ಟರ್ಕಿಯಲ್ಲಿ ಅಧ್ಯಕ್ಷ ಎರ್ಡೋಗನ್ ವಿರುದ್ಧ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಸ್ತಾನ್‌ಬುಲ್‌ನ ಮೇಯರ್ ಬಂಧನದಿಂದ ಪರಿಸ್ಥಿತಿ ಹದಗೆಟ್ಟಿದ್ದು, ಸರ್ಕಾರವು ಪ್ರತಿಭಟನೆಗಳನ್ನು ನಿಷೇಧಿಸಿದೆ.
Ekrem Imamoglu arrested:: ಪ್ರಪಂಚದ ಹಲವು ದೇಶಗಳಲ್ಲಿ ಸಂಘರ್ಷಗಳು ನಡೆಯುತ್ತಿವೆ. ಹಮಾಸ್-ಇಸ್ರೇಲ್, ಬಾಂಗ್ಲಾದೇಶ ಆಂತರಿಕ ಸಂಘರ್ಷ, ಪಾಕಿಸ್ತಾನದಲ್ಲೂ ಬಲೂಚಿಸ್ಥಾನಿಗಳು ಸರ್ಕಾರದ ವಿರುದ್ಧ ಯುದ್ಧವೇ ಸಾರಿದ್ದಾರೆ. ಈ ನಡುವೆ ಇದೀಗ ಮತ್ತೊಂದು ಮುಸ್ಲಿಂ ದೇಶದಲ್ಲಿ ದಂಗೆಯ ಪರಿಸ್ಥಿತಿಗಳು ಗೋಚರಿಸುತ್ತಿವೆ.
ಹೌದು. ಆ ದೇಶ ಬೇರೆ ಯಾವುದೂ ಅಲ್ಲ, ಕಟ್ಟಾ ಮುಸ್ಲಿಂ ದೇಶ ಟರ್ಕಿ. ಈ ದೇಶದ ನಾಯಕನಾಗಿರುವ ಖಲೀಫ ಅಧ್ಯಕ್ಷರು ರೆಸೆಪ್ ತಯ್ಯಿಪ್ ಎರ್ಡೋಗನ್ ವಿರುದ್ಧ ಪ್ರತಿಭಟಿಸಲು ಸಾವಿರಾರು ಟರ್ಕಿಶ್ ನಾಗರಿಕರು ಪ್ರಸ್ತುತ ಬೀದಿಗಿಳಿದಿದ್ದಾರೆ. ದೇಶದಲ್ಲಿ ಪರಿಸ್ಥಿತಿ ಈಗ ತುಂಬಾ ಹದಗೆಟ್ಟಿದ್ದು, ಟರ್ಕಿಶ್ ಆಡಳಿತವು ಮುಂದಿನ 4 ದಿನಗಳವರೆಗೆ ದೇಶದಲ್ಲಿ ಎಲ್ಲ ರೀತಿಯ ಪ್ರದರ್ಶನಗಳನ್ನು ನಿಷೇಧಿಸಿದೆ. ವಿಪರ್ಯಾಸವೆಂದರೆ ಹಿಂದೆ ಇತರೆ ದೇಶಗಳಿಗೆ ಸವಾಲು ಹಾಕುತ್ತಿದ್ದ ಟರ್ಕಿ ಇದೀಗ ತನ್ನದೇ ಬೇರು ಅಲುಗಾಡಲು ಶುರುವಾಗಿದೆ.
ವಿರೋಧಿಗಳನ್ನ ಬಂಧಿಸುವಲ್ಲಿ ನಿರತನಾದ ಖಲೀಫಾ:
ಈ ಹಿಂದೆ ಸಿರಿಯಾ ಅಥವಾ ಗಾಜಾ ಆಗಿರಲಿ, ಪ್ರಪಂಚದ ಇತರ ದೇಶಗಳ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಖಲೀಫಾ ಎರ್ಡೋಗನ್ ತಾನು ಮುಸ್ಲಿಂ ಜಗತ್ತಿನ ನಾಯಕ ಎಂದು ಶಕ್ತಿ ತೋರಿಸುತ್ತಿದ್ದರು, ಸೌದಿ ಅರೇಬಿಯಾ ಮತ್ತು ಇರಾನ್‌ಗೆ ನೇರ ಸವಾಲು ಹಾಕುತ್ತಿದ್ದರು. ಆದರೆ ಈಗ ಅವರ ಸ್ವಂತ ದೇಶದಲ್ಲಿ ಅವರ ರಾಜಕೀಯ ಬೇರುಗಳು ದುರ್ಬಲಗೊಂಡಿವೆ. ದೇಶದಲ್ಲಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ವಿರೋಧಿಗಳನ್ನು ಬಂಧಿಸುವಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ:ಹೈದರಾಬಾದ್ ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌ಗೆ ಜೀವ ಬೆದರಿಕೆ, ಗುಂಡು ನಿರೋಧಕ ವಾಹನದಲ್ಲಿ ಓಡಾಡಿ ಎಂದ ಪೊಲೀಸರ ವಿರುದ್ಧವೇ ಕಿಡಿ!
ಇಸ್ತಾನ್‌ಬುಲ್‌ನ ಮೇಯರ್ ಎಕ್ರೆಮ್ ಇಮಾಮೊಗ್ಲು ಬಂಧನ:
ಟರ್ಕಿಯ ಪ್ರಮುಖ ನಗರವಾದ ಇಸ್ತಾನ್‌ಬುಲ್‌ನ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರ ಬಂಧನದ ನಂತರ ಗುರುವಾರ (ಮಾರ್ಚ್ 20) ಸಾವಿರಾರು ಪ್ರತಿಭಟನಾಕಾರರು ಇಸ್ತಾನ್‌ಬುಲ್‌ನ ಬೀದಿಗಿಳಿದಿದ್ದಾರೆ. ಸೆಕ್ಯುಲರ್ ರಿಪಬ್ಲಿಕನ್ ಪಕ್ಷದ (CHP) ನಾಯಕ ಮತ್ತು ಇಸ್ತಾನ್‌ಬುಲ್‌ನ ಮೇಯರ್ ಆಗಿರುವ ಎಕ್ರೆಮ್ ಇಮಾಮೊಗ್ಲು ಅವರನ್ನು ಟರ್ಕಿಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಅಧ್ಯಕ್ಷ ಎರ್ಡೋಗನ್ ಅವರ ಪ್ರಮುಖ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಈಗಿರುವಾಗ ಇಮಾಮೊಗ್ಲು ವಿರುದ್ಧ ಭ್ರಷ್ಟಾಚಾರ ಮತ್ತು ಭಯೋತ್ಪಾದಕ ಗುಂಪಿಗೆ ಸಹಾಯ ಮಾಡಲಾಗುತ್ತಿದೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಅವರನ್ನು ಕ್ರಿಮಿನಲ್ ಸಂಘಟನೆಯ ಶಂಕಿತ ನಾಯಕ ಎಂದು ಬಣ್ಣಿಸಿದ್ದಾರೆ.
ನೂರಾರು ಜನರ ಬಂಧನ:
ತನಿಖೆಯ ಭಾಗವಾಗಿ ಖಲೀಫಾ ಪೊಲೀಸರು 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ದೇಶದ ಪತ್ರಕರ್ತರು, ರಾಜಕಾರಣಿಗಳು ಮತ್ತು ಉದ್ಯಮಿಗಳು ಕೂಡ ಸೇರಿದ್ದಾರೆ. ಅದೇ ಸಮಯದಲ್ಲಿ, ಅವರ ಬಂಧನದ ನಂತರ ಜನರ ಕೋಪವನ್ನು ನೋಡಿ, ಇಸ್ತಾನ್‌ಬುಲ್ ಗವರ್ನರ್ ಕಚೇರಿ 4 ದಿನಗಳವರೆಗೆ ಯಾವುದೇ ರೀತಿಯ ಪ್ರತಿಭಟನೆ ಪ್ರದರ್ಶನವನ್ನು ನಿಷೇಧಿಸಿದೆ. ಇದರ ನಂತರ, ಇಮಾಮೊಗ್ಲು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, 'ಜನರ ಇಚ್ಛೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ' ಎಂದು ಎಚ್ಚರಕೆ ನೀಡಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಎಲ್ಲೆಡೆ ಹೊಡೆತ, ಬಲೂಚ್ ದಾಳಿಗೆ ಹೆದರಿ ಹಿಂದೆ ಸರಿದ ಚೀನಾ!
ನಿಷೇಧದ ನಡುವೆಯೂ ಪ್ರತಿಭಟನೆ:
ಟರ್ಕಿಯಲ್ಲಿ ಪ್ರತಿಭಟನೆಗಳ ಮೇಲೆ ನಾಲ್ಕು ದಿನಗಳ ನಿಷೇಧವಿದ್ದರೂ, ಇಸ್ತಾನ್‌ಬುಲ್‌ನ ಪೊಲೀಸ್ ಪ್ರಧಾನ ಕಚೇರಿ, ನಗರ ಸಭಾಂಗಣ ಮತ್ತು ಇಮಾಮೊಗ್ಲು ಅವರ ಪಕ್ಷದ ಕಚೇರಿಯ ಹೊರಗೆ ಸಾವಿರಾರು ಜನರು ಜಮಾಯಿಸಿ ಇಮಾಮೊಗ್ಲು ಅವರ ಬಂಧನವನ್ನು ಕಾನೂನುಬಾಹಿರ ಮತ್ತು ಆಧಾರರಹಿತ ಎಂದು ಖಲೀಫಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದು ಘರ್ಷಣೆ ಯಾವ ಕ್ಷಣದಲ್ಲಾದರೂ ಭುಗಿಲೇಳುವ ಸಾಧ್ಯತೆಯಿದೆ. ಆಂತರಿಕ ಸಂಘರ್ಷ ಗಮನಿಸಿದರೆ ಟರ್ಕಿ ಮತ್ತೊಂದು ಬಾಂಗ್ಲಾದೇಶವಾಗುವುದು ಗೋಚರಿಸುತ್ತಿದೆ.
