Asianet Suvarna News Asianet Suvarna News

ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪನ, ಮತ್ತೆ ರಾಜಧಾನಿಯಲ್ಲಿ ಆತಂಕ!

ಆಫ್ಘಾನಿಸ್ತಾನದ ಹಿಂದು ಕುಶ್ ವಲಯದಲ್ಲಿ ಸಂಭವಿಸಿದ ತೀವ್ರ ಭೂಕಂಪನದಿಂದ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲ ಭೂಭಾಗಗಳು ಕಂಪಿಸಿದೆ. 

Earthquake magnitude 5 9 hit Afghanistan tremors felt in Delhi NCR and Jammu kashmir ckm
Author
First Published Jan 5, 2023, 9:22 PM IST

ನವದೆಹಲಿ(ಜ.05): ಆಫ್ಘಾನಿಸ್ತಾನದಲ್ಲಿ 5.9ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ ಬೆನ್ನಲ್ಲೇ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಹಲವೆಡೆ ಭೂಮಿ ಕಂಪಿಸಿದೆ. ಇಂದು ರಾತ್ರಿ 7.55ರ ಸುಮಾರಿಗೆ ಭೂಮಿ ಕಂಪಿಸಿದೆ. ದೆಹಲಿ, ರಾಷ್ಟ್ರ ರಾಜಧಾನಿ ವಲಯ, ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಭೂಮಿ ಕಂಪಿಸಿದೆ. ಆಫ್ಘಾನಿಸ್ತಾನದ ಹಿಂದೂ ಕುಶ್ ವಲಯದಲ್ಲಿ ಭೂಕಂಪನ ಮೂಲವಾಗಿದೆ. 200 ಕಿಲೋಮೀಟರ್ ಆಳದಿಂದ ಭೂಮಿ ಕಂಪಿಸಿದೆ. ಇದರ ಪರಿಣಾಮ ಭಾರತದಲ್ಲೂ ಭೂಕಂಪನ ಅನುಭವವಾಗಿದೆ. ಅದೃಷ್ಟವಶಾತ್ ದೆಹಲಿ ಸೇರಿದಂತೆ ಉತ್ತರ ಬಾರತದಲ್ಲಿ ಯಾವುದೇ ಅನಾಹುತ ಸಷ್ಟಿಸಿಲ್ಲ.

ಹೊಸ ವರ್ಷದಲ್ಲಿ ದೆಹಲಿಯಲ್ಲಿ 2ನೇ ಬಾರಿಗೆ ಭೂಮಿ ಕಂಪಿಸುತ್ತಿದೆ. ಜನವರಿ 1 ರಂದೇ ದೆಹಲಿಯಲ್ಲಿ ಭೂಕಂಪನ ಸಂಭವಿಸಿತ್ತು. 3.8ರ ತೀವ್ರತೆಯ ಲಘು ಭೂಕಂಪನ ಸಂಭವಿಸಿತ್ತು. ಹೊಸ ವರ್ಷದ ಮೊದಲ ದಿನವೇ ಭೂಕಂಪನ ಸಂಭವಿಸಿದ ಕಾರಣ, ಈ ವರ್ಷವಿಡಿ ಆತಂಕ ಮನೆ ಮಾಡಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರಂದೆ ಇದೀಗ ನಾಲ್ಕನೇ ದಿನಕ್ಕೆ ಮತ್ತೆ ದೆಹಲಿ ಕಂಪಿಸಿದೆ. ಜನವರಿ 1 ರಂದ ಮಧ್ಯ ರಾತ್ರಿ 1.19ಕ್ಕೆ ಲಘುವಾಗಿ ಭೂಮಿ ಕಂಪಿಸಿತು.

2022ರಲ್ಲಿ ವಿಜಯಪುರಕ್ಕೆ ಹೆಚ್ಚು ಕಾಡಿದ ಭೂಕಂಪನ, ಅತಿವೃಷ್ಟಿ..!

ಇದೀಗ ಆಫ್ಘಾನಿಸ್ತಾನದ ಭೂಕಂಪನ ತೀವ್ರತೆ ಭಾರತಕ್ಕೂ ತಟ್ಟಿದೆ. ಆಫ್ಘಾನಿಸ್ತಾನದಲ್ಲಿ ಮತ್ತೆ ಭೂಮಿ ಕಂಪಿಸುವ ಸಾಧ್ಯತೆ ಇದೆ. ಹೀಗಾಗಿ ದೆಹಲಿಯಲ್ಲೂ ಆತಂಕ ಮನೆ ಮಾಡಿದೆ. ಇಂದು ರಾತ್ರಿ 7.55ಕ್ಕೆ ಭೂಮಿ ಕಂಪಿಸಲು ಆರಂಭವಾಗುತ್ತಿದ್ದಂತೆ ಹಲವರು ಮನೆಯಿಂದ ಹೊರಗಡೆ ಬಂದಿದ್ದಾರೆ. ಕಚೇರಿಗಳಿಂದ ಹೊರಬಂದಿದ್ದಾರೆ. ಕೆಲ ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ. ಆದರೆ ಆತಂಕ ಈಗಲೂ ಮನೆ ಮಾಡಿದೆ.

2022ರ ನವೆಂಬರ್ ತಿಂಗಳಲ್ಲಿ ಆಫ್ಘಾನಿಸ್ತಾನ ಹಾಗೂ ನೇಪಾಳ ವಲಯದಲ್ಲಿ ಒಂದರ ಮೇಲೊಂದರಂತೆ ಭೂಮಿ ಕಂಪಿಸಿತ್ತು. ಇದರ ಪರಿಣಾಮ ಭಾರತದ ದೆಹಲಿ, ಉತ್ತರಖಂಡ ಸೇರಿದಂತೆ ಹಲವು ಭಾಗದಲ್ಲಿ ಭೂಕಂಪನವಾಗಿತ್ತು.  ನೇಪಾಳ, ರಾಷ್ಟ್ರ ರಾಜಧಾನಿ ದೆಹಲಿ, ಸುತ್ತಮುತ್ತ, ಉತ್ತರಾಖಂಡ ಸೇರಿ ಹಲವು ಕಡೆ 2022ರ ನವೆಂಬರ್ ತಿಂಗಳಲ್ಲಿ  ಭೂಕಂಪನ ಅನುಭವವಾಗಿತ್ತು. ಆದರೆ ಯಾವುದೇ ಹಾನಿ ಸಂಭವಿಸಿಲ್ಲ.

ಜಿ20 ಶೃಂಗಸಭೆ ಮುಗಿಸಿದ ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪನ, 6.9 ತೀವ್ರತೆಯಲ್ಲಿ ಕಂಪಿಸಿದ ಭೂಮಿ!

ಇದಲ್ಲದೆ, ನೋಯ್ಡಾ, ಗುರುಗ್ರಾಮ ಸೇರಿದಂತೆ ಹಲವೆಡೆ ಭೂಕಂಪನದ ಅನುಭವವಾಗಿದೆ. ರಿಕ್ಟರ್‌ ಮಾಪನದಲ್ಲಿ 5.4 ತೀವ್ರತೆ ಹೊಂದಿದ್ದಾಗಿ ತಿಳಿದುಬಂದಿದೆ. ನೇಪಾಳದಲ್ಲಿ ಕಳೆದ ಒಂದು ವಾರದಲ್ಲಿ ಸಂಭವಿಸಿದ ನಂತರದ 3ನೇ ಭೂಕಂಪನ ಇದಾಗಿದೆ. ಶನಿವಾರ ಮತ್ತೆ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದೇ ತಿಂಗಳಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪ 6 ಜನರನ್ನು ಬಲಿ ಪಡೆದಿತ್ತು.

ತಿಕೋಟಾದಲ್ಲಿ ಲಘು ಭೂಕಂಪನ
ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ 2022ರ ನವೆಂಬರ್ ತಿಂಗಳಲ್ಲಿ ಲಘು ಭೂಕಂಪನದ ಅನುಭವವಾಗಿತ್ತು.  ಜನರು ಬೆಚ್ಚಿ ಬಿದ್ದು ಮನೆಯಿಂದ ಹೊರ ಬಂದಿದ್ದರು. ನಸುಕಿನ ಜಾವ 3 ಗಂಟೆಯಿಂದ 5 ಗಂಟೆವರೆಗೆ ಪದೇಪದೇ ಭೂಮಿ ಕಂಪನ ಉಂಟಾಗಿದ್ದು, ಜನರು ಗಾಬರಿಯಿಂದ ಮನೆಯಿಂದ ಹೊರಗಡೆ ಓಡಿ ಬಂದಿದ್ದರು. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ವಿವಿಧೆಡೆ ಲಘು ಭೂಕಂಪನದ ಘಟನೆ ಮರುಕಳಿಸುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸಿತ್ತು.

Follow Us:
Download App:
  • android
  • ios