ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದೆ. ರಾಜಕೀಯ ಪಕ್ಷಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದ್ದರೆ, ಇತ್ತ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇದೀಗ ಚುನಾವಣಾ ಆಯೋಗ ಖಡಕ್ ವಾರ್ನಿಂಗ್ ನೀಡಿದೆ.

ನವದೆಹಲಿ(ಮೇ.01); ಪಂಚಾ ರಾಜ್ಯಗಳ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಸಂಪೂರ್ಣ ಫಲಿತಾಂಶ ಹೊರಬೀಳುವ ಮೊದಲೇ ಗೆಲುವಿನ ಆಚರಣೆಗಳು ಕಂಡು ಬರುತ್ತಿದೆ. ಕೊರೋನಾ ಕಾರಣ ಎಲ್ಲಾ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ಆದರೆ ಕೊರೋನಾ ನಿಯಮ ಗಾಳಿಗೆ ತೂರಿರುವ ವಿರುದ್ಧ ಚುನಾವಣಾ ಆಯೋಗ ಗರಂ ಆಗಿದೆ.

YouTube video player

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಿನ್: ಮತ ಗಳಿಕೆಯಲ್ಲಿ ಬಿಜೆಪಿ ನಂಬರ್ ಒನ್

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಕಾರ್ಯದರ್ಶಿಗೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಯಾವುದೇ ಪಕ್ಷ, ಕಾರ್ಯಕರ್ತರು ಗೆಲುವಿನ ಸಂಭ್ರಮಾಚರಣೆ ಮಾಡಬಾರದು. ಕೊರೋನಾ ಕಾರಣ ಈಗಾಗಲೇ ಮಾರ್ಗಸೂಚಿ ಪ್ರಕಟಿಸಲಾದಿದೆ. ಇದನ್ನು ಹೊರತು ಪಡಿಸಿ ಸಂಭ್ರಮಾಚರಣೆ ಮಾಡಿದರೆ, ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದೆ.

ಚುನವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಕೆಲ ರಾಜ್ಯಗಳಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಬೀದಿಗಿಳಿದು ಸಂಭ್ರಮಿಸಿದ್ದಾರೆ. ಈ ಕುರಿತು ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಈ ವರದಿ ಆಧರಿಸಿ ಚುನಾವಣಾ ಆಯೋಗ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ವಾರ್ನಿಂಗ್ ನೀಡಿದೆ.

Scroll to load tweet…

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರು, ತಮಿಳುನಾಡಿನಲ್ಲಿ ಡಿಎಂಕೆ ಕಾರ್ಯಕರ್ತರ ಸಂಭ್ರಮಾಚರಣೆ ವಿಡಿಯೋ ವೈರಲ್ ಆಗಿದೆ. ದೇಶವನ್ನು ಕೊರೋನಾ ಮಹಾಮಾರಿಗೆ ತಳ್ಳಿದ ಈ ರೀತಿಯ ವರ್ತನೆಗಳಿಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಆಯಾ ರಾಜ್ಯಗಳೇ ಇದಕ್ಕೆ ಪೋಷಣೆ ನೀಡುತ್ತಿದೆ ಅನ್ನೋದು ವಿಪರ್ಯಾಸ.

"