Asianet Suvarna News Asianet Suvarna News

Breaking: ಬೇಹುಗಾರಿಕೆ ಆರೋಪದಲ್ಲಿ ಬಂಧಿತರಾಗಿದ್ದ 8 ಭಾರತೀಯ Navy ಅಧಿಕಾರಿಗಳಿಗೆ ಕತಾರ್‌ನಿಂದ ಗಲ್ಲು ಶಿಕ್ಷೆ!


ಇಸ್ರೇಲ್‌ ಪರವಾಗಿ ಕತಾರ್‌ನಲ್ಲಿ ಬೇಹುಗಾರಿಕೆ ನಡೆಸಿದ್ದ ಆರೋಪದಲ್ಲಿ ಭಾರತದ ಎಂಟು ಮಂದಿ ನೌಕಾಪಡೆಯ ಹಿರಿಯ ಅಧಿಕಾರಿಗಳಿಗೆ ಕತಾರ್‌ ಸರ್ಕಾರ ಗಲ್ಲು ಶಿಕ್ಷೆ ವಿಧಿಸಿದೆ.

Eight Indian Navy Veterans in Qatar Face Spying Charges gets Death Penalty san
Author
First Published Oct 26, 2023, 4:36 PM IST

ದೋಹಾ (ಅ.26): ಇಸ್ರೇಲ್‌ ಪರವಾಗಿ ಕತಾರ್‌ನಲ್ಲಿ ಬೇಹುಗಾರಿಕೆ ಮಾಡಿದ್ದ ಆರೋಪ ಹೊತ್ತಿದ್ದ ಭಾರತದ 8 ಮಂದಿ ಹಿರಿಯ ನೌಕಾಪಡೆಯ ಅಧಿಕಾರಿಗಳಿಗೆ ಕತಾರ್‌ ಗಲ್ಲು ಶಿಕ್ಷೆ ವಿಧಿಸಿದೆ. ಇವರು ಬೇಹುಗಾರಿಕೆ ನಡೆಸಿದ ಬಗ್ಗೆ ತಮ್ಮಲ್ಲಿ ಎಲೆಕ್ಟ್ರಾನಿಕ್‌ ಸಾಕ್ಷ್ಯವನ್ನು ಹೊಂದಿದ್ಧೇವೆ ಎಂದು ಕತಾರ್‌ ತಿಳಿಸಿದೆ. ಭಾರತೀಯ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಕಳೆದ ಎಂಟು ತಿಂಗಳಿನಿಂದ ಕತಾರ್‌ನಲ್ಲಿ ಏಕಾಂತ ಸೆರೆಮನೆಯಲ್ಲಿದ್ದ ಎಂಟು ಭಾರತೀಯರಿಗೆ ಗಲ್ಲು ಶಿಕ್ಷೆ ನೀಡಲಾಗಿದ್ದು, ಇವರು ಬೇಹುಕಾರಿಗೆ ಕಠಿಣ ಆರೋಪಗಳನ್ನು ಎದುರಿಸಿದ್ದರು ಎಂದು ಕತಾರ್‌ ತಿಳಿಸಿದೆ. ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಸಿಡಿಆರ್ ಅಮಿತ್ ನಾಗ್ಪಾಲ್, ಸಿಡಿಆರ್ ಪೂರ್ಣೇಂದು ತಿವಾರಿ, ಸಿಡಿಆರ್ ಸುಗುಣಾಕರ್ ಪಕಾಲ, ಸಿಡಿಆರ್ ಸಂಜೀವ್ ಗುಪ್ತಾ ಮತ್ತು ಸೈಲರ್‌  ರಾಗೇಶ್ ವಿರುದ್ಧ ಕತಾರ್‌ ಬೇಹುಗಾರಿಕೆಯ ಆರೋಪ ಮಾಡಿತ್ತು. ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಾಗಿದ್ದ ಇವರು ಇಸ್ರೇಲ್ ಪರವಾಗಿ ಕತಾರ್‌ನಲ್ಲಿ ಬೇಹುಗಾರಿಕೆ ಮಾಡುತ್ತಿದ್ದರು. ಈ ಕುರಿತಾಗಿ ತಮ್ಮಲ್ಲಿ ಸಕಲ ಎಲೆಕ್ಟ್ರಾನಿಕ್‌ ಸಾಕ್ಷಿಗಳಿವೆ ಎಂದು ಕತಾರ್‌ ಈ ಹಿಂದೆ ತಿಳಿಸಿತ್ತು.

ದಾಳಿಯನ್ನೇ ಗುರಿಯಾಗಿಸಿಕೊಂಡ ಇಟಾಲಿಯನ್ ತಂತ್ರಜ್ಞಾನ-ಆಧಾರಿತ ಮಿಡ್ಜೆಟ್ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಹೆಚ್ಚು ಸೂಕ್ಷ್ಮ ಯೋಜನೆಯಲ್ಲಿ ಕೆಲಸ ಮಾಡಲು ಡಹ್ರಾ ಗ್ಲೋಬಲ್ ಟೆಕ್ನಾಲಜೀಸ್‌ನಿಂದ ನೇಮಕಗೊಂಡ ಅನೇಕ ಭಾರತೀಯ ನೌಕಾಪಡೆಯ ಅಧಿಕಾರಿಗಳಲ್ಲಿ ಇವರೂ ಸೇರಿದ್ದರು.

ನೌಕಾಪಡೆಯ ಈ ಮಾಜಿ ಅಧಿಕಾರಿಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕತಾರ್‌ ನೀಡಿರುವ ಈ ಮರಣ ದಂಡನೆ ಶಿಕ್ಷೆಯನ್ನು ಪ್ರಶ್ನೆ ಮಾಡುವುದಾಗಿ ಭಾರತ ಸರ್ಕಾರ ತಿಳಿಸಿದೆ. "ಈ ಪ್ರಕರಣವನ್ನು ಈಗ ಭಾರತೀಯ ಏಜೆನ್ಸಿಗಳು ಸಾಧ್ಯವಾದಷ್ಟು ಉನ್ನತ ಮಟ್ಟದಲ್ಲಿ ಕೈಗೆತ್ತಿಕೊಂಡಿವೆ ಆದರೆ ಕತಾರ್ ಸರ್ಕಾರವು ಈ ವಿಷಯದಲ್ಲಿ ಪಶ್ಚಾತ್ತಾಪ ಪಡುವ ಯಾವುದೇ ಲಕ್ಷಣಗಳನ್ನು ತೋರಿಸಿಲ್ಲ". ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು "ಫ್ರೇಮ್" ಮಾಡಿರುವ ಸಾಧ್ಯತೆ ಇದೆ ಎಂದು ಈ ಹಿಂದೆ ಭಾರತ ಹೇಳಿತ್ತು.

ಅಪ್ರಾಪ್ತೆ ಮೇಲಿನ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ, ಕಠಿಣ ಕಾನೂನು ಮಸೂದೆ ಮಂಡಿಸಿದ ಅಮಿತ್ ಶಾ!

ದಹ್ರಾ ಗ್ಲೋಬಲ್‌ನ ಸಿಇಒ ಆಗಿರುವ ಓಮನ್ ವಾಯುಪಡೆಯ ಮಾಜಿ ಅಧಿಕಾರಿ ಖಾಮಿಸ್ ಅಲ್-ಅಜ್ಮಿ ಸೇರಿದಂತೆ ಇಬ್ಬರು ಕತಾರಿಗಳ ವಿರುದ್ಧವೂ ಆರೋಪಗಳನ್ನು ಹೊರಿಸಲಾಗಿದೆ. ಪಾಕಿಸ್ತಾನದ ದಿ ಟ್ರಿಬ್ಯೂನ್ ಪ್ರಕಾರ, ಕತಾರ್‌ನ ಅಂತರರಾಷ್ಟ್ರೀಯ ಮಿಲಿಟರಿ ಕಾರ್ಯಾಚರಣೆಗಳ ಮುಖ್ಯಸ್ಥ, ಮೇಜರ್ ಜನರಲ್ ತಾರಿಕ್ ಖಾಲಿದ್ ಅಲ್ ಒಬೈದ್ಲಿ ಅವರು ಆರೋಪಿಯಾಗಿರುವ ಇತರ ಕತಾರಿ ಪ್ರಜೆಯಾಗಿದ್ದಾರೆ. ಕಂಪನಿಯು ಮೇ ಅಂತ್ಯದಲ್ಲಿ ಕಾರ್ಯಾಚರಣೆಯನ್ನು ಅಂತ್ಯ ಮಾಡಿದೆ ಎಂದು ಉದ್ಯೋಗಿಗಳಿಗೆ ತಿಳಿಸಲಾಗಿದೆ. 

20 ತಿಂಗಳ ಮಗುವನ್ನು ರೇಪ್‌ ಮಾಡಿ ಕೊಂದ ಯುಸೂಫ್‌ಗೆ ಮರಣದಂಡನೆ

 

Follow Us:
Download App:
  • android
  • ios