ಇದೇ ಮೊದಲ ಬಾರಿಗೆ ವೋಟ್ ಫ್ರಮ್ ಹೋಮ್ ಅವಕಾಶ, ಯಾರು ಮನೆಯಿಂದ ಮತದಾನಕ್ಕೆ ಅರ್ಹ?

ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣಾ ದಿನಾಂಕ ಘೋಷಿಸಿದೆ. ಇದರ ಜೊತೆಗೆ ಕೆಲ ಮಹತ್ವ ನಿರ್ಧಾರಗಳನ್ನು ಆಯೋಗ ಘೋಷಿಸಿದೆ . ಈ ಪೈಕಿ ಇದೇ ಮೊದಲ ಬಾರಿಗೆ ವೋಟ್ ಫ್ರಮ್ ಹೋಮ್(ಮನೆಯಿಂದಲೇ ಮತದಾನ)ಕ್ಕೆ ಅವಕಾಶ ನೀಡಿದೆ. ಯಾರು ಈ ಸೌಲಭ್ಯ ಬಳಸಿ ಮತದಾನ ಮಾಡಬಹುದು?
 

Election Commission provide vote form home option for aged above 85 and persons with disabilities ckm

ನವದೆಹಲಿ(ಮಾ.16) ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ.  ದೇಶಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ. ಎಪ್ರಿಲ್ 19 ರಿಂದ ಜೂನ್1ರವರೆಗೆ 7 ಹಂತದಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ದಿನಾಂಕ ಘೋಷಣೆ ಜೊತೆಗೆ ಈ ಬಾರಿ ಸುಗಮ ಮತದಾನಕ್ಕೆ ಚುನಾವಣಾ ಆಯೋಗ ಕೆಲ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ವೋಟ್ ಫ್ರಮ್ ಹೋಮ್(ಮನೆಯಿಂದಲೇ ಮತದಾನ)ಮಾಡಲು ಅವಕಾಶ ನೀಡಲಾಗಿದೆ. ಈ ಸೌಲಭ್ಯವನ್ನು 85 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಶೇಕಡಾ 40 ರಷ್ಟು ಅಂಗವೈಕಲ್ಯ ಹೊಂದಿರುವ ಜನರಿಗೆ ನೀಡಲಾಗಿದೆ. 

ವಯಸ್ಸು ಹಾಗೂ ಆರೋಗ್ಯದ ಕಾರಣದಿಂದ 85 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ ಶೇಕಡಾ ಕನಿಷ್ಠ 40 ರಷ್ಟು ಅಂಗವೈಕ್ಯಲ್ಯ ಹೊಂದಿದವರು ಬೂತ್‌ಗೆ ತೆರಳಿ ಮತದಾನ ಮಾಡಬೇಕಿಲ್ಲ. ಮನೆಯಲ್ಲೇ ಕುಳಿತು ತಮ್ಮ ಹಕ್ಕು ಚಲಾಯಿಸಲು ಕೇಂದ್ರ ಚುನಾವಣಾ ಆಯೋಗ ಅವಕಾಶ ನೀಡಿದೆ. ಇದೇ ಮೊದಲ ಬಾರಿಗೆ ಆಯೋಗ ಈ ನಿರ್ಧಾರ ಘೋಷಿಸಿದೆ.

ಆಂಧ್ರ ಪ್ರದೇಶ ಸೇರಿ 4 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ!

ನಾಮಪತ್ರ ಸಲ್ಲಿಕೆಗೂ ಮೊದಲೇ ಆಯಾ ರಾಜ್ಯ ಚುನಾವಣಾ ಆಯೋಗ ಅಧಿಕಾರಿಗಳು, ನಿಯೋಜನೆಗೊಂಡ ಚುನವಣಾ ಅಧಿಕಾರಿಗಳು ಅರ್ಹರಿಗೆ ಮನೆಯಿಂದಲೇ ಮತದಾನ ಮಾಡಲು ಫಾರ್ಮ್ 12ಡಿ ನೀಡಲಾಗುತ್ತದೆ. ಈ ಫಾರ್ಮ್ ಪಡೆದು ಅಗತ್ಯ ಮಾಹಿತಿ ತುಂಬಿ ಚುನಾವಣಾ ಅಧಿಕಾರಿಗಳಿಗೆ ನೀಡಬೇಕು. ಈ ಅರ್ಜಿಗಳ ಪರಿಶೀಲನೆ ನಡೆಸಿದ ಚುನಾವಣಾ ಅಧಿಕಾರಿಗಳು ಅರ್ಹರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಿದ್ದಾರೆ.

ಮತದಾನದ ದಿನ ಅಧಿಕಾರಿಗಳು ಇವಿಎಂ ಜೊತೆಗೆ ಅರ್ಹ ಮತದಾರರ ಮನೆಗೆ ತೆರಳಲಿದ್ದಾರೆ. ಈ ವೇಳೆ ಅರ್ಹರು ಮನೆಯಿಂದಲೇ ಮತದಾನ ಮಾಡಬಹುದು. ಈ ಪದ್ಧತಿ ವಿಧಾನಸಭಾ ಚುನಾವಣೆ ವೇಳೆ ಕೆಲ ಭಾಗದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಇದೀಗ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಜಾರಿಯಾಗುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮುಖ್ಯಸ್ಥ ರಾಜೀವ್ ಕುಮಾರ್ ಹೇಳಿದ್ದಾರೆ.

85 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಶೇಕಡಾ 40 ರಷ್ಟು ಅಂಗವೈಕ್ಯಲದ ಮತದಾರರು ಮನೆಯಿಂದ ಮತಹಾಕಲು ಇಚ್ಚಿಸಿದರೆ ಈ ಸೌಲಭ್ಯವನ್ನು ಪಡೆಯಬಹುದು. ಇನ್ನು ಬಹುತೇಕ ಮತದಾರರು ಬೂತ್‌ಗೆ ತೆರಳಿ ಮತಹಾಕಲು ಇಚ್ಚಿಸುತ್ತಿದ್ದಾರೆ. ಈ ಪೈಕಿ ವೃದ್ಧರು, ವಿಶೇಷ ಚೇತನರಿಗೆ ಗಾಲಿ ಕುರ್ಚಿಗಳನ್ನು ಆಯೋಗ ವ್ಯವಸ್ಥೆ ಮಾಡಲಿದೆ. ಇಷ್ಟೇ ಅಲ್ಲ ಸ್ವಯಂ ಸೇವಕರು ಎಲ್ಲಾ ನೆರವು ನೀಡಲಿದ್ದಾರೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

Breaking: ಲೋಕಸಭೆಗೆ ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಮತದಾನ, ಜೂನ್‌ 4 ರಂದು ಫಲಿತಾಂಶ

ದೇಶದಲ್ಲಿ 85 ವರ್ಷ ಮೇಲ್ಪಟ್ಟ 85 ಲಕ್ಷ ಮತದಾರರಿದ್ದಾರೆ. ಇನ್ನು 88.4 ಲಕ್ಷ ವಿಶೇಷ ಚೇತನ ಮತದಾರರಿದ್ದಾರೆ. ಇದರ ಜೊತೆಗೆ 21.18 ಲಕ್ಷ ಶತಾಯುಷಿ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 18ನೇ ಲೋಕಸಭಾ ಚುನಾವಣೆಗೆ ಇದುವರೆಗೆ 97.8 ಕೋಟಿ ಮಂದಿ ಮತದಾರರಿದ್ದಾರೆ. ಈ ಪೈಕಿ 49.72 ಪುರುಷ ಮತದಾರರು ಹಾಗೂ 47.1 ಮಹಿಳಾ ಮತದಾರರಿದ್ದಾರೆ. 

2024ರ ಲೋಕಸಭಾ ಚುನಾವಣೆ ಏಪ್ರಿಲ್‌ 19 ರಿಂದ ಜೂನ್‌ 1 ರವರೆಗೆ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಘೋಷಣೆಯಾಗಲಿದೆ. ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ7 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್​‌ನಲ್ಲಿ ಮೊದಲ ಹಂತದಲ್ಲಿ ಮತದಾನವಾಗಲಿದೆ. 2ನೇ ಹಂತದ ಚುನಾವಣೆ ಮೇ 7 ರಂದು ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು  ಬೀದರ್‌ ಕ್ಷೇತ್ರಗಳಲ್ಲಿ ನಡೆಯಲಿದೆ.

Latest Videos
Follow Us:
Download App:
  • android
  • ios