೊಟೇಲ್‌ನಿಂದ ಹೊರಟು ಹೋಗಿದ್ದ, ಈ ವೇಳೆ ಈತ ಹೊಟೇಲ್‌ನಲ್ಲಿದ್ದ ಬೆಳ್ಳಿಯ ಪಾತ್ರೆ, ಮುತ್ತಿನ ತಟ್ಟೆ ಮುಂತಾದ ಐಷಾರಾಮಿ ವಸ್ತುಗಳು ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳನ್ನು  ಎತ್ತಿಕೊಂಡು ಪರಾರಿಯಾಗಿದ್ದಾನೆ ಎಂದು ಹೊಟೇಲ್ ಸಿಬ್ಬಂದಿ ಆರೋಪಿಸಿದ್ದರು. ಈ ಬಗ್ಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು  ರಾಜ್ಯದ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತನನ್ನು ಜನವರಿ 21 ರಂದು ಬಂಧಿಸಿದ್ದರು.

ರೂಮ್ ಖಾಲಿ ಮಾಡಿದ ಆರೋಪಿ ಈ ವೇಳೆ 20 ಲಕ್ಷ ಬಿಲ್‌ಗೆ ಚೆಕ್‌ ನೀಡಿದ್ದ. ಆದರೆ ಅದು ಸರಿ ಇಲ್ಲದ ಕಾರಣ ಚೆಕ್ ಬೌನ್ಸ್ (Cheque Bounce) ಆಗಿತ್ತು. ಇದರಿಂದ ಹೊಟೇಲ್‌ಗೆ ಧೀರ್ಘ ಮೊತ್ತದ ನಷ್ಟ ಉಂಟಾಗಿತ್ತು.  ಈ ಘಟನೆಯ ನಂತರ ಹೊಟೇಲ್ ಮ್ಯಾನೇಜರ್ ಅನುಪಮ ದಾಸ್ ಗುಪ್ತಾ (Anupam Das Gupta) ಅವರು ಜನವರಿ 14 ರಂದು ದೆಹಲಿಯ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು. ದೂರನ್ನಾಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419, 420, 380ರ ಅಡಿ ಲೀಲಾ ಪ್ಯಾಲೇಸ್ ಹೊಟೇಲ್‌ನ ( Hotel Leela Palace) ಜನರಲ್ ಮ್ಯಾನೇಜರ್ ಅನುಪಮ ಅವರು ಕೇಸ್ ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ಇದಾದ ಬಳಿಕ ಹೊಟೇಲ್‌ಗೆ ಬರಬೇಕಿದ್ದ 23 ಲಕ್ಷ ರೂಪಾಯಿಯನ್ನು ಆತ ಪಾವತಿಸಿದ ಹಿನ್ನೆಲೆಯಲ್ಲಿ ಈಗ ಕೋರ್ಟ್ ಆತನಿಗೆ ಜಾಮೀನು ನೀಡಿದೆ. 

ಉಂಡು ಹೋದ ಕೊಂಡು ಹೋದ: 23 ಲಕ್ಷ ಬಿಲ್ ನೀಡದೇ ಫೈವ್ ಸ್ಟಾರ್ ಹೊಟೇಲ್‌ನಿಂದ ಪರಾರಿ

Latest Videos
Follow Us:
Download App:
  • android
  • ios