ಬೆಂಗಳೂರು[ಜ.02]: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿದ್ದು, ಮಾನವೀಯತೆ ಮೆರೆದ ವೃದ್ಧನ ನಡೆ ನೆಟ್ಟಿಗರ ಮನ ಗೆದ್ದಿದೆ. 

ಹೌದು ಕೆಳಗಿಳಿಯಲು ಸಾಧ್ಯವಾಗದೇ, ಭಯ ಬಿದ್ದಿದ್ದ ಬೆಕ್ಕಿನ ಮರಿ ಅಪಾವ್ಲಿಲದೇ ಕೆಳಗಿಳಿಯಲು ವೃದ್ಧನೊಬ್ಬ ಕುರ್ಚಿಯನ್ನು ಎತ್ತಿ ಹಿಡಿದಿದ್ದಾರೆ. ಈ ವೇಳೆ ಭಯದಿಂದಲೇ ಬೆಕ್ಕಿನ ಮರಿ ಆ ಕುರ್ಚಿ ಮೇಲೆ ಕುಳಿತಿದೆ. ಬೆಕ್ಕು ಕುರ್ಚಿ ಮೇಲೆ ಕುಳಿತುಕೊಂಡಿದ್ದನ್ನು ಖಚಿತಪಡಿಸಿಕೊಂಡ ಆ ಅಜ್ಜ ನಿಧಾನವಾಗಿ ಕುರ್ಚಿಯನ್ನು ಕೆಳಗಿಳಿಸಿದ್ದಾರೆ. ಕೆಳ ತಲುಪಿದ್ದೇ ತಡ ಬೆಕ್ಕಿನ ಮರಿ ಅತ್ತ- ಇತ್ತ ನೋಡನೇ ಥಟ್ ಎಂದು ಓಡಿ ಪರಾರಿಯಾಗಿದೆ. 

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಿದ್ದರೂ ಈ ಘಟನೆ ಎಲ್ಲ ನಡೆದಿದ್ದು ಎಲ್ಲ? ಯಾವಾಗ? ಎಂಬ ಮಾಹಿತಿ ಮಾತ್ರ ಲಭ್ಯವಿಲ್ಲ. ಜನರ ಮನಗೆದ್ದ ಈ ವಿಡಿಯೋ ವ್ಯಾಪಕವಾಗಿ ಶೇರ್ ಆಗಲಾರಂಭಿಸಿದೆ.