Asianet Suvarna News Asianet Suvarna News

ರಾಜ್ಯಸಭಾ ಚುನಾವಣಾ ದಿನಾಂಕ ಪ್ರಕಟಿಸಿದ ಆಯೋಗ, ಫೆ.27 ಮತದಾನ, ಅಂದೆ ಫಲಿತಾಂಶ!

ಕೇಂದ್ರ ಚುನಾವಣಾ ಆಯೋಗ ಇಂದು ರಾಜ್ಯಸಭಾ ಚುನಾವಣಾ ದಿನಾಂಕ ಪ್ರಕಟಿಸಿದೆ. ಫೆಬ್ರವರಿ 27 ರಂದು ಮತದಾನ ನಡೆಯಲಿದ್ದು, ಅದೇ ದಿನ ಫಲಿತಾಂಶ ಘೋಷಣೆಯಾಗಲಿದೆ.
 

Election Commission of India Announces 56 Rajya sabha seat polling take place on Feb 27th ckm
Author
First Published Jan 29, 2024, 3:14 PM IST

ನವದೆಹಲಿ(ಜ.29) ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಎಲ್ಲಾ ಪಕ್ಷಗಳು ಬಿರುಸಿನ ಚರ್ಚೆ, ಸೀಟು ಹಂಚಿಕೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿಕೊಂಡಿದೆ. ಇದರ ನಡುವೆ ಕೇಂದ್ರ ಚುನಾವಣಾ ಆಯೋಗ ಇದೀಗ ರಾಜ್ಯಸಭಾ ಚುನಾವಣಾ ದಿನಾಂಕ ಪ್ರಕಟಿಸಿದೆ. 56 ರಾಜ್ಯಸಭಾ  ಸ್ಥಾನಗಳಿಗೆ ಫೆಬ್ರವರಿ 27ರಂದು ಮತದಾನ ನಡೆಯಲಿದೆ. ಇದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಫೆಬ್ರವರಿ 27 ರಂದು 15 ರಾಜ್ಯಗಳ ಒಟ್ಟು 56 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರಗೆ ಮತದಾನ ನಡೆಯಲಿದೆ. 4 ಗಂಟೆ ಬಳಿಕ ಮತ ಏಣಿಕೆ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ರಾತ್ರಿ ವೇಳೆಗೆ ಫಲಿತಾಂಶ ಘೋಷಣೆಯಾಗಲಿದೆ. ಇನ್ನು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ. 

ಅಮಿತ್‌ ಶಾ ಬಳಿ ರಾಜ್ಯಸಭೆ ಸ್ಥಾನ, 3 ಕಷ್ಟದ ಕ್ಷೇತ್ರ ಕೇಳಿದ ಸೋಮಣ್ಣ..!

56 ಸ್ಥಾನಗಳ ಪೈಕಿ ಕರ್ನಾಟಕದಲ್ಲಿ 4 ಸ್ಥಾನಗಳಿಗೆ ಚುನಾಣೆ ನಡೆಯಲಿದೆ. 50 ರಾಜ್ಯಸಭಾ ನಾಯಕರ ಅವಧಿ ಎಪ್ರಿಲ್ 2, 2024ಕ್ಕೆ ಅಂತ್ಯಗೊಳ್ಳುತ್ತಿದೆ. ಇನ್ನುಳಿದ 6 ನಾಯಕರು ಎಪ್ರಿಲ್ 3 ರಂದು ನಿವೃತ್ತಿ ಹೇಳುತ್ತಿದ್ದಾರೆ. ಹೀಗಾಗಿ ಒಟ್ಟು 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.

ರಾಜ್ಯವಾರು ರಾಜ್ಯಸಭಾ ಸ್ಥಾನ(ಚುನಾವಣೆ)
ಉತ್ತರ ಪ್ರದೇಶ:10 ಸ್ಥಾನ
ಮಹಾರಾಷ್ಟ್ರ:6 ಸ್ಥಾನ
ಬಿಹಾರ : 6 ಸ್ಥಾನ
ಪಶ್ಚಿಮ ಬಂಗಾಳ : 5 ಸ್ಥಾನ
ಮಧ್ಯಪ್ರದೇಶ: 6 ಸ್ಥಾನ
ಕರ್ನಾಟಕ: 4 ಸ್ಥಾನ
ಗುಜರಾತ್ : 4 ಸ್ಥಾನ
ಆಂಧ್ರಪ್ರದೇಶ:3 ಸ್ಥಾನ
ತೆಲಂಗಾಣ:3 ಸ್ಥಾನ
ರಾಜಸ್ಥಾನ : 3 ಸ್ಥಾನ
ಒಡಿಶಾ : 3 ಸ್ಥಾನ
ಉತ್ತರಖಂಡ:1 ಸ್ಥಾನ
ಚತ್ತೀಸಘಡ:1 ಸ್ಥಾನ
ಹರ್ಯಾಣ: 1 ಸ್ಥಾನ
ಹಿಮಾಚಲ ಪ್ರದೇಶ: 1 ಸ್ಥಾನ

ಕಾಂಗ್ರೆಸ್‌ ಸೇರಿದ ಜಗನ್‌ ಸೋದರಿ ಶರ್ಮಿಳಾ ಕರ್ನಾಟಕದಿಂದ ರಾಜ್ಯಸಭೆಗೆ?

ಇತ್ತ ಲೋಕಸಭಾ ಚುನಾವಣೆ ತಯಾರಿ ನಡೆಯುತ್ತಿದೆ. ಶೀಘ್ರದಲ್ಲೇ ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣಾ ದಿನಾಂಕ ಘೋಷಿಸಲಿದೆ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಇಂಡಿಯಾ ಮೈತ್ರಿ ಒಕ್ಕೂಟ ಒಡೆದು ಹೋಳಾಗಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ಸೋಲಿಸಲು ಒಗ್ಗಟ್ಟಾಗಿದ್ದ ವಿಪಕ್ಷಗಳು ಇದೀಗ ಒಂದೊಂದಾಗಿ ಮೈತ್ರಿಯಿಂದ ಹೊರಗೆ ಕಾಲಿಡುತ್ತಿದೆ. ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಬಳಿಕ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೂಡ ಮೈತ್ರಿಯಿಂದ ಹೊರಬಂದಿದೆ.

 

Latest Videos
Follow Us:
Download App:
  • android
  • ios