ಚೆನ್ನೈ(ಅ.10): ತಮಿಳುನಾಡಿನಲ್ಲಿ ನಡೆದ ಸಭೆಯಲ್ಲಿ ಪಂಚಾಯತಿ ನಾಯಕಿಯನ್ನು ನೆಲದ ಮೇಲೆ ಕುಳ್ಳಿರಿಸಿದ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಸಭೆಯ ಫೋಟೋ ಒಂದು ಭಾರೀ ವೈರಲ್ ಆಗುತ್ತಿದ್ದು, ಇದರಲ್ಲಿ ಓರ್ವ ಮಹಿಳಾ ನಾಯಕಿ ನೆಲದ ಮೇಲೆ ಕುಳಿತಿದ್ದು, ಉಳಿದವರೆಲ್ಲರೂ ದೂರದಲ್ಲಿ ಕುರ್ಚಿ ಮೇಲೆ ಕುಳಿತುಕೊಂಡಿರುವ ದೃಶ್ಯವಿದೆ.

ಇನ್ನು ಲಭ್ಯವಾದ ಮಾಹಿತಿ ಅನ್ವಯ ನೆಲದಲ್ಲಿ ಕುಳಿತ ಆ ಮಹಿಳೆ ಈ ಸಭೆಯ ಅಧ್ಯಕ್ಷತೆ ವಹಿಸಬೇಕಿತ್ತು. ಇನ್ನು ಈ ವಿಚಾರ ಬಯಲಾಗುತ್ತಿದ್ದಂತೆಯೇ ಜನರು ಆಕ್ರೋಶಿತರಾಗಿದ್ದಾರೆ. ಅಲ್ಲದೇ ಇದು ಸಮಾಜದ ತಳಮಟ್ಟದಿಂದ ಆವರಿಸಿಕೊಂಡಿರುವ ಭೇದ ಭಾವ ಎಂಬ ಪದ್ದತಿಯನ್ನು ಅನಾವರಣಗೊಳಿಸಿದೆ. 

ಪ್ರೀತಿಸಿ ಮದುವೆಯಾದ 35ರ ದಲಿತ ಶಾಸಕ, 19ರ ಬ್ರಾಹ್ಮಣ ಯುವತಿ

ಈ ಘಟನೆ ತಮಿಳುನಾಡಿನ ಕುಡ್ಡಾಲೋರ್‌ನಲ್ಲಿ ನಡೆದಿದೆ. ಕುಡ್ಡಾಲೋರ್‌ ಜಿಲ್ಲೆಯ ಕಲೆಕ್ಟರ್ ಈ ಪ್ರಕರಣ ಬೆಳಕಿಗೆ ಬಂದ ಚೆನ್ನಲ್ಲೇ ಪಂಚಾಯತಿ ಕಾರ್ಯದರ್ಶಿಯನ್ನು ಪದಚ್ಯುತಿಗೊಳಿಸಿಸುವ ಆದೇಶ ಹೊರಡಿಸಿದ್ದಾರೆ. 

ಇನ್ನು ಫೋಟೋದಲ್ಲಿ ನೆಲದ ಮೇಲೆ ಕುಳಿತ ಮಹಿಳೆ ಥೆರುಕು ಥಿಟ್ಟಿ ಎಂಬ ಹಳ್ಳಿಯ ಪಂಚಾಯತಿ ಅಧ್ಯಕ್ಷೆಯಾಗಿದ್ದಾರೆ. ಅವರು ಹಿಂದುಳಿದ ವರ್ಷವಾದ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅವರು ಈ ಹುದ್ದೆಗೆ ಆಯ್ಕೆಯಾಗಿದ್ದರು.

ದಲಿತರ ಮನೆಯಲ್ಲಿ ಸಹಭೋಜನ

ನನ್ನ ಜಾತಿಯಿಂದಾಗಿ ಉಪಾಧ್ಯಕ್ಷರು ನನಗೆ ಸಭೆಯ ಅಧ್ಯಕ್ಷತೆ ವಹಿಸುವ ಅವಕಾಶ ನೀಡಲಿಲ್ಲ. ಅಲ್ಲದೇ ಬಾವುಟ ಹಾರಿಸಲೂ ಬಿಡಲಿಲ್ಲ. ಅಅವರು ತನ್ನ ತಂದೆಯಿಂದ ಈ ಕೆಲಸ ಮಾಡಿಸಿದರು. ಆದರೆ ನಾನು ಈ ಹಿಂದೆಯೂ ಮೇಲ್ಜಾತಿಯವರೊಂದಿಗೆ ಮಾತುಕತೆ ನಡೆಸುತ್ತಾ ಬಂದಿದ್ದೇನೆ ಎಂದಿದ್ದಾರೆ.