ರೋಡ್‌ಶೋ, ಪಾದಯಾತ್ರೆ ನಿಷಿದ್ಧ, ಮನೆ ಪ್ರಚಾರಕ್ಕೆ 20 ಜನರು ಒವೈಸಿ ಮೇಲಿನ ದಾಳಿ: ಸ್ಟಾರ್‌ ಪ್ರಚಾರಕರ ಭದ್ರತೆಗೆ ಸೂಚನೆ ಒಳಾಂಗಣದ 500 ಜನರ ಮಿತಿ, ಮೈದಾನದ 1000 ಜನರ ಮಿತಿ ರದ್ದು

ನವದೆಹಲಿ(ಫೆ.07): ವಿಧಾನಸಭೆ ಚುನಾವಣೆ(Assembly Election) ನಡೆಯಲಿರುವ ಪಂಚರಾಜ್ಯಗಳಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ವಿಧಿಸಿದ್ದ ನಿರ್ಬಂಧಗಳನ್ನು ಕೇಂದ್ರ ಚುನಾವಣಾ ಆಯೋಗ ಸಡಿಲಿಕೆ(relaxations) ಮಾಡಿದೆ. ಒಳಾಂಗಣದಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಲು ನಿಗದಿಪಡಿಸಲಾಗಿದ್ದ 500 ಜನರ ಮಿತಿ ತೆಗೆದು, 50% ಜನರನ್ನು ಸೇರಿಸಲು ಅನುಮತಿ ನೀಡಿದೆ. ಹೊರಾಂಗಣ ಮೈದಾನಗಳಲ್ಲಿ 1000 ಜನರ ಮಿತಿ ತೆಗೆದು, ಮೈದಾನದ ಸಾಮರ್ಥ್ಯದ 30% ಜನರನ್ನು ಸೇರಿಸಲು ಅನುಮತಿ ನೀಡಿದೆ.

ಇದೇ ವೇಳೆ, ಉತ್ತರ ಪ್ರದೇಶದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ(asaduddin owaisi) ಮೇಲೆ ಗುಂಡಿನ ದಾಳಿ ನಡೆದ ಹಿನ್ನೆಲೆಯಲ್ಲಿ ಸ್ಟಾರ್‌ ಪ್ರಚಾರಕರಿಗೆ ಸೂಕ್ತ ಭದ್ರತೆ ನೀಡುವಂತೆ ಎಲ್ಲಾ ಐದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ.

Attack On Owaisi : ಓವೈಸಿ ದೀರ್ಘ ಆಯಸ್ಸಿಗಾಗಿ 101 ಮೇಕೆಗಳ ಬಲಿಕೊಟ್ಟ ಉದ್ಯಮಿ!

ಕೋವಿಡ್‌(Covid) ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ(election commission of india) ಭಾನುವಾರ ಹೊಸ ಆದೇಶ ಹೊರಡಿಸಿದ್ದು, ಅದರಲ್ಲಿ ಈ ಹಿಂದೆ ಬಹಿರಂಗ ಪ್ರಚಾರಕ್ಕೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಇದರಿಂದ ಚುನಾವಣೆ ನಡೆಯುವ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್‌ ಹಾಗೂ ಮಣಿಪುರದಲ್ಲಿ ದೊಡ್ಡ ಪ್ರಚಾರ ಸಭೆಗಳನ್ನು ನಡೆಸಲು ರಾಜಕೀಯ ಪಕ್ಷಗಳಿಗೆ ಅನುಕೂಲವಾಗಲಿದೆ. ಆದರೆ, ರೋಡ್‌ಶೋ, ಪಾದಯಾತ್ರೆ, ವಾಹನ ಯಾತ್ರೆಗಳನ್ನು ನಡೆಸಲು ಈಗಲೂ ನಿಷೇಧ ಮುಂದುವರೆಸಲಾಗಿದೆ. ಮನೆಮನೆ ಪ್ರಚಾರಕ್ಕೆ ಈ ಹಿಂದಿನ 20 ಜನರ ಮಿತಿಯೇ ಮುಂದುವರೆದಿದೆ. ರಾತ್ರಿ 8ರಿಂದ ಬೆಳಿಗ್ಗೆ 8ರವರೆಗೆ ಪ್ರಚಾರಕ್ಕೆ ನಿಷೇಧವಿದೆ.

ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನಕ್ಕೆ ಫೆ.8ರಂದು ಬಹಿರಂಗ ಪ್ರಚಾರ ಮುಕ್ತಾಯವಾಗಲಿದೆ.

UP Elections 2022: ನಕಲಿ ಸಮಾಜವಾದಿಗಳು ಗೆದ್ದರೆ ಜನರನ್ನು ಹಸಿವಿಗೆ ನೂಕುತ್ತಾರೆ : ಮೋದಿ ವಾಗ್ದಾಳಿ!

ಪಂಚರಾಜ್ಯ ಚುನಾವಣೆಗಳಲ್ಲಿ ರಾಜಕೀಯ ರಾರ‍ಯಲಿಗಳನ್ನು ನಿಷೇಸಿದ್ದ ಕಾರಣ ಬಿಜೆಪಿ, ಸಮಾಜವಾದಿ ಪಾರ್ಟಿ ಸೇರಿದಂತೆ ಅನೇಕ ಪಕ್ಷಗಳು ಈಗ ‘ವರ್ಚುವಲ್‌ ರಾರ‍ಯಲಿ’ ಮೊರೆ ಹೋಗಿತ್ತು. ಬಿಜೆಪಿ ಈಗಾಗಲೇ ಆನ್‌ಲೈನ್‌ ರಾರ‍ಯಲಿ ಮೂಲಕ ತಂತ್ರಗಾರಿಕೆ ಆರಂಭಿಸಿತ್ತು. ಕೇಸರಿ ಪಕ್ಷವು ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಸಾಕಷ್ಟುಪ್ರಬಲವಾಗಿದ್ದು, ಬಂಗಾಳ ಚುನಾವಣೆಯಲ್ಲಿ ಕೂಡ ಆನ್‌ಲೈನ್‌ ರಾರ‍ಯಲಿ ಪ್ರಯೋಗ ನಡೆಸಿತ್ತು. ಹೀಗಾಗಿ ವರ್ಚುವಲ್‌ ಸಮಾವೇಶ ಆಯೋಜನೆ ಅಷ್ಟುಕಷ್ಟವಾಗಲಿಕ್ಕಿಲ್ಲ ಎಂದು ಬಿಜೆಪಿ ಮಾಧ್ಯಮ ವಿಭಾಗದ ರಾಜ್ಯ ಪ್ರಭಾರಿ ಮನೀಶ್‌ ದೀಕ್ಷಿತ್‌ ಹೇಳಿದ್ದಾರೆ.

ಬಿಜೆಪಿಯ ಮುಖ್ಯ ಎದುರಾಳಿ ಸಮಾಜವಾದಿ ಪಾರ್ಟಿ ಕೂಡ ಅನಿವಾರ್ಯ ಪರಿಸ್ಥಿತಿಯಲ್ಲಿ ವರ್ಚುವಲ್‌ ಸಮಾವೇಶಕ್ಕೆ ಮುಂದಾಗಿದೆ. ತನ್ನ ಪಕ್ಷದ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಈಗಾಗಲೇ ಸುದ್ದಿಗೋಷ್ಠಿ ಅಥವಾ ಪ್ರಮುಖ ಸಭೆಗಳ ಪ್ರಸಾರ ಆರಂಭಿಸಿದೆ. ಆದರೆ, ಗ್ರಾಮೀಣ ಭಾಗಗಳಲ್ಲಿ ಶೇ.40ರಷ್ಟುಜನರು ಸ್ಮಾರ್ಟ್‌ಫೋನ್‌ ಹೊಂದಿಲ್ಲ. ಹೀಗಾಗಿ ಗ್ರಾಮೀಣ ಜನರನ್ನು ತಲುಪುವುದು ಕಷ್ಟ. ಆದರೂ ಯುವಕರ ಬಳಿ ಹೆಚ್ಚಾಗಿ ಸ್ಮಾರ್ಟ್‌ಫೋನ್‌ ಇವೆ. ಅವರನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸಲಾಗುತ್ತಿದೆ. ವಾಟ್ಸಾಪ್‌ ಗ್ರೂಪ್‌ಗಳ ಮೂಲಕ ಕೂಡ ಪ್ರಚಾರ ನಡೆಸಲಾಗುತ್ತಿದೆ ಎಂದು ಎಸ್‌ಪಿ ವಕ್ತಾರ ಆಶುತೋಷ್‌ ವರ್ಮಾ ಹೇಳಿದರು. ಕಾಂಗ್ರೆಸ್‌ ಹಾಗೂ ಆಪ್‌ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿನ ತಮ್ಮ ಅನುಭವ ಬಳಸಿಕೊಂಡು ಪ್ರಚಾರ ನಡೆಸಲು ತೀರ್ಮಾನಿಸಿವೆ.

ಉಗ್ರ ದಾಳಿ ಸಾಧ್ಯತೆ: ಭದ್ರತಾ ಪಡೆಗಳಿಗೆ ಎಚ್ಚರಿಕೆ ಸಂದೇಶ
ಮುಂಬರುವ ಪಂಚರಾಜ್ಯ ಚುನಾವಣೆ ಸಮಯದಲ್ಲಿ ಉಗ್ರದಾಳಿ ನಡೆಯುವ ಸಾಧ್ಯತೆ ಇದೆ ಎಂದು ಹಲವು ಏಜೆನ್ಸಿಗಳು ಹೇಳಿವೆ. ಹಾಗಾಗಿ ಚುನಾವಣೆ ನಡೆಯುವ ರಾಜ್ಯಗಳಲ್ಲಿ ನೇಮಕ ಮಾಡಿರುವ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.