Asianet Suvarna News Asianet Suvarna News

ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನ ಮೊಬೈಲ್‌ ಬ್ಲಾಸ್ಟ್‌, ವಿಮಾನ ತುರ್ತು ಭೂಸ್ಪರ್ಶ

AirIndia Udaipur- Delhi Flight Makes Emergency Landing: ವಿಮಾನದ ಒಳಗಡೆ ಪ್ರಯಾಣಿಕ ಬಳಸುತ್ತಿದ್ದ ಮೊಬೈಲ್‌ ಬ್ಲಾಸ್ಟ್‌ ಆದ ಕಾರಣಕ್ಕೆ ಉದಯ್‌ಪುರ-ದೆಹಲಿ ನಡುವಿನ ಏರ್‌ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್ ಆಗಿದೆ.

emergency landing Passengers mobile phone battery blast in Air India plane
Author
First Published Jul 17, 2023, 4:41 PM IST

ನವದೆಹಲಿ (ಜು.17): ರಾಜಸ್ಥಾನದ ಉದಯಪುರದಲ್ಲಿ ಸೋಮವಾರ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟಗೊಂಡಿದೆ. ಇದರಿಂದಾಗಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು. ತಾಂತ್ರಿಕ ತಪಾಸಣೆಯ ನಂತರ ವಿಮಾನವನ್ನು ದೆಹಲಿಗೆ ಕಳುಹಿಸಲಾಗಿದೆ. ಉದಯಪುರದಿಂದ ದೆಹಲಿಗೆ ಹೋಗುವ ಏರ್‌ ಇಂಡಿಯಾ ವಿಮಾನ ಇನ್ನೇನು ಟೇಕ್‌ ಆಫ್‌ ಆಯಿತು ಎನ್ನುವಾಗ ಪ್ರಯಾಣಿಕರೊಬ್ಬರ ಮೊಬೈಲ್‌ನ ಬ್ಯಾಟರಿ ಬ್ಲಾಸ್ಟ್‌ ಆಗಿದೆ. ಇದರಿಂದಾಗಿ ವಿಮಾನದಲ್ಲಿದ್ದ 140ಕ್ಕೂ ಅಧಿಕ ಪ್ರಯಾಣಿಕರು ಆತಂಕಗೊಂಡಿದ್ದರು. ತಕ್ಷಣವೇ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಲಾಯಿತು. ಎಲ್ಲಾ ಪ್ರಯಾಣಿಕರು ಸೇಫ್‌ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉದಯ್‌ಪುರದ ದಾಬೋಕ್‌ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿದ ಬಳಿಕ ದೆಹಲಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.ಏರ್‌ ಇಂಡಿಯಾ ವಿಮಾನ 470ದಲ್ಲಿ ಪ್ರಯಾಣಿಕನ ಮೊಬೈಲ್‌ ಬ್ಲಾಸ್ಟ್‌ ಆಗಿದೆ ಎಂದು ತಿಳಿದುಬಂದಿದೆ. ವಿಮಾನ ದೆಹಲಿಗೆ ಹೋಗಿ ತಲುಪುವವರೆಗೂ ವಿಮಾನದ ಒಳಗಿದ್ದ ಪ್ರಯಾಣಿಕರು ಆತಂಕದಲ್ಲಿಯೇ ಇದ್ದರು ಎನ್ನಲಾಗಿದೆ.

ಉದಯಪುರದಿಂದ ದೆಹಲಿಗೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ವಿಮಾನ ಪ್ರಯಾಣ ಬೆಳೆಸಬೇಕಿತ್ತು. ಇನ್ನೇನು ವಿಮಾನ ಟೇಕ್‌ಆಫ್‌ ಆದಾಗ ಮೊಬೈಲ್‌ ಬ್ಯಾಟರಿ ಸ್ಫೋಟವಾಗಿದೆ. ದಾಬೋಕ್‌ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾಗ ಕೆಲವು ಪ್ರಯಾಣಿಕರಿಗೆ ವಿಮಾನದಿಂದ ಹೊರಗೆ ಹೋಗುವ ಅವಕಾಶವನ್ನೂ ನೀಡಲಾಗಿತ್ತು. ಈ ವೇಳೆ ಅಧಿಕಾರಿಗಳು ಇಡೀ ವಿಮಾನದ ಕೂಲಂಕಷ ಪರಿಶೀಲನೆ ಮಾಡಿದ್ದಾರೆ.

ಕೆಲಸದ ಸಮಯ ಮುಗಿಯಿತೆಂದು ದಿಲ್ಲಿ ತಲುಪಬೇಕಿದ್ದ 300 ಜನರ ಜೈಪುರದಲ್ಲೇ ಇಳಿಸಿ ಹೋದ ಏರ್‌ ಇಂಡಿಯಾ ಪೈಲಟ್‌!

2022ರ ಏಪ್ರಿಲ್‌ 14 ರಂದು ಇದೇ ರೀತಿಯ ಘಟನೆ ನಡೆದಿತ್ತು. ದಿಬ್ರೂಗಢದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕದ ಮೊಬೈಲ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಆ ಘಟನೆಯಲ್ಲಿಯೂ ಯಾರಿಗೂ ಯಾವುದೇ ಗಾಯವಾಗಿರಲಿಲ್ಲ. ಬ್ಯಾಟರಿ ಕುರಿತಾದ ಸಮಸ್ಯೆಯಿಂದಾಗಿ ಫೋನ್‌ ಅತಿಯಾಗಿ ಬಿಸಿಯಾಗಿತ್ತು.ಇದರಿಂದಾಗಿಯೇ ಫೋನ್‌ಗೆ ಬೆಂಕಿ ಹೊತ್ತಿಕೊಂಡಿತ್ತು ಎಂದು ಬಳಿಕ ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿತ್ತು. ಫೋನ್‌ಗೆ ಬೆಂಕಿ ತಗುಲಿದ ತಕ್ಷಣವೇ ಕ್ಯಾಬಿನ್‌ ಸಿಬ್ಬಂದಿಗಳು ಇದನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದರು.

ಕಾಕ್‌ಪಿಟ್‌ಗೆ ಸ್ನೇಹಿತೆಯ ಕರೆತಂದ ಏರ್‌ ಇಂಡಿಯಾ ಪೈಲಟ್‌ ಸಸ್ಪೆಂಡ್‌

Follow Us:
Download App:
  • android
  • ios