Asianet Suvarna News Asianet Suvarna News

ಮಮತಾ ರೇಟ್‌ ಎಷ್ಟು ಎಂದಿದ್ದ ನಿವೃತ್ತ ಜಡ್ಜ್‌ಗೆ ಚುನಾವಣಾ ಆಯೋಗ ತರಾಟೆ

ಅಭಿಜಿತ್‌ ಅವರ ಹೇಳಿಕೆ ಕೀಳು ಮಟ್ಟದ ರಾಜಕೀಯ ಎಂಬುದಾಗಿ ಬಣ್ಣಿಸಿರುವ ಚುನಾವಣಾ ಆಯೋಗ, ಮಂಗಳವಾರ ಸಂಜೆ 5 ಗಂಟೆಯಿಂದ 24 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಆದೇಶಿಸಿದೆ. ಜೊತೆಗೆ ಇನ್ನು ಮುಂದೆ ಈ ರೀತಿಯ ವಿಚ್ಛಿದ್ರಕಾರಿ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದೆ.

Election Commission Banned Abhijit Ganguly from Lok Sabha Election 2024 Campaign grg
Author
First Published May 22, 2024, 8:34 AM IST | Last Updated May 22, 2024, 8:34 AM IST

ಕೋಲ್ಕತಾ(ಮೇ.22): ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಷ್ಟು ಹಣಕ್ಕೆ ತಮ್ಮನ್ನು ಮಾರಿಕೊಂಡಿದ್ದಾರೆ. ಅವರ ಏಟ್‌ 10 ಲಕ್ಷ ರುಪಾಯಿಯೇ?’ ಎಂದು ಪ್ರಶ್ನಿಸಿದ್ದ ಬಿಜೆಪಿ ಲೋಕಸಭಾ ಅಭ್ಯರ್ಥಿಯೂ ಆಗಿರುವ ಮಾಜಿ ನ್ಯಾಯಮೂರ್ತಿ ಅಭಿಜಿತ್‌ ಗಂಗೂಲಿಗೆ ಚುನಾವಣಾ ಆಯೋಗವು 24 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿಷೇಧ ಹೇರಿದೆ.

ಅಭಿಜಿತ್‌ ಅವರ ಹೇಳಿಕೆ ಕೀಳು ಮಟ್ಟದ ರಾಜಕೀಯ ಎಂಬುದಾಗಿ ಬಣ್ಣಿಸಿರುವ ಚುನಾವಣಾ ಆಯೋಗ, ಮಂಗಳವಾರ ಸಂಜೆ 5 ಗಂಟೆಯಿಂದ 24 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಆದೇಶಿಸಿದೆ. ಜೊತೆಗೆ ಇನ್ನು ಮುಂದೆ ಈ ರೀತಿಯ ವಿಚ್ಛಿದ್ರಕಾರಿ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ರೇಟ್‌ ಎಷ್ಟು ಎಂದ ನ್ಯಾಯಮೂರ್ತಿ ಅಭಿಜಿತ್‌ಗೆ ನೋಟಿಸ್‌

ಅಭಿಜಿತ್‌ ಗಂಗೂಲಿ ತಮ್ಲುಕ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಟಿಎಂಸಿ ಸತತವಾಗಿ ಅವರ ಮೇಲೆ ಸವಾಲು ಎಸೆದ ಹಿನ್ನೆಲೆಯಲ್ಲಿ ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದರು.

Latest Videos
Follow Us:
Download App:
  • android
  • ios