Asianet Suvarna News Asianet Suvarna News

ಕೇವಲ 1 ನಿಮಿಷಕ್ಕೆ ಮೊದಲು ಲಾಗ್‌ ಔಟ್ ಆಗಿದ್ದಕ್ಕೆ ಕಂಪೆನಿಯಿಂದ ವಾರ್ನಿಂಗ್ ನೋಟಿಸ್ ಪಡೆದ ಉದ್ಯೋಗಿ!

ಕಂಪನಿಯೊಂದು ಉದ್ಯೋಗಿಯನ್ನು ಕೇವಲ ಒಂದು ನಿಮಿಷ ಮುಂಚಿತವಾಗಿ ಕೆಲಸ ಬಿಟ್ಟಿದ್ದಕ್ಕಾಗಿ ಶಿಕ್ಷಿಸಿದ ಘಟನೆ ರೆಡ್ಡಿಟ್ ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಘಟನೆ ಕೆಲಸದ ಸ್ಥಳದಲ್ಲಿನ ನಿಯಮಗಳು ಮತ್ತು ಉದ್ಯೋಗದಾತರ ನಡವಳಿಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

Employee receives flak from workplace for leaving early gow
Author
First Published Aug 30, 2024, 5:45 PM IST | Last Updated Aug 30, 2024, 5:45 PM IST

ಇತ್ತೀಚೆಗೆ ರೆಡ್ಡಿಟ್ ನಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿ ತಮ್ಮ ಕಂಪನಿಯಿಂದ ಕೆಲವು  ಕೆಲಸವನ್ನು ಬೇಗ ತೊರೆದಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದ ಬಗ್ಗೆ ಬರೆದುಕೊಂಡಿದ್ದರು. ಇದು ವ್ಯಾಪಕ ಚರ್ಚೆ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಕೇವಲ ಒಂದು ನಿಮಿಷ ಮುಂಚಿತವಾಗಿ ಹೊರಟಿದ್ದಕ್ಕಾಗಿ ಅವರು ನಿರ್ದಿಷ್ಟವಾಗಿ ವಾಗ್ದಂಡನೆಗೆ ಒಳಗಾಗಿದ್ದಾರೆ.   ಈ ವಿಚಾರವು ಕಂಪನಿಯ ಅಸಮಂಜಸ ನಿರ್ಧಾರ  ಮತ್ತು ತಿಳುವಳಿಕೆಯ ಕೊರತೆಯನ್ನು ಜನರು ಪ್ರಶ್ನಿಸುವಂತೆ ಮಾಡಿದೆ.

ಉದ್ಯೋಗಿ ಹಾಕಿದ ಪೋಸ್ಟ್ ಗೆ ಇತರ ರೆಡ್ಡಿಟರ್‌ಳು  ತರಹೇವಾರಿ ಕಾಮೆಂಟ್‌ ಮಾಡಿದ್ದಾರೆ. ಕೆಲಸದ ಜಾಗದಲ್ಲಿ ನಡೆಯುವ ಕಿರಿಕಿರಿಗಳು ಮತ್ತು ಅನ್ಯಾಯ ವರ್ತನೆಯ ಬಗ್ಗೆ ಸ್ವಂತ ಅನುಭವಗಳನ್ನು ಹಂಚಿಕೊಂದಿದ್ದಾರೆ. ಕಂಪನಿಯ ನಡವಳಿಕೆಯ ಬಗ್ಗೆ ಅನೇಕರು ಹತಾಶೆ ಮತ್ತು ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ, ಕೆಲಸ ಮತ್ತು ಜೀವನದ ಸಮತೋಲನದ ಪ್ರಾಮುಖ್ಯತೆ ಮತ್ತು ಉದ್ಯೋಗದಾತರಿಂದ ಹೆಚ್ಚಿನ ತಿಳುವಳಿಕೆ ಮತ್ತು ಸಹಾನುಭೂತಿಯ ಅಗತ್ಯವನ್ನು ಎತ್ತಿ ಹೇಳಿದ್ದಾರೆ. ವ್ಯಕ್ತಿ ಹಂಚಿಕೊಂಡ ವೈರಲ್ ಪೋಸ್ಟ್ 6,200 ಕ್ಕೂ ಹೆಚ್ಚು  ಪ್ರತಿಕ್ರಿಯೆ ಪಡೆದಿದೆ.  ಹಲವು ಮಂದಿ ಸಲಹೆಗಳನ್ನು ಕೂಡ ನೀಡಿದ್ದಾರೆ.

ಓಮಾನ್‌ನಲ್ಲಿ ಭೀಕರ ಕಾರು ಅಪಘಾತ: ಬೆಳಗಾವಿ ಮೂಲದ ನಾಲ್ವರು ಸಜೀವ ದಹನ!

ಗಡಿಯಾರದ ಮುಂದೆ ನಿಂತು ಕಾಯಿರಿ. ನಿಖರವಾಗಿ 5:00 ಗಂಟೆಗೆ ಲಾಗ್‌ ಔಟ್‌ ಆಗಿ ಮತ್ತು ನಿಮ್ಮ ಕೆಲಸದ ಸಮಯ ಆರಂಭದ  ಒಂದು ಸೆಕೆಂಡಿಗೆ ಮುಂಚೆ ಲಾಗ್‌ ಇನ್ ಆಗಿ ಎಂದಿದ್ದಾರೆ.

ನಾನು ಒಮ್ಮೆ ಮೂರು ನಿಮಿಷ ತಡವಾಗಿ ಬಂದೆ. ಆ ದಿನ ನನಗೆ ಮೊದಲ ಮೂವತ್ತು ನಿಮಿಷಗಳ ಕಾಲ ಉಚಿತ ಅವಧಿ ಇತ್ತು, ನಾನು ಕರೆ ಮಾಡಿ ಅಪಘಾತದ ಬಗ್ಗೆ ಕಚೇರಿಗೆ ತಿಳಿಸಿದೆ  ಮತ್ತು ಈ ಅಪಘಾತದಿಂದ ಸಂಚಾರ ದಟ್ಟಣೆಯಾಗಿ ಅದೇ ಅಪಘಾತದಲ್ಲಿ ಸುಮಾರು ಇಪ್ಪತ್ತು ಉದ್ಯೋಗಿಗಳು ಸಿಲುಕಿದ್ದರು. ನಾನು ತಡವಾಗಿ ಬರುತ್ತಿದ್ದರಿಂದ ಅರ್ಧ ದಿನ ಡಾಕ್ ಮಾಡಲಾಗುವುದು ಎಂದು ನನಗೆ ತಿಳಿಸಲಾಯಿತು.

ಸೌಜನ್ಯಾ ಹತ್ಯೆ ಪ್ರಕರಣ ಕುಟುಂಬಕ್ಕೆ ಮತ್ತೆ ನಿರಾಸೆ, ಮೂರು ಅರ್ಜಿ ವಜಾಗೊಳಿಸಿದ ಹೈಕೋರ್ಟ್!

ಹೀಗಾಗಿ ನಾನು ಹೊರಡುತ್ತಿದ್ದೇನೆ ಮತ್ತು ನಾಲ್ಕು ಗಂಟೆ ಕೆಲಸ ಮಾಡುತ್ತೇನೆ ಎಂದು ನಾನು ಕಚೇರಿಗೆ ತಿಳಿಸಿದೆ.  ನಂತರ ದಿನದ ದ್ವಿತೀಯಾರ್ಧದವರೆಗೆ ಸ್ಥಳೀಯ ಪುಸ್ತಕದಂಗಡಿಯಲ್ಲಿ ಸುತ್ತಾಡಿದೆ.  ನಾಲ್ಕು ಗಂಟೆಗಳ ಕಾಲ ಸಮಯ ಕಳೆಯಬೇಕಿತ್ತು. ನಾನು ಇಲ್ಲಿ ಹೇಳುವ ಪಾಯಿಂಟ್ ಎಂದರೆ. ಕಂಪೆನಿಯ ನಿಯಮಗಳು ಕಠೋರವಾಗಿದ್ದರೆ, ನಿಯಮಗಳ ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ  ಸಮಯ ನೀಡಬೇಡಿ. ಮೊದಲೇ ಚೆಕ್ ಇನ್ ಮಾಡಬೇಡಿ. ತಡಮಾಡಬೇಡಿ. ನಿಮ್ಮ ಪ್ರೀ ಟೈಂ ಅನ್ನು ಅಥವಾ ನಿಮ್ಮ ಊಟವನ್ನು ಬಿಟ್ಟುಕೊಡಬೇಡಿ. ಎಂದು ರೆಡ್ಡಿಟ್ ಬಳಕೆದಾರರು ಸಲಹೆ ನೀಡಿದರು.

ಮತ್ತೊಬ್ಬ ಬಳಕೆದಾರರು, ನೀವು ಹೊರಡಬೇಕೆಂದು ಗಡಿಯಾರ ನೋಡುತ್ತಿದ್ದರೆ, ನಿಮಗೆ ಮತ್ತಿನ್ನೇನೋ ಕೆಲಸ ನೀಡುತ್ತಾರೆ. ಜಾಗರೂಕರಾಗಿರಿ ಎಂದಿದ್ದಾರೆ. 

Latest Videos
Follow Us:
Download App:
  • android
  • ios