ಚಿತೆ ಮೇಲಿದ್ದ ಮಹಿಳೆಯ ಶವ ಎತ್ತಿ ನೆಲಕ್ಕೆ ಬಡಿದು, ಕಾಲಿನಿಂದ ತುಳಿದ ಕಾಡಾನೆ!

* ಗಜರಾಜನಿಗೆ ಇದೆಂತಹಾ ಕೋಪ

* ಮಹಿಳೆಯನ್ನು ಬಲಿಡಡೆದರೂ ಕೋಪ ತೀರಲಿಲ್ಲ

* ಚಿತೆ ಮೇಲಿದ್ದ ಶವವನ್ನೇ ಎತ್ತಿ ನೆಲಕ್ಕೆ ಬಡಿದ ಆನೆ

Elephant Tramples Odisha Woman To Death Then Attacks Body During Funeral pod

ಭುವನೇಶ್ವರ(ಜೂ.12): ಒಡಿಶಾದಲ್ಲಿ 70 ವರ್ಷದ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಆದರೆ ಅಷ್ಟರಲ್ಲೇ ಆನೆಯ ಕೋಪ ಕಡಿಮೆಯಾಗಲಿಲ್ಲ. ಮಹಿಳೆಯ ಅಂತಿಮ ಸಂಸ್ಕಾರ ನಡೆಯುವಾಗ ಮತ್ತೆ ಆನೆ ಬಂದಿದೆ. ಈ ವೇಳೆ ಮಹಿಳೆಯ ಶವವನ್ನು ಎತ್ತಿ ನೆಲಕ್ಕೆ ಎಸೆದಿದ್ದು, ಬಳಿಕ ಅವನ ಕಾಲುಗಳಿಂದ ತುಳಿದು ತನ್ನ ಕೋಪ ತೋರಿಸಿದೆ..

ಘಟನೆ ಮಯೂರ್‌ಭಂಜ್ ಜಿಲ್ಲೆಯಲ್ಲಿ ನಡೆದಿದೆ. ರಾಸಗೋವಿಂದಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲೋಪಾಮುದ್ರ ನಾಯಕ್ ಮಾತನಾಡಿ, ದಾಲ್ಮಾ ವನ್ಯಜೀವಿ ಅಭಯಾರಣ್ಯದ ಬಳಿಯ ರಾಯ್‌ಪಾಲ್ ಗ್ರಾಮದ ನಿವಾಸಿ ಮಾಯಾ ಮುರ್ಮು ಅವರು ಎಂದಿನಂತೆ ಗುರುವಾರ ಬೆಳಗ್ಗೆ ಕೊಳವೆಬಾವಿಯಿಂದ ನೀರು ತರಲು ಹೋಗಿದ್ದರು. ಅವರು ತನ್ನ ಮಡಕೆಯಲ್ಲಿ ನೀರು ತುಂಬುತ್ತಿದ್ದಾಗ ಕಾಡು ಆನೆಯೊಂದು ಆಕೆಯೆಡೆ ಬಂದಿದೆ. ದಾಲ್ಮಾ ವನ್ಯಜೀವಿ ಅಭಯಾರಣ್ಯದಿಂದ ಹೊರಬಂದ ಈ ಆನೆ ಸಮೀಪದ ಹಳ್ಳಿಯಲ್ಲಿ ಅಲೆದಾಡುತ್ತಿತ್ತು ಎನ್ನಲಾಗಿದೆ.

ಮಾಯಾ ಮುರ್ಮು ಜೀವ ಬಲಿಪಡೆದ ಕಾಡಾನೆ

ಮಾಯಾ ಮುರ್ಮು ತಪ್ಪಿಸಿಕೊಳ್ಳುವ ಮುನ್ನವೇ ಆನೆ ದಾಳಿ ಮಾಡಿದೆ ಎಂದು ಲೋಪಾಮುದ್ರಾ ನಾಯಕ್ ಹೇಳಿದ್ದಾರೆ. ಆನೆಯು ಮಾಯಾ ಮುರ್ಮುವನ್ನು ತುಳಿದು ಸಾಯಿಸಿದೆ. ಆಕೆಯನ್ನು ಹಲವಾರು ಬಾರಿ ನೆಲಕ್ಕೆ ಬಡಿದು ಬಳಿಕ ಅವನ ಕಾಲುಗಳಿಂದ ತುಳಿದಿದೆ ಎಂದಿದ್ದಾರೆ. ಆನೆ ದಾಳಿಯಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಮನೆಯವರು ಹಾಗೂ ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸಂಜೆಯ ವೇಳೆಗೆ ಕುಟುಂಬದವರು ಹಾಗೂ ಗ್ರಾಮದ ಜನರು ಮಾಯಾ ಮುರ್ಮು ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಚಿತೆಯ ಮೇಲೆ ಪಾರ್ಥಿವ ಶರೀರವನ್ನು ಇಟ್ಟು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅದೇ ಆನೆ ಏಕಾಏಕಿ ಅಲ್ಲಿಗೆ ಆಗಮಿಸಿದೆ. ಆನೆಯನ್ನು ಕಂಡು ಗ್ರಾಮದ ಜನರು ಭಯಗೊಂಡಿದ್ದಾರೆ.

ಚಿತೆ ಮೇಲಿದ್ದ ಮೃತದೇಹವನ್ನು ಎತ್ತಿ ನೆಲಕ್ಕೆಸೆದ ಆನೆ

ಆನೆ ನೇರವಾಗಿ ಚಿತೆಯ ಕಡೆಗೆ ಹೋಗಿ ಮೃತದೇಹವನ್ನು ಮೇಲಕ್ಕೆತ್ತಿತು. ಬಳಿಕ ಮೃತ ದೇಹವನ್ನು ನೆಲಕ್ಕೆ ಅಪ್ಪಳಿಸಿ ಮತ್ತೆ ಕಾಲಿನಿಂದ ತುಳಿಯತೊಡಗಿದೆ. ಮೃತ ದೇಹವನ್ನು ಬಹಳ ಹೊತ್ತು ತುಳಿದು ಎಸೆದಿದೆ. ಅಂತಿಮವಾಗಿ ಎಲ್ಲೋ ಒಂದೆಡೆ ಬಿದ್ದಿದ್ದ ಮುರ್ಮು ಶವವನ್ನು ಎತ್ತಿಕೊಂಡು ಪಕ್ಕಕ್ಕೆ ಎಸೆದು ಓಡಿಹೋಗಿದೆ. ಆನೆ ಹೋದ ನಂತರ ಗ್ರಾಮದ ಜನರು ಮೃತದೇಹವನ್ನು ಮೇಲಕ್ಕೆತ್ತಿ ಚಿತೆಯ ಮೇಲೆ ಇಟ್ಟು ಅಂತಿಮ ವಿಧಿವಿಧಾನ ನೆರವೇರಿಸಿದರು.

Latest Videos
Follow Us:
Download App:
  • android
  • ios