ಜಮ್ಮು( ಸೆ. 16) ಭಾರತ ಚೀನಾ ಗಡಿಯಲ್ಲಿ ವಾತಾವರಣ  ಗಂಭೀರವಾಗಿರುವ ಮಧ್ಯೆ ಭಾರತೀಯ ಸೇನೆ  ಚೀನಾಕ್ಕೆ ಖಡಕ್ ಎಚ್ಚರಿಕೆ ರವಾನಿಸಿದೆ. 

ಲಡಾಕ್ ಪೂರ್ವಭಾಗದಲ್ಲಿ ಯುದ್ಧ ಮಾಡಲು ಸೇನೆ ಸರ್ವಸನ್ನದ್ಧವಾಗಿದೆ.  ಒಂದು ವೇಳೆ ಚೀನಾ ಯುದ್ಧದ ಸನ್ನಿವೇಶ ನಿರ್ಮಾಣ ಮಾಡಿದರೆ ಅದಕ್ಕೆ ತಕ್ಕ ಪಾಠ ಎದುರಿಸಬೇಕಾಗುತ್ತದೆ ಎಂದು ಸೇನೆ ಎಚ್ಚರಿಕೆ ನೀಡಿದೆ.

ಲಡಾಖ್ ಗಡಿಯಲ್ಲಿ ಭಾರತೀಯ ಸೇನೆ ಅತ್ಯಂತ ಶಕ್ತಿಶಾಲಿ ಬೋಫೋರ್ಸ್ ಫಿರಂಗಿಯನ್ನುಕಾರ್ಯಾಚರಣೆ ಸಿದ್ಧತೆಯಲ್ಲಿ ಇರಿಸುವ ನಿರ್ಧಾರವನ್ನು ಕೈಗೊಂಡಿದೆ. ಚೀನಾ ಮಾಡಿಕೊಂಡಿರುವ ಸಿದ್ಧತೆಗೆ ಹೋಲಿಕೆ ಮಾಡಿದರೆ ನಾವೇ ಮುಂದೆ ಇದ್ದೇವೆ.  ಚೀನಾದವರದ್ದು ನಗರ ಪ್ರದೇಶಕ್ಕೆ ಬೇಕಾಗುವ ಸೇನಾ ವ್ಯವಸ್ಥೆ ಸಿದ್ಧಮಾಡಿಕೊಂಡಂತೆ ಕಾಣುತ್ತಿದೆ ಎಂದಿದೆ.

ಚೀನಾ ಏನೇ ಮಾಡಿದರೂ ನಿರ್ಲಕ್ಷ್ಯ ಮಾಡುವುದು ಒಂದು ತಂತ್ರ. ಭಾರತೀಯ ಸೇನೆಯೂ ಸರ್ವಸಿದ್ಧತೆ ಮಾಡಿಕೊಂಡಿದ್ದು  ಯುದ್ಧದ ಸನ್ನಿವೇಶ ನಿರ್ಮಾಣವಾದರೆ ಪಾಠ ಕಲಿಸುತ್ತೇವೆ ಎಂದು ನಾರ್ತನ್ ಕಮಾಂಡ್ ವಕ್ತಾರ ತಿಳಿಸಿದ್ದಾರೆ.

ಸೇನೆ ಸೇರಿದ ರಫೇಲ್; ವಿಶೇಷಗಳೇನು?

ಭಾರತ ಸದಾ ಶಾಂತಿಯನ್ನು ಬಯಸುತ್ತದೆ. ತನ್ನ ಅಕ್ಕಪಕ್ಕದವರೊಂದಿಗೆ ಸೌಹಾರ್ದಯುತವಾಗಿ ಇರಲು ನೋಡುತ್ತದೆ. ಮಾತುಕತೆಗೆ ನಮ್ಮ ಮೊದಲ ಆದ್ಯತೆ. ಮಾತುಕತೆಯ ಹಂತಗಳು ನಡೆಯುತ್ತಿರುವಾಗಲೆ ಚೀನಾ ಕ್ಯಾತೆ ಮಾಡುತ್ತಿದೆ ಎಂದು ಸೇನಾ ಪ್ರಕಟಣೆ ಹೇಳಿದೆ.

ನವೆಂಬರ್ ವೇಳೆಗೆ ಇಲ್ಲಿ ಹಿಮಪಾತ ಆಗಲಿದೆ. ಉಷ್ಣಾಂಶ ಮೈನಸ್  30-40 ತಲುಪಲಿದೆ.  ಈ ವಾತಾವರಣವು ಸೇನೆ ಮೇಲೆ ಪರಿಣಾಮ ಬೀರಲಿದೆ. ಆದರೆ ಭಾರತದ ಸೈನಿಕರು ಇಂಥ ಚಳಿ ಸನ್ನಿವೇಶದಲ್ಲಿ ಶೌರ್ಯ ಪ್ರದರ್ಶನ ಮಾಡಲು ಸಕಲ ತರಬೇತಿ ಪಡೆದುಕೊಂಡಿದ್ದಾರೆ. ಸಂಚಾರ ಸಾಮರ್ಥ್ಯ, ಆರೋಗ್ಯ ಸೇವೆ, ಪಡಿತರ, ದುರಸ್ತಿ ಮತ್ತು ಪುನರ್ ವಸತಿ, ಹೀಟಿಂಗ್ ಸಿಸ್ಟಮ್, ಅತ್ಯಾಧುನಿಕ ಶಸ್ತ್ರಾಸ್ತ್ರ, ಕ್ವಾಲಿಟಿ ಬಟ್ಟೆಗಳು ಎಲ್ಲ ವಿಚಾರದಲ್ಲಿಯೂ ಸೇನೆ ಸಿದ್ಧತೆ ಮಾಡಿಕೊಂಡಿದೆ.  ಮೇನಲ್ಲಿ ಚೀನಾ ಕ್ಯಾತೆ ತೆಗೆದಾಗಲೆ ಒಂದೊಂದು ಸಿದ್ಧತೆ ಮಾಡಿಕೊಂಡು ಬರಲಾಗಿದೆ ಎಂದು ಸೇನೆ ತಿಳಿಸಿದೆ.

ವಿಶ್ದವ ಅತಿ ಎತ್ತರದ ಯುದ್ಧ ಪ್ರದೇಶ ಎಂಬ ಸಿಯಾಚಿನ್ ನ ಸರ್ವ ಭಾಗಗಳು ಭಾರತೀಯ ಸೇನೆಗೆ ಪರಿಚಯ.  ನಮಗೆ ಸಾಂಪ್ರದಾಯಿಕವಾಗಿ ಲಡಾಖ್ ನಿಂದ ತೆರಳಲು ಎರಡು ಮಾರ್ಗಗಳಿವೆ. ಜೋಜಿಲಾ(ಶ್ರೀನಗರ-ಲೇಹ್ ಹೈವೆ) ಮತ್ತು ರೊಹ್ಟಗ್ ಪಾಸಸ್(ಮನಾಲಿ-ಲೇಹ್)  ಇದರ ಜತೆ ಭಾರತದ ಮೂರನೇ ದಾರಿಯನ್ನು ದಾರ್ಚಾದ ದಿಂದ ಲೇಹ್ ಗೆ ನಿರ್ಮಾಣ ಮಾಡಿಕೊಂಡಿದೆ.  ಕೊನೆಯ ದಾರಿ ಅತಿ ಕಡಿಮೆ ದೂರವಿದ್ದು ಶೀಘ್ರವಾಗಿ ಕ್ರಮಿಸಬಹುದಾಗಿದೆ.

ಭಾರತ-ಚೀನಾ ಗಡಿ ಸಂಘರ್ಷಕ್ಕೆ ಅಸಲಿ ಕಾರಣ ಏನು?

ಅಟಲ್ ಟನಲ್ ಸಹ ನಮಗೆ ಸಹಕಾರ ನೀಡಬಲ್ಲದು.  ನಮ್ಮ ಬಳಿ ದೊಡ್ಡ ಸಂಖ್ಯೆಯ ಏರ್ ಬಸ್ ಗಳಿವೆ.  ಸೇನಾ ನಿರ್ವಹಣೆಗೆ ಇವು ನೆರವಾಗಲಿವೆ.  ಅತ್ಯಾಧುನಿಕ ಹಿಮ ತೆರವು ಯಂತ್ರಗಳು ಲಭ್ಯವಿವೆ. 

ವಿಶೇಷ ಇಂಧನ, ಲ್ಯೂಬ್ರಿಕೆಂಟ್ಸ್,  ಸೇನಾ ಸಿಬ್ಬಂದಿಯೂ ನಮ್ಮ ಬಳಿ ಇದ್ದಾರೆ.  ಸ್ಪೇರ್ ಗಳು ಸಾಕಷ್ಟು ಸಂಖ್ಯೆಯಲ್ಲಿವೆ.  ವಾಟರ್ ಪಾಯಿಂಟ್ಸ್ , ಟ್ಯೂಬ್ ವೆಲ್ ಗಳು ಸೇನೆಗೆ ಲಭ್ಯವಿದೆ.  ಸುರಕ್ಷತಾ ಕೇಂದ್ರಗಳನ್ನು ಮಾಡಿಕೊಳ್ಳಲಾಗಿದೆ. ಸೆಂಟ್ರಲ್ ಹೀಟಿಂಗ್ ಸಿಸ್ಟಮ್ ಅಳವಡಿಕೆ ಮಾಡಿಕೊಳ್ಳಲಾಗಿದೆ. ಚಿಕ್ಕ ಶಸ್ತ್ರಾಸ್ತ್ರ, ಕ್ಷಿಪಣಿ, ಟ್ಯಾಂಕ್ ಎಲ್ಲವೂ ದಾಸ್ತಾನು ಇವೆ.  ವೈದ್ಯ ಉಪಚಾರ ಸ್ಥಳಗಳನ್ನು ಗುರುತು ಮಾಡಿಕೊಳ್ಳಲಾಗಿದೆ.

ಯುದ್ಧ ಮಾಡದೆನೆ ಗೆದ್ದುಬಿಡಬಹುದು ಎಂದು ಚೀನಾ ಹಿಂದಿನಿಂದಲೂ ಭಾವಿಸಿಕೊಂಡು ಬಂದಿದೆ. ಒಂದು ವೇಳೆ ಮುಂದಕ್ಕೆ ಹೆಜ್ಜೆ ಇಟ್ಟರೆ ಅತ್ಯುತ್ತಮ ತರಬೇತಿ ಪಡೆದ ಭಾರತೀಯ ಸೇನೆಯಿಂದ ಪಾಠ ಕಲಿಯಬೇಕಾಗುತ್ತದೆ. ಚೀನಾ ಸೇನೆಗೂ ಭಾರತೀಯ ಸೇನಾ ಶಕ್ತಿ ನೋಡಿ ಒಳಗೊಳಗೆ ನಡುಕ ಶುರುವಾಗಿದೆ. ಚೀನಾ ಮಾಧ್ಯಮಗಳು ಸಹ ಭಾರತೀಯ ಸೇನೆಯ ಶಕ್ತಿಯನ್ನು ತಿಳಿಸಿವೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.