Cricketers assets seized by ED: 1xBet ಕ್ರಿಕೆಟ್ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್‌ಗೆ ಸೇರಿದ 11.14 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಕ್ರಿಕೆಟರ್ ಸುರೇಶ್ ರೈನಾ ಶಿಖರ್ ಧವನ್‌ಗೆ ಇಡಿ ಬಿಸಿ
ನವದೆಹಲಿ: ಕ್ರಿಕೆಟರ್‌ಗಳಾದ ಸುರೇಶ್ ರೈನಾ ಹಾಗೂ ಶಿಖರ್ ಧವನ್‌ಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ. 1ಎಕ್ಸ್‌ಬೆಟ್ (1xBet)ಕ್ರಿಕೆಟ್ ಬೆಟ್ಟಿಂಗ್ ಆಪ್ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವೂ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸುರೇಶ್ ರೈನಾ ಹಾಗೂ ಶಿಖರ್ ಧವನ್‌ಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇಬ್ಬರ ಒಟ್ಟು 11.14 ಕೋಟಿ ಮೌಲ್ಯದ ಆಸ್ತಿಯನ್ನ ಇಡಿ ವಶಕ್ಕೆ ಪಡೆದಿದೆ.
ಇಬ್ಬರ ಒಟ್ಟು 11.14 ಕೋಟಿ ಆಸ್ತಿ ಮುಟ್ಟುಗೋಲು
ಇದಕ್ಕೂ ಮೊದಲು, ಬೆಟ್ಟಿಂಗ್ ಪ್ಲಾಟ್‌ಫಾರ್ಮ್ 1xBetಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ಇಡಿಯೂ ಕ್ರಿಕೆಟರ್‌ಗಳಾದ ಶಿಖರ್ ಧವನ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. 39 ವರ್ಷದ ಶಿಖರ್ ಧವನ್ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(PMLA) ದಾಖಲಿಸಿಕೊಳ್ಳಲಾಗುತ್ತದೆ. ಈ 1 ಎಕ್ಸ್ ಬೆಟ್ ಬೆಟ್ಟಿಂಗ್ ಆಪ್‌ಗಳ ಪ್ರಮೋಷನ್ ಹಾಗೂ ಅದರೊಂದಿಗೆ ಮಾಡಿದ ಒಪ್ಪಂದಗಳಿಗೆ ಸಂಬಂಧಿಸಿದಂತೆ ಈ ವಿಚಾರಣೆ ನಡೆದಿದೆ.
39 ವರ್ಷದ ಕ್ರಿಕೆಟಿಗನ ಹೇಳಿಕೆಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗುವುದು. ಅನುಮೋದನೆ ಒಪ್ಪಂದಗಳ ಮೂಲಕ ಧವನ್‌ಗೆ 1xBet ಜೊತೆಗಿನ ಸಂಭಾವ್ಯ ಸಂಪರ್ಕಗಳ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಈ ಬೆಟ್ಟಿಂಗ್ ಅಪ್ಲಿಕೇಶನ್ ಬಳಕೆದಾರರಿಗೆ ವಂಚಿಸಿದ್ದಲ್ಲದೇ ಗಣನೀಯ ತೆರಿಗೆಗಳನ್ನು ತಪ್ಪಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಒಟ್ಟು 11.14 ಕೋಟಿಯ ಆಸ್ತಿಯಲ್ಲಿ ಸುರೇಶ್ ರೈನಾ ಹೆಸರಿನಲ್ಲಿ ಇರುವ ₹6.64 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್ ಹೂಡಿಕೆಗಳು ಮತ್ತು ಶಿಖರ್ ಧವನ್ ಹೆಸರಿನಲ್ಲಿ ಇರುವ ₹4.5 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳ ವಿರುದ್ಧದ ವ್ಯಾಪಕ ಕ್ರಮದ ಭಾಗವಾಗಿ ಈ ತನಿಖೆ ನಡೆದಿದೆ. ವಂಚನೆಯ ಯೋಜನೆಗಳನ್ನು ನಡೆಸುತ್ತಿರುವ ಮತ್ತು ದೊಡ್ಡ ಪ್ರಮಾಣದ ಹಣವನ್ನು ಅಕ್ರಮವಾಗಿ ಸಾಗಿಸುತ್ತಿರುವ ಆರೋಪದ ಮೇಲೆ ಈ ಬೆಟ್ಟಿಂಗ್ ಆಪ್‌ಗಳ ವ್ಯವಹಾರವನ್ನು ಪರಿಶೀಲಿಸಲಾಗುತ್ತಿದೆ. ಇದೇ ಪ್ರಕರಣದಲ್ಲಿ ಭಾರತದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರನ್ನು ಇಡಿ ಎಂಟು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ. ಭಾರತದ ಪರ ಎಲ್ಲಾ ರೀತಿಯ ಕ್ರಿಕೆಟ್ ಆಡಿರುವ 38 ವರ್ಷದ ಸುರೇಶ್ ರೈನಾ ಅವರನ್ನು ಈ ಬೆಟ್ಟಿಂಗ್ ಅಪ್ಲಿಕೇಶನ್‌ನೊಂದಿಗೆ ಅವರ ಪ್ರಚಾರ ಚಟುವಟಿಕೆಗಳಿಗಾಗಿ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದೆ.
ತನಿಖೆ ಕ್ರಿಕೆಟಿಗರನ್ನು ಮೀರಿ ವಿಸ್ತರಿಸಿದ್ದು, ಇಡಿ ಟೆಕ್ ಕಂಪನಿಗಳಾದ ಗೂಗಲ್ ಮತ್ತು ಮೆಟಾ ಪ್ರತಿನಿಧಿಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದೆ. ಇದರ ಜೊತೆಗೆ ಪ್ಯಾರಿಮ್ಯಾಚ್ ಎಂಬ ಮತ್ತೊಂದು ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯವು ಬಹು ರಾಜ್ಯಗಳಲ್ಲಿ ಹುಡುಕಾಟಗಳನ್ನು ನಡೆಸಿದೆ.
ಭಾರತ ಸರ್ಕಾರವು ನೈಜ ಹಣದ ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸಲು ಹೊಸ ಶಾಸನವನ್ನು ಪರಿಚಯಿಸಿದ ಸಮಯದಲ್ಲೇ ಈ ಈ ತನಿಖೆ ನಡೆಯುತ್ತಿದೆ. ದೇಶದಲ್ಲೇ ಅಕ್ರಮ ಬೆಟ್ಟಿಂಗ್ ಕಾರ್ಯಾಚರಣೆಗಳನ್ನು ತಡೆಯಲಿ ಇಡೀ ತೀವ್ರ ಪ್ರಯತ್ನ ಮಾಡುತ್ತಿದೆ. ಈ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಬಳಕೆದಾರರಿಗೆ ವಂಚನೆ ಮತ್ತು ತೆರಿಗೆ ವಂಚನೆಗೆ ಸಂಬಂಧಿಸಿದ ಸಂಭಾವ್ಯ ಅಪರಾಧಗಳನ್ನು ಬಹಿರಂಗಪಡಿಸುವುದು ತನಿಖೆಯ ಗುರಿಯಾಗಿದೆ, ಇದು ಗಣನೀಯ ಪ್ರಮಾಣದ ಹಣವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ನಾಯಿ ಕಚ್ಚಿದ್ದಕ್ಕೆ 20 ಲಕ್ಷ ರೂ ಪರಿಹಾರ ಕೋರಿ ಹೈಕೋರ್ಟ್‌ಗೆ ಮಹಿಳೆ ಅರ್ಜಿ: ಸಿಗೋ ಪರಿಹಾರ ಎಷ್ಟು?
ಇದನ್ನೂ ಓದಿ: ಬಿಹಾರ ಚುನಾವಣೆ: ಆರ್‌ಜೆಡಿ ಕಾರ್ಯಕರ್ತರ ಗೂಂಡಾಗಿರಿ: ಡಿಸಿಎಂ ಬೆಂಗಾವಲು ಪಡೆ ಮೇಲೆ ದಾಳಿ
