ಭಯೋತ್ಪಾದನೆ ಚಟುವಟಿಕೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ಅದರ 3 ಸದಸ್ಯರ ಮೇಲೆ ಶನಿವಾರ ಜಾರಿ ನಿರ್ದೇಶನಾಲಯ ಚಾರ್ಜ್‌ ಶೀಟ್‌ ದಾಖಲಿಸಿದೆ

ನವದೆಹಲಿ: ಭಯೋತ್ಪಾದನೆ ಚಟುವಟಿಕೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ಅದರ 3 ಸದಸ್ಯರ ಮೇಲೆ ಶನಿವಾರ ಜಾರಿ ನಿರ್ದೇಶನಾಲಯ ಚಾರ್ಜ್‌ ಶೀಟ್‌ ದಾಖಲಿಸಿದೆ. ಪರ್ವೇಜ್‌ ಅಹಮ್ಮದ್‌, ಮೊಹದ್‌ ಇಲಿಯಾಸ್‌, ಅಬ್ದುಲ್‌ ಮುಕೀತ್‌ ವಿರುದ್ಧ ಚಾಜ್‌ರ್‍ ಶೀಟ್‌ ದಾಖಲಾಗಿದೆ. ಆರೋಪಿತ ಪರ್ವೇಜ್‌ ದೆಹಲಿ ಪಿಎಫ್‌ಐ ಘಟಕದ ಅಧ್ಯಕ್ಷ, ಇಲಿಯಾಸ್‌ ಸಾಮಾನ್ಯ ಕಾರ್ಯದರ್ಶಿ ಹಾಗೂ ಮುಕೀತ್‌ ಕಾರ್ಯದರ್ಶಿಯಾಗಿದ್ದರು. ಸೆ.22ರಂದು 120 ಕೋಟಿ ರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿತ್ತು. ಈ ಮೂವರು ದೇಶದಲ್ಲಿ ಅಕ್ರಮ ಚಟುವಟಿಕೆ ನಡೆಸಲು ದಾನ, ಹವಾಲಾ ಹಾಗೂ ಬ್ಯಾಂಕ್‌ ಮೂಲಕ ಹಣ ಸಂಗ್ರಹಿಸುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಅಲ್ಲದೇ ವಿದೇಶದಿಂದಲೂ ಇವರಿಗೆ ಹಣ ದೊರಕಿರುವುದು ತಿಳಿದು ಬಂದಿದೆ.

ಅಯೋಧ್ಯೆ ಮಂದಿರ ಮುಟ್ಟಲು ಪಿಎಫ್‌ಐ ಅಲ್ಲ, ರಾವಣ, ಜಿನ್ನಾ ವಂಶಸ್ಥರಿಂದಲೂ ಸಾಧ್ಯವಿಲ್ಲ; ಈಶ್ವರಪ್ಪ
ಪಿಎಫ್ಐ ಕಾರ್ಯಕರ್ತರ ಮೇಲೆ ಹದ್ದಿನ ಕಣ್ಣು: ಪೊಲೀಸ್ ಇಲಾಖೆಗೆ ಎನ್.ಐ.ಎ ಕೊಟ್ಟ ಸೂಚನೆ ಏನು?