ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಗೆ ಇರುವ ರಾಷ್ಟ್ರೀಯ ಪಕ್ಷ ಸ್ಥಾನಮಾನ ಪುನಃ ಪರಿಶೀಲಿಸಲು ಚುನಾವಣಾ ಆಯೋಗವು ನಿರ್ಧರಿಸಿದೆ.
ನವದೆಹಲಿ: ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಗೆ ಇರುವ ರಾಷ್ಟ್ರೀಯ ಪಕ್ಷ ಸ್ಥಾನಮಾನ ಪುನಃ ಪರಿಶೀಲಿಸಲು ಚುನಾವಣಾ ಆಯೋಗವು ನಿರ್ಧರಿಸಿದೆ.
ಯಾವುದೇ ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನ ಸಿಗಬೇಕಾದರೆ, 4 ರಾಜ್ಯಗಳಲ್ಲಿ ಮಾನ್ಯತೆ ಪಡೆದಿರಬೇಕು ಇಲ್ಲವೇ 4 ರಾಜ್ಯಗಳಲ್ಲಿ ಶೇ.6ರಷ್ಟು ಮತ ಪಡೆದಿರಬೇಕು ಅಥವಾ ಲೋಕಸಭಾ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಶೇ.2ರಷ್ಟು ಸೀಟು ಗೆದ್ದಿರಬೇಕು ಇಲ್ಲವೇ ಸಂಸತ್‌ನಲ್ಲಿ 4 ಸ್ಥಾನ ಹೊಂದಿರಬೇಕು.
ಸದ್ಯ ಈ ಪೈಕಿ ಯಾವುದೇ ಮಾನದಂಡಗಳನ್ನೂ ಎನ್‌ಸಿಪಿ (NCP) ಪೂರೈಸದೇ ಇರುವ ಕಾರಣ, ಅದಕ್ಕೆ ನೀಡಿರುವ ಸ್ಥಾನಮಾನದ ಕುರಿತು ಮಂಗಳವಾರ ಪಕ್ಷದ ನಾಯಕರಿಗೆ ಆಯೋಗದ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ. ಮಾನ್ಯತೆ ಪಡೆದ ಪಕ್ಷಗಳು ಚುನಾವಣೆ ವೇಳೆ ಎಲ್ಲಾ ರಾಜ್ಯಗಳಲ್ಲೂ ಒಂದೇ ಚಿಹ್ನೆ ಬಳಸಬಹುದು, ಪಕ್ಷಕ್ಕೆ ದೆಹಲಿಯಲ್ಲಿ ಕಚೇರಿ ಸ್ಥಳ ಸಿಗುತ್ತದೆ ಮತ್ತು ದೂರದರ್ಶನ ಹಾಗೂ ರೇಡಿಯೋದಲ್ಲಿ ಪ್ರಚಾರಕ್ಕೆ ಉಚಿತ ಕಾಲಾವಕಾಶ ಲಭ್ಯವಾಗುತ್ತದೆ.
ಇಂದಿರಾ ಗಾಂಧಿಯೂ ಇದೇ ಪರಿಸ್ಥಿತಿ ಎದುರಿಸಿದ್ರು: ಶಿವಸೇನೆ ಚಿಹ್ನೆ ಕಳೆದುಕೊಂಡ ಉದ್ಧವ್ ಠಾಕ್ರೆ ಸಂತೈಸಿದ ಶರದ್ ಪವಾರ್
ಶಿವಸೇನೆ ಪಕ್ಷದ ಸಂಸ್ಥಾಪಕ ಬಾಳಾ ಠಾಕ್ರೆ ಪುತ್ರ ಉದ್ಧವ್ ಠಾಕ್ರೆ ಅವರ ಪಕ್ಷ ಶಿವಸೇನೆಯ ಚಿಹ್ನೆಯಾದ "ಬಿಲ್ಲು ಮತ್ತು ಬಾಣ" ಚಿಹ್ನೆಯನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಬಣವೇ ನಿಜವಾದ ಶಿವಸೇನೆ ಎನಿಸಿಕೊಂಡಿದ್ದು, ಆ ಬಣಕ್ಕೆ ಶಿವಸೇನೆಯ ಅಧಿಕೃತ ಚಿಹ್ನೆಯೂ ದೊರೆತಿದೆ. ಈ ಹಿನ್ನೆಲೆ ತಮ್ಮ ಮಿತ್ರ ಪಕ್ಷವಾದ ಉದ್ಧವ್ ಠಾಕ್ರೆ ಬಣ ಚಿಹ್ನೆ ಕಳೆದುಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಇದು ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಶಿವಸೇನೆಯ ಚಿಹ್ನೆ ಕದ್ದ ಕಳ್ಳನಿಗೆ ತಕ್ಕ ಪಾಠ ಕಲಿಸಿ; ಚುನಾವಣಾ ಆಯೋಗ ಮೋದಿ ಗುಲಾಮ: ಉದ್ಧವ್ ಠಾಕ್ರೆ ಕಿಡಿ
ಜನರು ಹೊಸ ಚಿಹ್ನೆಯನ್ನು (Symbol) ಒಪ್ಪಿಕೊಳ್ಳುತ್ತಾರೆ ಎಂದೂ ಶರದ್ ಪವಾರ್ (Sharad Pawar) ಹೇಳಿದರು. ಚುನಾವಣಾ ಆಯೋಗವು (Election Commission) ಪಕ್ಷದ ಹೆಸರು "ಶಿವಸೇನೆ" (Shivsena) ಮತ್ತು ಪಕ್ಷದ ಚಿಹ್ನೆ "ಬಿಲ್ಲು ಮತ್ತು ಬಾಣ"ವನ್ನು (Bow and Arrow) ಏಕನಾಥ್ ಶಿಂಧೆ (Eknath Shinde) ಬಣಕ್ಕೆ ನೀಡಲಾಗುವುದು ಎಂದು ಆದೇಶಿಸಿದ ನಂತರ ಶರದ್ ಪವಾರ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ, ಚುನಾವಣಾ ಆಯೋಗದ ನಿರ್ಧಾರವನ್ನು ಒಪ್ಪಿಕೊಂಡು ಹೊಸ ಚಿಹ್ನೆಯನ್ನು ತೆಗೆದುಕೊಳ್ಳುವಂತೆಯೂ ಎನ್‌ಸಿಪಿ (NCP) ಮುಖ್ಯಸ್ಥರು ಉದ್ಧವ್ ಠಾಕ್ರೆ (Uddhav Thackeray) ಅವರಿಗೆ ಸಲಹೆ ನೀಡಿದ್ದಾರೆ.
ಇದು ಚುನಾವಣಾ ಆಯೋಗದ ನಿರ್ಧಾರ, ಒಮ್ಮೆ ನಿರ್ಧಾರ ನೀಡಿದ ನಂತರ ಯಾವುದೇ ಚರ್ಚೆ ಸಾಧ್ಯವಿಲ್ಲ, ಅದನ್ನು ಸ್ವೀಕರಿಸಿ ಮತ್ತು ಹೊಸ ಚಿಹ್ನೆ ತೆಗೆದುಕೊಳ್ಳಿ. ಹಳೆಯ ಚಿಹ್ನೆಯ ನಷ್ಟ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಏಕೆಂದರೆ ಜನರು ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ. ಇದು ಮುಂದಿನ 15-30 ದಿನಗಳವರೆಗೆ ಚರ್ಚೆಯಲ್ಲಿರುತ್ತದೆ ಅಷ್ಟೇ ಎಂದೂ ಶರದ್ ಪವಾರ್ ಹೇಳಿದರು.
ಬೆಳಗಾವಿ ಗಡಿ ಗಲಾಟೆಗೆ ಶರದ್ ಪವಾರ್ ಕೆಂಡ, ಕರ್ನಾಟಕಕ್ಕೆ ತಾಳ್ಮೆ ಪರೀಕ್ಷಿಸದಂತೆ ಎಚ್ಚರಿಕೆ!
ಕೈಗೆ ನೊಗವಿರುವ ಎರಡು ಹೋರಿಗಳ ಚಿಹ್ ಹೊಂದಿದ್ದ ಕಾಂಗ್ರೆಸ್ ಪಕ್ಷ ತನ್ನ ಚಿಹ್ನೆಯನ್ನು ಬದಲಾಯಿಸಬೇಕಾಗಿರುವುದನ್ನು ಸ್ಮರಿಸಿದ ಶರದ್ ಪವಾರ್, ಕಾಂಗ್ರೆಸ್‌ನ ಹೊಸ ಚಿಹ್ನೆಯನ್ನು ಜನರು ಸ್ವೀಕರಿಸಿದ ರೀತಿಯಲ್ಲಿ ಉದ್ಧವ್ ಠಾಕ್ರೆ ಬಣದ ಹೊಸ ಚಿಹ್ನೆಯನ್ನು ಜನರು ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ, ಇಂದಿರಾಗಾಂಧಿ ಕೂಡ ಈ ಪರಿಸ್ಥಿತಿಯನ್ನು ಎದುರಿಸಿದ್ದು ನನಗೆ ನೆನಪಿದೆ. ಕಾಂಗ್ರೆಸ್‌ನಲ್ಲಿ ನೊಗವಿರುವ ಎರಡು ಎತ್ತುಗಳ ಚಿಹ್ನೆ ಇತ್ತು, ನಂತರ ಅವರು ಅದನ್ನು ಕಳೆದುಕೊಂಡರು ಮತ್ತು ಹೊಸ ಚಿಹ್ನೆಯಾಗಿ 'ಕೈ' ಅನ್ನು ಅಳವಡಿಸಿಕೊಂಡರು ಮತ್ತು ಜನರು ಅದನ್ನು ಒಪ್ಪಿಕೊಂಡರು. ಹಾಗೆಯೇ ಜನರು ಉದ್ಧವ್ ಠಾಕ್ರೆ ಬಣದ ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ ಎಂದು ಅವರು ಹೇಳಿದರು.
