ಮಧುರೈ(ಮೇ.12): ಕೊರೋನಾದಿಂದ ಎಂಟು ತಿಂಗಳ ಗರ್ಭಿಣಿ ವೈದ್ಯಕೀಯ ಅಧಿಕಾರಿಯ ಸಾವು ಜಿಲ್ಲೆಯ ಫ್ರಂಟ್‌ಲೈನ್ ವಾರಿಯರ್ಸ್‌ಗಳನ್ನು ಆತಂಕಕ್ಕೆ ದೂಡಿದೆ. ಅನುಪ್ಪನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ.ಪಿ.ಶಣ್ಮುಗಪ್ರಿಯಾ ಅವರು ಏಪ್ರಿಲ್ 28 ರಂದು ಜ್ವರ ಮತ್ತು ಗಂಟಲಿನ ನೋವಿನಿಂದ ಬಳಲುತ್ತಿದ್ದರು. ಆದರೂ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ COVID-19 ಗೆ ನೆಗಟಿವ್ ತೋರಿಸಿತ್ತು.

ಏಪ್ರಿಲ್ 30 ರಂದು ಅವರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ಇದನ್ನು ನಗರ ಆರೋಗ್ಯ ಅಧಿಕಾರಿ ಪಿ ಕುಮಾರಗುರುಬರನ್ ಮಂಜೂರು ಮಾಡಿದರು. ಮರುದಿನ ಅವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಗ ಅವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು.

ಕೊರೋನಾ ಸೋಂಕಿತ 95 ವರ್ಷದ ಅಜ್ಜಿಯ ಗರ್ಭಾ ಡ್ಯಾನ್ಸ್ ನೋಡಿ, ವಿಡಿಯೋ ವೈರಲ್

ಒಂದೆರಡು ದಿನಗಳ ನಂತರ ಪರಿಸ್ಥಿತಿ ಇನ್ನೂ ಗಂಭೀರವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ರಾಜಾಜಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಾರ್ಡ್‌ಗೆ ಕಳುಹಿಸಲಾಗಿತ್ತು. ಬೆಳಗ್ಗೆ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದರೆ ಸಂಜೆ 5.30 ರ ಸುಮಾರಿಗೆ ವೈದ್ಯೆಯೂ ಮೃತಪಟ್ಟಿದ್ದಾರೆ.

ಈ ಘಟನೆ ಆಕೆಯ ಅನೇಕ ಸಹೋದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ. ವೈದ್ಯರಾದ ನಾವು ನಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಮನೆಯಲ್ಲಿ ಕೂರಲು ಸಾಧ್ಯವಿಲ್ಲ. ಆದರೆ ಇತರರ ಅಜಾಗರೂಕತೆಯಿಂದಾಗಿ ನಮ್ಮ ಯಾವುದೇ ಮುಂಚೂಣಿ ಕಾರ್ಮಿಕರನ್ನು ಕಳೆದುಕೊಳ್ಳಲು ನಮಗೆ ಸಾಧ್ಯವಿಲ್ಲ ಎಂದಿದ್ದಾರೆ ವೈದ್ಯೆಯ ಸಹುದ್ಯೋಗಿಗಳು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona