ಕೇಜ್ರಿವಾಲ್‌ಗೆ ಅಬಕಾರಿ ಹಗರಣ ಸಂಕಷ್ಟ, ನ.2ಕ್ಕೆ ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್!
ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ಸಂಕಷ್ಟ ಹೆಚ್ಚಾಗಿದೆ. ಇದೇ ಅಬಕಾರಿ ನೀತಿ ಹಗರಣ ಸಿಎಂ ಕೇಜ್ರಿವಾಲ್ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ನವೆಂಬರ್ 2 ರಂದು ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್ ನೀಡಿದೆ.

ದೆಹಲಿ(ಅ.30) ಅಕ್ರಣ ಹಣ ವರ್ಗಾವಣೆ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸುಪ್ರೀಂ ಕೋರ್ಟ್ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದರ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೆಹಲಿ ಅಬಕಾರಿ ನೀತಿಯಲ್ಲಿ ಮನೀಶ್ ಸಿಸೋಡಿಯಾ ಜೊತೆಗೆ ಸಿಎಂ ಅರವಿಂದ್ ಕೇಜ್ರಿವಾಲ್‌ಗೂ ಆತಂಕ ಹೆಚ್ಚಾಗಿದೆ. ಸಿಸೋಡಿಯಾ ಜಾಮೀನು ತಿರಸ್ಕೃತ ಗೊಂಡ ಬೆನ್ನಲ್ಲೇ ಇದೀಗ ಇಡಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್ ನೀಡಿದ್ದಾರೆ. ನವೆಂಬರ್ 2 ರಂದು ವಿಚಾರಣೆ ಹಾಜರಾಗಲು ಸಮನ್ಸ್ ನೀಡಲಾಗಿದೆ.
ಅಬಕಾರಿ ಹಗರಣದಲ್ಲಿ ಮನಿಶ್ ಸಿಸೋಡಿಯಾ ಮಾತ್ರವಲ್ಲ, ಆಮ್ ಆದ್ಮಿ ಪಕ್ಷವನ್ನು ಆರೋಪಿಯನ್ನಾಗಿ ಮಾಡಲು ಚಿಂತನೆ ನಡೆಸಿದೆ ಎಂದು ತನಿಖಾ ಸಂಸ್ಥೆಗಳು ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ತನ್ನ ಅಧೀನ ವ್ಯಕ್ತಿಗಳ ಮೂಲಕ ಅಪರಾಧ ಎಸಗಿದ ಮತ್ತು ಅಕ್ರಮ ಹಣ ಕಾಯ್ದೆ ವರ್ಗಾವಣೆ ಕಾಯ್ದೆಯಡಿ ಪಕ್ಷವನ್ನೂ ಆರೋಪಿಯಾಗಿ ಪರಿಗಣಿಸಲು ಚಿಂತಿಸಲಾಗಿದೆ ಎಂದು ಮಾಹಿತಿ ತನಿಖಾ ಸಂಸ್ಥೆಗಳು ಮಾಹಿತಿ ನೀಡಿತ್ತು. ಇದೀಗ ಅರವಿಂದ್ ಕೇಜ್ರಿವಾಲ್‌ಗೂ ನೋಟಿಸ್ ನೀಡಿರುವ ಬೆಳವಣಿಗೆ ದೆಹಲಿ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಮನೀಷ್ ಸಿಸೋಡಿಯಾಗೆ ಸಿಗದ ಬೇಲ್, 338 ಕೋಟಿ ವರ್ಗಾವಣೆಯ ಬಗ್ಗೆ ಅನುಮಾನವಿದೆ ಎಂದ ಸುಪ್ರೀಂ !
ಅಬಕಾರಿ ಹಗರಣ ಕುರಿತು ಈಗಾಗಲೇ ಅರವಿಂದ್ ಕೇಜ್ರಿವಾಲ್‌ಗೆ ಸಿಬಿಐ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ಎಪ್ರಿಲ್ 16 ರಂದು ಸಿಬಿಐ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ವಿಚಾರಣೆ ನಡೆಸಿದ್ದರು. ಇದೀಗ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇತ್ತ ಸಿಸೋಡಿಯಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಬಿಜೆಪಿ ಆಪ್ ವಿರುದ್ಧ ಮುಗಿಬಿದ್ದಿತ್ತು. ಮುಂದಿನ ಸರದಿ ಕೇಜ್ರಿವಾಲ್ ಎಂದು ಆರೋಪಿಸಿತ್ತು.
ಇತ್ತೀಚೆಗೆ ಇದೇ ಅಬಕಾರಿ ನೀತಿ ಹಗರಣದ ಕುರಿತು ಆಪ್ ಸಂಸದ ಸಂಜಯ್ ಸಿಂಗ್‌ರನ್ನು ಬಂಧಿಸಲಾಗಿದೆ. ಇಷ್ಟೇ ಅಲ್ಲ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕೆ.ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿತ್ತು.
ಕೇಜ್ರಿವಾಲ್‌ಗೆ ಸಂಕಷ್ಟ ಶುರು, ನಿವಾಸ ನವೀಕರಣ ಅಕ್ರಮ ಸಿಬಿಐ ತನಿಖೆಗೆ ಆದೇಶಿಸಿದ ಕೇಂದ್ರ!
ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ಆಪ್ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಇದೇ ವೇಳೆ, ಈ ಪ್ರಕರಣದಲ್ಲಿ 338 ಕೋಟಿ ರು. ಹಣ ವರ್ಗಾವಣೆ ಆಗಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬ ಮಹತ್ವದ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ. ಇದರಿಂದಾಗಿ ಸಿಸೋಡಿಯಾ ಹಾಗೂ ಆಪ್‌ಗೆ ಭಾರಿ ಹಿನ್ನಡೆ ಆಗಿದೆ.
ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ। ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ, ‘ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಮಗೆ ಅನೇಕ ಸಂದೇಹಗಳಿವೆ. ಆದರೆ 338 ಕೋಟಿ ರು. ಹಣ ವರ್ಗಾವಣೆ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ಸಿಸೋಡಿಯಾಗೆ ಜಾಮೀನು ನೀಡಲಾಗದು’ ಎಂದು ಹೇಳಿತು.