ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ತಿರಂಗ ಹಾರಾಡುತ್ತಿದೆ. ಭಾರತದ ಸ್ವಾತಂತ್ರ್ಯ ಸಂಭ್ರಮಕ್ಕೆ ವಿಶ್ವದ ದಿಗ್ಗಜ ನಾಯಕರು ಶುಭಾಶಯ ಕೋರಿದ್ದಾರೆ.

ನವದೆಹಲಿ(ಆ.15) ಭಾರತ 77ನೇ ಸ್ವಾತಂತ್ರ್ಯ ದಿನಾಚರಿಸಿದೆ. ದೇಶದೆಲ್ಲಡೆ ತಿರಂಗ ಹಾರಾಡುತ್ತಿದೆ. ಭಾರತದ ಹೋರಾಟದ ಹಾದಿಯನ್ನು ನೆನೆದು ಸ್ವಾತಂತ್ರ್ಯ ವೀರರಿಗೆ ನಮನ ಸಲ್ಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದಾರೆ. ದೇಶದ ಅಭಿವೃದ್ಧಿಯ ಪಥವನ್ನು ಮೆಲುಕುಹಾಕಿದ್ದಾರೆ. ಇದೇ ವೇಳೆ ವಿಶ್ವದಲ್ಲಿ ಭಾರತಕ್ಕಿರುವ ಸ್ಥಾನ ಹಾಗೂ ಹೆಮ್ಮೆಯನ್ನು ಪುನರುಚ್ಚರಿಸಿದ್ದಾರೆ. ಭಾರತದ ಸ್ವಾತಂತ್ರ್ಯ ದಿನಾಚರಣಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ವಿಶ್ವದ ದಿಗ್ಗಜ ನಾಯಕರು ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಸಂದೇಶ ರವಾನಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್, ಮಾಲ್ಡೀವ್ಸ್ ಪ್ರಧಾನಿ ಸೇರಿದಂತೆ ದಿಗ್ಗಜ ನಾಯಕರು ಶುಭಾಶಯ ಕೋರಿದ್ದಾರೆ.

ವಿಶ್ವದ ಹಲವು ನಾಯಕರು, ನಾಗರೀಕರು ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿದ್ದಾರೆ. ಅಮೆರಿಕ ವಿದೇಶಾಂಗ ಇಲಾಖೆ ಭಾರತಕ್ಕೆ ಶುಭಕೋರಿದೆ. ಭಾರತ ಹಾಗೂ ಅಮೆರಿಕ ಭರವಸೆಯ ಭವಿಷ್ಯ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಹಾರ್ದಿಕ ಶುಭಾಶಯಗಳು. ನಾವು ಭಾರತೀಯರ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿದಾರಿಗಳಾಗುತ್ತಿದ್ದೇವೆ. ಭಾರತದ ಜನರ ಆಚರಣೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಉಭಯ ದೇಶದ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸೋಣ ಎಂದು ಅಮರಿಕ ಶುಭಾಶಯ ವಿನಿಮಯ ಮಾಡಿದೆ.

ಶೀಘ್ರದಲ್ಲೇ 6G ನೆಟ್‍ವರ್ಕ್ ಸೇವೆ ಆರಂಭ, ಕೆಂಪುಕೋಟೆ ಭಾಷಣದಲ್ಲಿ ಮೋದಿ ಭರವಸೆ!

ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿದ್ದಾರೆ. ಸ್ವಾತಂತ್ರ್ಯ ದಿನದಂದು ಭಾರತೀಯ ಜನತೆಗೆ ಅಭಿನಂದನೆಗಳು. ಕಳೆದ ಒಂದು ತಿಂಗಳ ಹಿಂದೆ ನನ್ನ ಸ್ನೇಹಿತ , ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನಾನು ಇಂಡೋ ಫ್ರಾನ್ಸ್ ದ್ವಿಪಕ್ಷೀಯ ಸಂಬಂಧ ಹಾಗೂ 2047ರ ದೂರದೃಷ್ಟಿ ಕುರಿತು ಹಲವು ಚರ್ಚೆಗಳನ್ನು ನಡೆಸಿದ್ದೇವು. ಭಾರತ ಯಾವತ್ತೂ ಫ್ರಾನ್ಸ್‌ನ ವಿಶ್ವಾಸಾರ್ಹ ಸ್ನೇಹಿತ ಹಾಗೂ ಪಾಲುದಾರ ಎಂದು ಮ್ಯಾಕ್ರೋನ್ ಶುಭಾಶಯ ತಿಳಿಸಿದ್ದಾರೆ.

Scroll to load tweet…

ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಕೂಡ ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ. ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ನಾನು ಪ್ರಧಾನಿ ಮೋದಿ ಹಾಗೂ ಭಾರತ ಜನತೆಗೆ ಶುಭಾಶಯ ಕೋರುತ್ತಿದ್ದೇನೆ. ಭಾರತದ ಸ್ನೇಹಪರ ಜನರಿಗೆ ನಿರಂತರ ಶಾಂತಿ, ಪ್ರಗತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸುತ್ತೇನೆ ಎಂದು ಶುಭಕೋರಿದ್ದಾರೆ.

Scroll to load tweet…

ಮುಂದಿನ ವರ್ಷಇದೇ ಸ್ಥಳ, ಇದೇ ಸಮಯ; ಕೆಂಪುಕೋಟೆಯಲ್ಲಿ ಮತ್ತೆ ಮೋದಿ ಸರ್ಕಾರದ ಭರವಸೆ!

ಭೂತಾನ್ ಪ್ರಧಾನಿ ಲೋಟೆ ತ್ಸಶೇರಿಂಗ್ ಕೂಡ ಭಾರತಕ್ಕೆ ಶುಭಕೋರಿದ್ದಾರೆ. ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ನಾನು ಭಾರತಗ ಸ್ನೇಹಿತರೊಂದಿಗೆ ಸೇರುತ್ತಿದ್ದೇನೆ, ಶುಭಾಶಯಗಳು ಎಂದು ಶುಭಕೋರಿದ್ದಾರೆ. 

Scroll to load tweet…

ಮಾಲ್ಡೀವ್ಸ್ ಪ್ರಧಾನಿ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸಮಸ್ತ ಭಾರತೀಯರಿಗೆ ಶುಭಾಶಯ ವಿನಿಮಿಯ ಮಾಡಿದ್ದಾರೆ.

Scroll to load tweet…