Asianet Suvarna News Asianet Suvarna News

'ರಾಜಕಾರಣಿಗೆ ಬೇರೆ ರೂಲ್‌ ಮಾಡೋಕಾಗುತ್ತಾ..' ಇಡಿ-ಸಿಬಿಐ ವಿರುದ್ಧ ವಿರೋಧ ಪಕ್ಷಗಳ ಅರ್ಜಿಗೆ ಸುಪ್ರೀಂ ಕಿಡಿ!

ಕೇಂದ್ರ ಸರ್ಕಾರ ಇಡಿ ಹಾಗೂ ಸಿಬಿಐಅನ್ನು ಅನಿಯಂತ್ರಿತವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹೇರಬೇಕು ಎಂದು ಆಗ್ರಹಿಸಿ 14 ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್‌, ರಾಜಕಾರಣಿಗಳಿಗೇನು ಬೇರೆ ನಿಯಮ ಮಾಡೋಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದೆ.

ED CBI Misuse Case Supreme Court Hearing Petition of 14 political parties dismissed san
Author
First Published Apr 5, 2023, 4:26 PM IST

ನವದೆಹಲಿ (ಏ.5): ಕೇಂದ್ರದ ಸ್ವಾಯತ್ತ ಸಂಸ್ಥೆಗಳಾದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವನ್ನು ಅನಿಯಂತ್ರಿತವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ 14 ವಿರೋಧ ಪಕ್ಷಗಳು ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯನ್ನು ದೇಶದ ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದ್ದು ಮಾತ್ರವಲ್ಲದೆ, 'ರಾಜಕಾರಣಿಗಳಿಗೇನು ಬೇರೆ ರೂಲ್‌ ಮಾಡೋಕೆ ಆಗುತ್ತಾ.. ? ಎಂದು ಪ್ರಶ್ನೆ ಮಾಡಿದೆ. ಮುಖ್ಯ  ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಬುಧವಾರ ವಿಚಾರಣೆ ವೇಳೆ ರಾಜಕಾರಣಿಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ನ್ಯಾಯಾಲಯದ ಈ ಹೇಳಿಕೆಯ ನಂತರ ವಿರೋಧ ಪಕ್ಷಗಳು ತಮ್ಮ ಅರ್ಜಿಯನ್ನು ಹಿಂಪಡೆದವು. ಆಡಳಿತದಲ್ಲಿ ಪ್ರತಿಪಕ್ಷಗಳ ಪ್ರಾಮುಖ್ಯತೆ ಕಡಿಮೆ ಆಗುತ್ತಿದೆ ಎಂದು ನಿಮಗೆ ಅನಿಸುತ್ತಿದ್ದಲ್ಲಿ ಅದರ ಪರಿಹಾರ ರಾಜಕೀಯದಲ್ಲಿಯೇ ಇದೆ. ನ್ಯಾಯಾಲಯದಲ್ಲಿ ಅದರ ಪರಿಹಾರ ಸಿಗೋದಿಲ್ಲ ಎಂದು ಸಿಜೆಐ ಚಂದ್ರಚೂಡ್‌ ಕಠಿಣ ಶಬ್ದಗಳಲ್ಲಿ ಹೇಳಿದ್ದಾರೆ. ಕಾಂಗ್ರೆಸ್‌ ನೇತೃತ್ವದಲ್ಲಿ 14 ವಿರೋಧ ಪಕ್ಷಗಳು ಜಂಟಿಯಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಸಿಬಿಐ ಹಾಗೂ ಇಡಿಯನ್ನು ಅನಿಯಂತ್ರಿತವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ರಾಜಕಾರಣಿಗಳ ಬಂಧನ, ನ್ಯಾಯಾಂಗ ಬಂಧನ ಹಾಗೂ ಜಾಮೀನಿಗೆ ಭಿನ್ನವಾದ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್‌ ನೀಡಬೇಕು ಎಂದು ಹೇಳಿದ್ದರು. ಆದರೆ, ಇದನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಆರ್‌ಜೆಡಿ, ಬಿಆರ್‌ಎಸ್, ಆಮ್ ಆದ್ಮಿ ಪಾರ್ಟಿ, ಎನ್‌ಸಿಪಿ, ಶಿವಸೇನೆ (ಯುಟಿಬಿ), ಜೆಎಂಎಂ, ಜೆಡಿಯು, ಸಿಪಿಐ (ಎಂ), ಸಿಪಿಐ, ಸಮಾಜವಾದಿ ಪಕ್ಷ ಮತ್ತು ಜಮ್ಮು ಮತ್ತು ಕಾಶ್ಮೀರ ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.

ಅರ್ಜಿಯಲ್ಲಿ ವಿರೋಧ ಪಕ್ಷಗಳು ಹೇಳಿದ್ದೇನು?

- 2005ರಿಂದ 2014ರವರೆಗೆ ತನಿಖಾ ಸಂಸ್ಥೆಗಳು ಯಾವುದೇ ಪ್ರಕರಣದಲ್ಲಿ ಮೊದಲು ದಾಳಿ ನಡೆಸಿ, ಸಿಕ್ಕ ಸಾಕ್ಷ್ಯಾಧಾರಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದರು. 93% ಪ್ರಕರಣಗಳಲ್ಲಿ ಇದೇ ರೀತಿಯ ಕ್ರಮ ಜಾರಿಯಲ್ಲಿತ್ತು. ಆದರೆ 2014 ರಿಂದ 2022 ರವರೆಗೆ, ಈ ಪ್ರವೃತ್ತಿಯು 93% ರಿಂದ 29% ಕ್ಕೆ ಕಡಿಮೆಯಾಗಿದೆ.

- ಪಿಎಂಎಲ್‌ಎ ಕಾಯ್ದೆಯಡಿ ಈವರೆಗೆ 23 ಮಂದಿಗೆ ಮಾತ್ರ ಶಿಕ್ಷೆಯಾಗಿದೆ. ಈ ಕಾನೂನಿನ ಅಡಿಯಲ್ಲಿ ಇಡಿ ದಾಖಲಿಸುವ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. 2013ರಲ್ಲಿ ಇಡಿ 209 ಪ್ರಕರಣಗಳನ್ನು ದಾಖಲಿಸಿತ್ತು. ಮತ್ತು 2020 ರಲ್ಲಿ 981 ಪ್ರಕರಣಗಳು ಮತ್ತು 2021 ರಲ್ಲಿ 1180 ಪ್ರಕರಣಗಳು ದಾಖಲಾಗಿವೆ.

-  2004 ಮತ್ತು 2014 ರ ನಡುವೆ, ಸಿಬಿಐ 72 ರಾಜಕೀಯ ನಾಯಕರನ್ನು ತನಿಖೆ ಮಾಡಿದೆ. ಅದರಲ್ಲಿ 43 ನಾಯಕರು ಆ ಸಮಯದಲ್ಲಿ ವಿರೋಧ ಪಕ್ಷಕ್ಕೆ ಸೇರಿದವರು, ಅದು 60% ಕ್ಕಿಂತ ಕಡಿಮೆ. ಆದರೆ ಈಗ ಈ ಅಂಕಿ ಅಂಶವು 95% ಕ್ಕೆ ಏರಿದೆ.

- ಇಡಿ ಕೂಡ ಈಗ ಸಿಬಿಐ ಮಾದರಿಯಲ್ಲಿ ಕೆಲಸ ಮಾಡುತ್ತಿದೆ. 2014 ರ ಮೊದಲು, ವಿರೋಧ ಪಕ್ಷಗಳ ನಾಯಕರ ವಿರುದ್ಧದ ಶೇಕಡಾವಾರು ಕ್ರಮವು 54% ಆಗಿತ್ತು, ಅದು ಈಗ 2014 ಮತ್ತು 2022 ರ ನಡುವೆ 95% ಕ್ಕಿಂತ ಹೆಚ್ಚಾಗಿದೆ.

ಅರ್ಜಿದಾರರ ಮನವಿ ಹೀಗಿದ್ದವು
- ರಾಜಕೀಯ ನಾಯಕರನ್ನು ಬಂಧಿಸಲು ಹಾಗೂ ನ್ಯಾಯಾಂಗ ಬಂಧನ ಪಡೆಯುವ ಮುನ್ನ ಇಡಿ ಹಾಗೂ ಸಿಬಿಐ ಮೂರು ಬಾರಿ ಪರಿಶೀಲನೆ ಮಾಡಬೇಕು.

- ಗಂಭೀರ ದೈಹಿಕ ಹಿಂಸೆಯನ್ನು ಹೊರತುಪಡಿಸಿ ಇತರ ಅಪರಾಧಗಳಲ್ಲಿ ಬಂಧನಗಳನ್ನು ನ್ಯಾಯಾಲಯಗಳು ನಿಷೇಧಿಸಬೇಕು.

ಕೋರ್ಟ್‌ ನಿರ್ಧರಿಸಿದರೆ ರಾಹುಲ್ ಗಾಂಧಿಯ ಶಿಕ್ಷೆಗೆ ತಡೆ ನೀಡಬಹುದು: ಅಮಿತ್ ಷಾ

- ಆರೋಪಿಯು ನಿಗದಿತ ಷರತ್ತುಗಳನ್ನು ಅನುಸರಿಸದಿದ್ದರೆ, ಆತನಿಗೆ ಕೆಲವು ಗಂಟೆಗಳ ವಿಚಾರಣೆ ಅಥವಾ ಗೃಹಬಂಧನಕ್ಕೆ ಅವಕಾಶ ನೀಡಬೇಕು.

ರಾಹುಲ್‌ ಗಾಂಧಿ ರೀತಿ ತತ್‌ಕ್ಷಣದ ಅರ್ನಹತೆ ಚುನಾಯಿತ ಪ್ರತಿನಿಧಿಯ ವಾಕ್‌ ಸ್ವಾತಂತ್ರ್ಯ ಕಸಿಯುತ್ತದೆ: ಸುಪ್ರೀಂಗೆ ಮೊರೆ

- ಜಾಮೀನು ವಿನಾಯಿತಿ ಎಂಬ ತತ್ವವನ್ನು ಇಡಿ ಮತ್ತು ಸಿಬಿಐ ಪ್ರಕರಣಗಳಲ್ಲಿಯೂ ನ್ಯಾಯಾಲಯಗಳು ಅನುಸರಿಸಬೇಕು. ಮೂರು ಬಾರಿ ಪರಿಶೀಲನೆಯನ್ನು ಮಾಡಿದಲ್ಲಿ ಮಾತ್ರವೇ ಅವರಿಗೆ ಜಾಮೀನು ನಿರಾಕರಿಸಬೇಕು

 

Follow Us:
Download App:
  • android
  • ios