ವಿದೇಶಗಳಿಗೆ ತೆರಳುವ ಪ್ರಕ್ರಿಯೆ ಇನ್ನಷ್ಟು ಸುಲಭ: ವರ್ಷಾಂತ್ಯಕ್ಕೆ ಭಾರತದಲ್ಲೂ E-passports ಜಾರಿ

ವರ್ಷಾಂತ್ಯದಲ್ಲಿ ಭಾರತದಲ್ಲೂ ಇ-ಪಾಸ್‌ಪೋರ್ಚ್‌ ಜಾರಿಗೆ ಬರಲಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

end of the year e-passports will soon be implemented in India akb

ಹೈದರಾಬಾದ್‌: ವರ್ಷಾಂತ್ಯದಲ್ಲಿ ಭಾರತದಲ್ಲೂ ಇ-ಪಾಸ್‌ಪೋರ್ಚ್‌ ಜಾರಿಗೆ ಬರಲಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಡಾ. ಔಸಫ್‌ ಸಯೀದ್‌, ‘ರಾಜ್ಯ ಸರ್ಕಾರಗಳೊಂದಿಗೆ ಕೂಡಿ ವಿದೇಶಾಂಗ ಸಚಿವಾಲಯವು ಭಾರತವನ್ನು ‘ಕೌಶಲ್ಯ ರಾಜಧಾನಿ’ (ಸ್ಕಿಲ್‌ ಕ್ಯಾಪಿಟಲ್‌) ಆಗಿ ಪರಿವರ್ತಿಸುವ ಗುರಿ ಇಟ್ಟುಕೊಂಡಿದ್ದು, ವಿದೇಶಗಳಿಗೆ ಕೆಲಸಕ್ಕೆ ತೆರಳುವವರಿಗೆ ವಿಶೇಷ ತರಬೇತಿ ನೀಡಲಿದೆ. ಸಚಿವಾಲಯವು ಭಾರತೀಯರಿಗೆ ಉದ್ಯೋಗ ನೀಡಬಹುದಾದ 12 ಹೊಸ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳುವ ಪ್ರಕ್ರಿಯೆಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಇ-ಪಾಸ್‌ಪೋರ್ಸ್‌ ಅನ್ನು ಭಾರತದಲ್ಲಿ ವರ್ಷಾಂತ್ಯದಲ್ಲಿ ಜಾರಿಗೆ ತರಲಾಗುವುದು ಎಂದರು.

ಏನಿದು ಇ-ಪಾಸ್‌ಪೋರ್ಟ್‌?

ಇ-ಪಾಸ್‌ಪೋರ್ಟ್‌ ಸಾಮಾನ್ಯ ಪಾಸ್‌ಪೋರ್ಟ್‌ನಂತೆಯೇ ಇದ್ದು, ಇದರಲ್ಲಿ ಹೆಚ್ಚುವರಿ ಚಿಪ್‌ ಹಾಗೂ ಆಂಟೆನಾ ಇರುತ್ತದೆ. ಈ ಪಾಸ್‌ಪೋಸ್ಟ್‌ಗಳನ್ನು ಮಶೀನ್‌ಗಳು ರೀಡ್‌ ಮಾಡಬಹುದಾಗಿದ್ದು, ಪ್ರಕ್ರಿಯೆಯ ವೇಗ ಹೆಚ್ಚಿಸುತ್ತದೆ. ಈ ಪಾಸ್‌ಪೋರ್ಟ್‌ನಲ್ಲಿ ವ್ಯಕ್ತಿಯ 10 ಬೆರಳಚ್ಚುಗಳು, ಐರಿಸ್‌ ಸ್ಕ್ಯಾನ್‌, ಕಲರ್‌ ಫೋಟೊ ಹಾಗೂ ಡಿಜಿಟಲ್‌ ಸಹಿ ಇರುತ್ತದೆ. ಬಯೋಮೆಟ್ರಿಕ್‌ ಗುರುತಿನ ಚೀಟಿಯನ್ನು ಒಳಗೊಂಡ ಕಾರಣ ಪ್ರಯಾಣಿಕನು ಸರತಿ ಸಾಲಿನಲ್ಲಿ ನಿಲ್ಲುವ ಬದಲು ಸ್ಕ್ಯಾನ್‌ ಮಾಡಿ ಮುಂದೆ ಸಾಗಬಹುದಾಗಿದೆ.

ಈ ದೇಶಗಳ ಪಾಸ್ಪೋರ್ಟ್ ವಿಶ್ವದಲ್ಲೇ ಅತ್ಯಂತ ದುರ್ಬಲ… ಭಾರತದ ಸ್ಥಾನವೆಷ್ಟು?

Latest Videos
Follow Us:
Download App:
  • android
  • ios