Asianet Suvarna News Asianet Suvarna News

Breaking ದೆಹಲಿಯಲ್ಲಿ ಮತ್ತೆ ಭೂಕಂಪ, ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆ ದಾಖಲು!

ನಿನ್ನೆ ರಾತ್ರಿ ಭೂಕಂಪದಿಂದ ಆತಂಕಕ್ಕೊಳಗಾಗಿದ್ದ ದೆಹಲಿಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಇಂದು ಸಂಜೆ ಭೂಮಿ ಕಂಪಿಸಿದ ಅನುಭವವಾಗಿದೆ. 
 

Earthquake in Delhi NCR region again 2 3 magnitude tremors felt in Capital city of India ckm
Author
First Published Mar 22, 2023, 6:58 PM IST

ನವದೆಹಲಿ(ಮಾ.22): ಆಫ್ಘಾನಿಸ್ತಾನದ ಹಿಂದುಕುಷ್‌ನಲ್ಲಿ ನಿನ್ನೆ(ಮಾ.21) ರಾತ್ರಿ ಸಂಭವಿಸಿದ ಭೂಕಂಪದಿಂದ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭೂಪಂಕನವಾಗಿತ್ತು. ಈ ಆತಂಕದಿಂದ ಹೊರಬರುವ ಮುನ್ನವೇ ಇಂದು ಮತ್ತೆ ದೆಹಲಿಯಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 2.2 ತೀವ್ರತೆ ದಾಖಲಾಗಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಮನೆಯಿಂದ ಹೊರಗೋಡಿದ್ದಾರೆ. ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದವರೂ ಹೊರಬಂದಿದ್ದಾರೆ. ಇದೀಗ ದೆಹಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ದೆಹಲಿಯಲ್ಲಿ ಇಂದು ಪದ್ಮ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ನಡೆಯುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿದ್ದ ವೇಳೆಯೂ ಇತ್ತ ರಾಜಧಾನಿ ವ್ಯಾಪ್ತಿ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ. 

ಹಲವರು ಮನೆಯಲ್ಲಿನ ವಸ್ತುಗಳು ಕೆಳಕ್ಕೆ ಬಿದ್ದಿವೆ. ಭೂಕಂಪನ ಅನಭವವಾಗುತ್ತಿದ್ದಂತೆ ಜನರು ಹೊರಬಂದಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಿ ಜನರು ಧಾವಂತದಿಂದ ಹೊರಬಂದಿದ್ದಾರೆ. ಇದೀಗ ದೆಹಲಿ ಹಾಗೂ ಉತ್ತರ ಭಾರತದಲ್ಲಿ ಆತಂಕದ ವಾತಾರವಣರ ನಿರ್ಮಾಣವಾಗಿದೆ. 

ನಿನ್ನೆ ರಾತ್ರಿ ದೆಹಲಿಯಲ್ಲಿ ಕಂಪಿಸಿದ್ದ ಭೂಮಿ
ರಿಕ್ಟರ್‌ ಮಾಪಕದಲ್ಲಿ 6.6ರಷ್ಟುಭಾರೀ ತೀವ್ರತೆ ಹೊಂದಿದ್ದ ಭೂಕಂಪವೊಂದು ಮಂಗಳವಾರ ರಾತ್ರಿ(ಮಾ.21) ಸಂಭವಿಸಿತ್ತು. ಭೂಕಂಪನದ ಕೇಂದ್ರಬಿಂದು ಆಷ್ಘಾನಿಸ್ತಾನದ ಹಿಂದುಕುಷ್‌ ಪರ್ವತದಲ್ಲಿತ್ತು ಎಂದು ಮೂಲಗಳು ತಿಳಿಸಿವೆ. ಭೂಕಂಪ ಭಾರೀ ತೀವ್ರತೆ ಹೊಂದಿದ್ದ ಕಾರಣ ಅದರ ಅನುಭವ ನೆರೆಹೊರೆಯ ದೇಶಗಳಾದ ತುರ್ಕೇಮೇನಿಸ್ತಾನ, ಭಾರತ, ಕಜಕಿಸ್ತಾನ, ಪಾಕಿಸ್ತಾನ, ಉಜ್ಬೇಕಿಸ್ತಾನ, ಚೀನಾ, ಆಷ್ಘಾನಿಸ್ತಾನ ಮೊದಲಾದ ದೇಶಗಳಲ್ಲಿ ಆಗಿದೆ. ಮಂಗಳವಾರ ರಾತ್ರಿ 10.17ರ ವೇಳೆಗೆ ಭೂಕಂಪ ಸಂಭವಿಸಿದ್ದು, ಈ ವೇಳೆ ಮನೆ, ಕಚೇರಿಯೊಳಗಿದ್ದ ಸಾವಿರಾರು ಜನರು ಹೊರಗೆ ಓಡಿಬಂದು ರಸ್ತೆಯಲ್ಲಿ ಆತಂಕಿತರಾಗಿ ನಿಂತಿದ್ದ ದೃಶ್ಯಗಳು ದೆಹಲಿ, ಪಂಜಾಬ್‌, ಹರ್ಯಾಣ,ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿ ಕಂಡುಬಂದಿತು. ಸುಮಾರು ಒಂದು ನಿಮಿಷಗಳ ಕಾಲ ಭೂಮಿ ನಡುಗಿದ ಅನುಭವ ಆಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.

Follow Us:
Download App:
  • android
  • ios